ಬೆಂಗಳೂರು: ಗಾಂಜಾ ಕೇಸ್ ಎಲ್ಲೆಡೆ ಸದ್ದು ಮಾಡುತ್ತಿರುವ ಕಾರಣ, ಗಾಂಜಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗಾಂಜಾ ಮತ್ತಿನಲ್ಲಿ ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಹ್ಮದ್ ಖುರೇಷಿ, ಸೈಯದ್ ಸಾಧಿಕ್ ಹಾಗೂ ಓರ್ವ ಬಾಲಕನ ಮೇಲೆ ಈ ಕಾಯ್ದೆಯಡಿ ದೂರು ದಾಖಲಾಗಿದ್ದು, ಈ ಕಾಯ್ದೆ ಡ್ರಗ್ ಪೆಡ್ಲರ್ಗಳ ಮೇಲೆ ಹಾಕಲಾಗುತ್ತದೆ.
ಆಗಸ್ಟ್ 30ರಂದು ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಬೈಕ್ನಲ್ಲಿ ಆರೋಪಿಗಳು ಸಂಚರಿಸುತ್ತಿದ್ದರು. ಇನ್ನು ಬೈಕ್ ತಡೆದು ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾಧರ್ ಪ್ರಶ್ನೆ ಮಾಡಿದ್ದರು. ಈ ವೇಳೆ ಗಾಂಜಾ ಮತ್ತಲ್ಲಿದ್ದ ಆರೋಪಿಗಳು ಏಕಾಏಕಿ ಕಾನ್ಸ್ಟೇಬಲ್ ವಿದ್ಯಾಧರ್ಗೆ ಥಳಿಸಿ ಪರಾರಿಯಾಗಲು ಯತ್ನಿಸಿದ್ದರು.
ಇನ್ನು ಆರೋಪಿಗಳನ್ನು ಸ್ಥಳಿಯರ ನೆರವಿನಿಂದ ವಶಕ್ಕೆ ಪಡೆದಿದ್ದ ವಿಜಯನಗರ ಪೊಲೀಸರು ಪರಿಶೀಲನೆ ಮಾಡಿದಾಗ ಬಂಧಿತರ ಜೇಬಿನಲ್ಲಿ ಗಾಂಜಾ ಪತ್ತೆಯಾಗಿತ್ತು.