ETV Bharat / state

ಚುನಾವಣಾ ಆಯೋಗದಿಂದ ಜಪ್ತಿಯಾಗಿರುವ ನಗದು, ಮದ್ಯ, ವಸ್ತುಗಳ ಮಾಹಿತಿ

ಚುನಾವಣೆಯಲ್ಲಿ ಅಕ್ರಮ ತಡೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ.

cash seized by Election Commission
ಆಯೋಗದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ನಗದು ಜಪ್ತಿ ಮಾಡಿರುವ ಚಿತ್ರ
author img

By

Published : Apr 13, 2023, 10:46 PM IST

ಬೆಂಗಳೂರು: ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಏ.13ರ ವರೆಗಿನ ಅಂಕಿಅಂಶ ಗಮನಿಸಿದಾಗ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 57,36,66,634 ರೂ. ನಗದು ವಶಪಡಿಸಿಕೊಂಡಿವೆ. ಇದರ ಜತೆ 17,93,66,570 ಮೊತ್ತದ ಉಚಿತ ಕೊಡುಗೆಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 32,00,17,556 ರೂ. ಮೌಲ್ಯದ 6,88,041.87 ಲೀಟರ್ ಮದ್ಯ ವಶಪಡಿಸಿಕೊಂಡಿವೆ.
13,20,26,461 ಮೌಲ್ಯದ 577.90 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ. ಬಾಳುವ ಲೋಹಗಳನ್ನು ಗಮನಿಸಿದರೆ 53.28 ಕೆಜಿ ತೂಕದ ಚಿನ್ನ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 21,27,39,747 ರೂ. ವಶಪಡಿಸಿಕೊಳ್ಳಲಾಗಿದೆ. 427.07 ಕೆಜಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇದರ ಮೊತ್ತ 23,83,22,844 ರೂ. ಆಗಿದೆ.

ಪ್ರಕರಣ ದಾಖಲು: ನಗದು,ಮದ್ಯ,ಮಾದಕ ದ್ರವ್ಯ,ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್‌ ಅಧಿಕಾರಿಗಳು 1,182 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 65,245 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 3,342 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 5,061 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಚುನಾವಣೆ ಘೋಷಣೆ ದಿನದಿಂದ ಇಲ್ಲಿಯವರೆಗೆ 8,888 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ.

ಅಬಕಾರಿ ಇಲಾಖೆಯು 1,442 ಗಂಭೀರ ಪ್ರಕರಣಗಳನ್ನು ಹಾಗೂ 1,029 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, 53 ಎನ್‌ಡಿಪಿಎಸ್‌ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 5,280 ಪ್ರಕರಣಗಳನ್ನು ದಾಖಲಿಸಿದೆ ಮತ್ತು 949 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ವಿಶೇಷ ವರದಿ:ವಿಚಕ್ಷಣ ದಳವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ರೂ. 34,00,000 ನಗದು ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ತಂಡವು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭೆ ಕ್ಷೇತ್ರದಲ್ಲಿ ರೂ. 24,99,910 ನಗದು ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ತಂಡವು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭೆ ಕ್ಷೇತ್ರದಲ್ಲಿ ರೂ. 40,00,000 ನಗದು ವಶಪಡಿಸಿಕೊಂಡಿದೆ.

ಸಾರ್ವಜನಿಕ ಕುಂದುಕೊರತೆ ಇತ್ಯರ್ಥ: ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 6,097 ಕರೆಗಳಲ್ಲಿ 5,981 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 18 ಜನರು ಪ್ರತಿಕ್ರಿಯೆ (ಫೀಡ್‌ಬ್ಯಾಕ್‌) ನೀಡಿದ್ದಾರೆ. 19 ಜನರು ಸಲಹೆಗಳನ್ನು ನೀಡಿದ್ದಾರೆ. 79 ಜನರು ದೂರುಗಳನ್ನು ದಾಖಲಿಸಿದ್ದಾರೆ. ಕರೆಗಳ ಮೂಲಕ ಸ್ವೀಕರಿಸಿದ ಎಲ್ಲಾ 6,097 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೇ ಎನ್‌ಜಿಆರ್‌ಎಸ್‌ ಪೋರ್ಟ್‌ನಲ್ಲಿ 4,252 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು ಇವುಗಳಲ್ಲಿ 3,987 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ ವಿಜಿಲ್‌: ಸಿ ವಿಜಿಲ್‌ ಅಪ್ಲೀಕೇಷನ್‌ ಮೂಲಕ 2,608 ದೂರು ಸ್ವೀಕರಿಸಲಾಗಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪರವಾನಿಗೆ ಇಲ್ಲದ ಪೋಸ್ಟರ್‌/ಬ್ಯಾನರ್‌ ಅಂಟಿಸಿದ ಪ್ರಕರಣಗಳು 1,523, ಹಣ ಹಂಚಿಕೆ ಪ್ರಕರಣಗಳು 26, ಕಡ್ಡಾಯ ಮಾಡಬೇಕಾದಲ್ಲದ ಪೋಸ್ಟರ್‌ ಪ್ರಕರಣಗಳು 94, ಬಂದೂಕುಗಳ ಪ್ರದರ್ಶಿಸಿ ಬೆದರಿಸಿದ ಪ್ರಕರಣಗಳು 24, ಉಡುಗೊರೆ, ಕೂಪನ್‌ ಹಂಚಿಕೆ ಪ್ರಕರಣಗಳು 33, ಮದ್ಯ ಹಂಚಿಕೆ ಪ್ರಕರಣಗಳು 20, ಆಸ್ತಿ ಹಾನಿಗೊಳಿಸಿದ ಪ್ರಕರಣಗಳು 114, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ ಪ್ರಕರಣಗಳು 32 ದಾಖಲಾಗಿದ್ದು, ಈ ಪೈಕಿ 2,173 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಮಾಧ್ಯಮ: ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇಮೇಲ್‌ ಮೂಲಕ 158 ಮತ್ತು ಪತ್ರಗಳ ಮೂಲಕ 175, ಸುದ್ದಿಪತ್ರಿಕೆಗಳಿಂದ 47, ಟಿ.ವಿ ಚಾನಲ್‌ಗಳಿಂದ 33 ಮತ್ತು ಸಾಮಾಜಿಕ ಜಾಲತಾಣಗಳಿಂದ 46 ಸೇರಿದಂತೆ ಒಟ್ಟು 459 ದೂರುಗಳು ಬಂದಿದ್ದು, 286 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸುವಿಧಾ: ಸುವಿಧಾ ಅಡಿಯಲ್ಲಿ ವಿವಿಧ ಅನುಮತಿಗಳನ್ನು ಕೋರಿ ಇವರೆಗೆ ಒಟ್ಟು 3,968 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 2,537 ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, 1001 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 16 ಅರ್ಜಿಗಳು ಪ್ರಗತಿಯಲ್ಲಿವೆ. 302 ಬಾಕಿ ಉಳಿದಿದ್ದು, 112 ಅರ್ಜಿಗಳು ರದ್ದಾಗಿರುತ್ತವೆ.

ಇದನ್ನೂಓದಿ: ಮಂಡ್ಯ ಚುನಾವಣಾ ರಾಯಭಾರಿಯಾಗಿ ನಟ ನೀನಾಸಂ ಸತೀಶ್: ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.