ETV Bharat / state

ಪ್ರೀತಿಸುವಂತೆ ಯುವತಿಗೆ ಕಿರುಕುಳ; ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲು

ಪ್ರೀತಿಸುವಂತೆ ಯುವತಿಯ ಬೆನ್ನ ಹಿಂದೆ ಬಿದ್ದು ಕಾಡುತ್ತಿದ್ದ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

case-filed-against-youth-for-compelling-to-love-him
ಐ ಲವ್ ಯು, ಯು ಮಸ್ಟ್ ಮ್ಯಾರಿ ಮೀ ಎಂದು ಯುವತಿ ಹಿಂದೆಬಿದ್ದ ಪಾಗಲ್ ಪ್ರೇಮಿ : ಪ್ರಕರಣ ದಾಖಲು
author img

By

Published : Feb 22, 2023, 6:47 PM IST

ಬೆಂಗಳೂರು : ಪ್ರತಿಷ್ಠಿತ ಇಸ್ರೋ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದ ಯುವತಿಯ ಹಿಂದೆ ಬಿದ್ದು ಲವ್ ಮಾಡುವಂತೆ ಪೀಡಿಸುತ್ತಿದ್ದ ಪಾಗಲ್‌ ಪ್ರೇಮಿಯೊಬ್ಬನ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ಮಾರಿಯಪ್ಪನ್​ ಎಂಬಾತನ ವಿರುದ್ದ ಎಫ್ಐಆರ್ ದಾಖಲಾಗಿದೆ.

ಉತ್ತರ ಭಾರತ ಮೂಲದ ಯುವತಿ ಕೆಲ ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದರು. ಕಳೆದ ವರ್ಷ ಮಾರಿಯಪ್ಪನ್ ಎಂಬಾತ ಯುವತಿಯನ್ನು ಹೇಗೋ ಪರಿಚಯಿಸಿಕೊಂಡು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಅಷ್ಟೇ ಅಲ್ಲದೆ ರೋಜ್ ಕೊಟ್ಟು ಪ್ರಪೋಸ್ ಕೂಡ ಮಾಡಿದ್ದ. ಆದರೆ ಯುವತಿ ಮಾತ್ರ ಈತನ ಪ್ರೀತಿಯನ್ನು ನಿರಾಕರಿಸಿದ್ದಳು. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿ ಯುವತಿಗೆ ಕಿರುಕುಳ ನೀಡಲು‌ ಆರಂಭಿಸಿದ್ದ‌‌.‌ ಇದರಿಂದ ಬೇಸತ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ಆರೋಪಿ ಮಾರಿಯಪ್ಪನ್​ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ಇದಾದ ಬಳಿಕ ಜಾಮೀನಿನ ಮೇಲೆ ಹೊರಬಂದ ಮಾರಿಯಪ್ಪನ್, ಮತ್ತೆ ಐ ಲವ್ ಯು, ಮ್ಯಾರಿ ಮಿ ಎಂದು ಯುವತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಜೊತೆಗೆ ಕೆಲಸದಿಂದ ಬರುವಾಗ ಯುವತಿಯ ಸ್ಕೂಟಿ ಅಡ್ಡಗಟ್ಟಿ ಲವ್ ಮಾಡು ಎಂದು ಪೀಡಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಸ್ಕೂಟಿಯನ್ನು ಎಳೆದಾಡಿದ್ದಾನೆ. ಈ ಸಂಬಂಧ ಯುವತಿಯು ಮಾನಸಿಕ‌ ಕಿರುಕುಳ‌ ನೀಡುತ್ತಿರುವುದಾಗಿ ಆರೋಪಿ ವಿರುದ್ದ ಜೀವನ್ ಭೀಮಾನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಡ್ಡಿ ಪಾವತಿಸದ್ದಕ್ಕೆ ಹಲ್ಲೆ: ಸಾಲ ಪಡೆದ ಹಣಕ್ಕೆ ಬಡ್ಡಿ ಹಣ ಕೊಡಲಿಲ್ಲ ಎಂದು ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾಜಗೋಪಾಲ್​ ನಗರದಲ್ಲಿ ನಡೆದಿದೆ. ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಶೋಕ್ ಎಂಬವರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಘಟನೆಯ ದೃಶ್ಯಗಳನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಇನ್ನು ಹಲ್ಲೆಗೊಳಗಾದ ಅಶೋಕ್ ಎಂಬವರು, ಕೋವಿಡ್ ಸಂದರ್ಭದಲ್ಲಿ ಮಧು ಹಾಗೂ ಪ್ರಮೀಳಾ ದಂಪತಿಯಿಂದ ಒಂದೂವರೆ ಲಕ್ಷ ರೂ. ಸಾಲ ಪಡೆದಿದ್ದರಂತೆ. ಸಾಲದ ಒಂದು ಲಕ್ಷ ಹಣವನ್ನು ಅಶೋಕ್​ ಕೋವಿಡ್ ಸಂದರ್ಭದಲ್ಲೇ ಮರುಪಾವತಿ ಮಾಡಿದ್ದ ಎಂದು ತಿಳಿದುಬಂದಿದೆ. ಆದರೆ, ಉಳಿದ 50 ಸಾವಿರ ರೂ ಬಡ್ಡಿ ಪಾವತಿಸುವುದು ತಡವಾಗಿತ್ತು. ಈ ಹಿನ್ನಲೆ ಬಡ್ಡಿ ಸಮೇತ ಅಸಲು ಹಣವನ್ನು ನೀಡುವಂತೆ ಮಧು ಹಾಗೂ ಪ್ರಮೀಳಾ ದಂಪತಿ ಅಶೋಕ್​ನಲ್ಲಿ ಕೇಳಿದ್ದರಂತೆ. ಆದರೆ, ಅಶೋಕ್ ಸದ್ಯಕ್ಕೆ ಪೂರ್ತಿ ಹಣ ಕೊಡಲು ಆಗಲ್ಲ ಎಂದಿದ್ದನಂತೆ. ಹೀಗಾಗಿ ಪ್ರಮೀಳಾ, ಮಧು, ಸಂತೋಷ್ ಸೇರಿ ನಾಲ್ವರು ಅಶೋಕ್ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸದ್ಯ ಹಲ್ಲೆಗೊಳಗಾದ ಅಶೋಕ್ ರಾಜಗೋಪಾಲ್​ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.