ಬೆಂಗಳೂರು: ಕ್ಯಾಟ್ ಪ್ರಿಯರಿಗಾಗಿ ಇಂದು ನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿಯ ಖಾಸಗಿ ಹೊಟೇಲ್ನಲ್ಲಿ ಫಿಲೈನ್ ಕ್ಲಬ್ ಆಫ್ ಇಂಡಿಯಾ ವತಿಯಿಂದ ಕ್ಯಾಟ್ ಶೋ ಏರ್ಪಡಿಸಲಾಗಿತ್ತು. ಈ ಕ್ಯಾಟ್ ಶೋನಲ್ಲಿ ದೇಶ- ವಿದೇಶಗಳ ಕ್ಯಾಟ್ಗಳು ಜನರ ಗಮನ ಸೆಳೆದವು.
ಈ ಕ್ಯಾಟ್ ಶೋಗೆ ವಿವಿಧ ತಳಿಗಳ ಬೆಕ್ಕುಗಳನ್ನು ಬೆಕ್ಕಿನ ಪ್ರಿಯರು ಕರೆತಂದಿದ್ದರು. ಉದ್ದ ಕೂದಲಿನ, ಚಿರತೆ ಮೈ ಬಣ್ಣದ ಬೆಕ್ಕುಗಳು ಬೆಕ್ಕಿನ ಪ್ರಿಯರ ಗಮನ ಸೆಳೆದವು. ಇನ್ನು ಈ ಕ್ಯಾಟ್ ಶೋಗೆ ಸುಮಾರು 150ಕ್ಕೂ ಹೆಚ್ಚಿನ ತಳಿಯ ಬೆಕ್ಕುಗಳು ಬಂದಿದ್ದು ವಿಶೇಷವಾಗಿತ್ತು. ಇಂದು ಭಾನುವಾರ ಆಗಿದ್ದರಿಂದ ಬೆಕ್ಕು ಪ್ರಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಕ್ಯಾಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತ ವೀಕೆಂಡ್ನಲ್ಲಿ ಎಂಜಾಯ್ ಮಾಡಿದ್ರು.
ಅಲ್ಲದೇ ಕ್ಯಾಟ್ ಶೋನಲ್ಲಿ ಬೆಕ್ಕಿನ ಆಹಾರ, ಬೆಡ್ಗಳು ಹಾಗೂ ಮೆಡಿಷನ್ ಶಾಪ್ಗಳು ಕೂಡ ಇದ್ದವು. ಬೆಕ್ಕನ್ನು ಸಾಕಿದ್ದವರು ಪ್ರೀತಿಯ ಕ್ಯಾಟ್ಗಳಿಗೆ ಬೇಕಾದ ಬೆಡ್ ಹಾಗೂ ಫುಡ್ಗಳನ್ನು ಭರ್ಜರಿಯಾಗಿ ಖರೀದಿಸಿದರು.