ETV Bharat / state

'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ ಪ್ರಶ್ನಿಸಿ ಪಿಐಎಲ್: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಕಾವೇರಿ ಕೂಗು ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್​ನ ಮುಖ್ಯ ವಿಭಾಗೀಯ ಪೀಠ ಇಂದು ನಡೆಸಿತು.

Cauvery Calling Cash Collection Issue: High Court Reserves Judgment
ಹೈಕೋರ್ಟ್
author img

By

Published : Sep 1, 2021, 8:33 PM IST

ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ ಮುಖ್ಯಸ್ಥಿಕೆಯ ಈಶ ಫೌಂಡೇಶನ್ ಕಾವೇರಿ ನದಿ ತಪ್ಪಲಿನಲ್ಲಿ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿರುವ ‘ಕಾವೇರಿ ಕೂಗು’ ಯೋಜನೆಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಹಣ ಸಂಗ್ರಹ ಪ್ರಶ್ನಿಸಿ ವಕೀಲ ಎ.ವಿ.ಅಮರನಾಥ್ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿತ್ತು. ಈ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್‌ಚಂದ್ರ ಶರ್ಮ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಸರ್ಕಾರ ಹಾಗೂ ಅಮಿಕಸ್ ಕ್ಯೂರಿ ವಾದ-ಪ್ರತಿವಾದಗಳನ್ನು ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಪ್ರಶ್ನಿಸಿದ ಪೀಠ, ಯೋಜನೆಗೆ ಹಣ ಸಂಗ್ರಹಿಸುತ್ತಿರುವುದು ಸ್ವಯಂಪ್ರೇರಿತವೋ, ಕಡ್ಡಾಯವೋ? ಸರ್ಕಾರಿ ಜಾಗದಲ್ಲಿ ಗಿಡ ನೆಡುವುದು ಅಪರಾಧವೇ? ಅದನ್ನು ತಡೆಯುವುದಕ್ಕೆ ಯಾವ ಕಾನೂನು ಇದೆ? ಎಂದು ಪ್ರಶ್ನಿಸಿತು. ಅಮಿಕಸ್ ಕ್ಯೂರಿ ಉತ್ತರಿಸಿ ಹಣ ಸಂಗ್ರಹ ಸ್ವಯಂಪ್ರೇರಿತ, ಸರ್ಕಾರಿ ಜಾಗದಲ್ಲಿ ಗಿಡ ನೆಡಬಹುದು, ಆದರೆ, ಅನುಮತಿ ಪಡೆಯಬೇಕು ಎಂದರು.

ಇದಕ್ಕ ಪ್ರತಿಕ್ರಿಯಿಸಿದ ಪೀಠ ಪ್ರತಿವಾದಿಯಾದ ಈಶ ಫೌಂಡೇಶನ್ ಟ್ರಸ್ಟ್ ಆಗಿರುವುದರಿಂದ ಅದು ಸಂಗ್ರಹಿಸುವ ಹಣ ಮತ್ತು ಖರ್ಚು ಮಾಡುವ ಹಣಕ್ಕೆ ಲೆಕ್ಕಪತ್ರವಿರುತ್ತದೆ, ಒಂದು ವೇಳೆ ಏನಾದರೂ ವ್ಯತ್ಯಾಸವಾದರೆ ಅದನ್ನು ಪರಿಶೀಲಿಸಲು ಆದಾಯ ಇಲಾಖೆ ಮತ್ತಿತರ ಸಂಸ್ಥೆಗಳಿವೆ, ಹಾಗಾಗಿ ಹಣ ದುರುಪಯೋಗವಾಗುವ ಸಾಧ್ಯತೆ ಕಡಿಮೆ ಎಂದಿತು.

ಫೌಂಡೇಶನ್ ಪರ ವಾದಿಸಿದ ವಕೀಲರು, ಕಾವೇರಿ ನದಿ ಪುನರುಜ್ಜೀವನಕ್ಕಾಗಿ ಫೌಂಡೇಷನ್ ‘ಕಾವೇರಿ ಕೂಗು’ ಯೋಜನೆ ಹಮ್ಮಿಕೊಂಡಿದ್ದು, ದಾನಿಗಳಿಂದ ಪ್ರತಿ ಗಿಡಕ್ಕೆ 42 ರೂ. ಸಂಗ್ರಹಿಸುತ್ತಿದ್ದು, ನದಿ ಪಾತ್ರದ 27 ಜಿಲ್ಲೆಗಳಲ್ಲಿ ಮರ ಬೆಳಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ಅಮಿಕಸ್ ಕ್ಯೂರಿ ವಾದಿಸಿ, ನದಿ ಪಾತ್ರದ ಅರಣ್ಯ ಭೂಮಿಯಲ್ಲಿ ಮರ ಬೆಳೆಸಲು ಸರ್ಕಾರ ಈಗಾಗಲೇ ಹಣ ಮೀಸಲಿಟ್ಟಿದೆ. ಈಶ ಫೌಂಡೇಷನ್ ಗಿಡವೊಂದಕ್ಕೆ 42 ರೂ.ನಂತೆ ಸುಮಾರು 10 ಸಾವಿರ ಕೋಟಿ ಹಣ ಸಂಗ್ರಹಿಸಲು ಮುಂದಾಗಿದೆ. ಯೋಜನೆಗೆ ಅಷ್ಟೊಂದು ಹಣ ಅಗತ್ಯವಿಲ್ಲ. ಸಾವಿರಾರು ಕೋಟಿ ಸಂಗ್ರಹವಾದರೆ ದುರುಪಯೋಗ ಆಗಬಹುದು, ಅದಕ್ಕೆ ಫೌಂಡೇಷನ್​ನಿಂದ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದರು.

ಇದಕ್ಕೆ ಆಕ್ಷೇಪಿಸಿದ ಫೌಂಡೇಶನ್ ಪರ ವಕೀಲರು, ಅರಣ್ಯ ನಾಶದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ, ಮರ ಬೆಳೆದರೆ ಮಳೆ ಹೆಚ್ಚುತ್ತದೆಂಬ ಸದುದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 82 ಕೋಟಿ ಹಣ ಸಂಗ್ರಹಿಸಲಾಗಿದೆ. ಪಬ್ಲಿಕ್ ಟ್ರಸ್ಟ್ ಆಗಿರುವುದರಿಂದ ದುರುಪಯೋಗ ಸಾಧ್ಯವಿಲ್ಲ. ಯೋಜನೆ ಶ್ಲಾಘಿಸಿ ಈಶ ಫೌಂಡೇಶನ್​​ಗೆ ಪ್ರಶಸ್ತಿಗಳು ಸಿಕ್ಕಿವೆ. ಆದ್ದರಿಂದ ಪಿಐಎಲ್ ವಜಾಗೊಳಿಸಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು, ಕಾವೇರಿ ಕೂಗು ಸರ್ಕಾರದ ಯೋಜನೆಯಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಈಶ ಫೌಂಡೇಷನ್ ಸಲ್ಲಿಸಿದ್ದ ಪ್ರಸ್ತಾವಕ್ಕೂ ಸರ್ಕಾರ ಒಪ್ಪಿಗೆ ನೀಡಿಲ್ಲ. ಸರ್ಕಾರವೇ ನದಿ ಪಾತ್ರದಲ್ಲಿ ಅರಣ್ಯಾಭಿವೃದ್ಧಿಗೆ ಕ್ರಮ ಕೈಗೊಂಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.