ಬೆಂಗಳೂರು: ಬಿಬಿಎಂಪಿ ನೌಕರರ ಸಂಘದ ಲೆಟರ್ ಹೆಡ್ ಅನ್ನು ಅಕ್ರಮವಾಗಿ ಸೃಷ್ಟಿಸಿಕೊಂಡು ಉನ್ನತ ಅಧಿಕಾರಿಗೆ ವಂಚನೆ ಮಾಡಿರುವ ಆರೋಪದಡಿ ಪಾಲಿಕೆ ಎಫ್ಡಿಎ ಮಾಯಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ ನರಸಿಂಹ ನೀಡಿರುವ ದೂರಿನ ಮೇರೆಗೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 420 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಅಮೃತ್ ರಾಜ್ ಹೇಳಿದ್ದಾರೆ.
ನಕಲಿ ಅನಧಿಕೃತ ಸ್ವಯಂಘೋಷಿತ ಅಧ್ಯಕ್ಷ ಅಸ್ತಿತ್ವವಿಲ್ಲದೆ ಇರುವ ಅಧಿಕಾರಿ, ನೌಕರರ ಸಂಘದ ಲೆಟರ್ ಹೆಡ್ ಅನ್ನು ದುರ್ಬಳಕೆ ಮಾಡಿ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಮತ್ತು ಮುಖ್ಯ ಆಯುಕ್ತರಿಗೆ ಕಾನೂನು ಬಾಹಿರ ಪತ್ರ ವ್ಯವಹಾರ ಮಾಡಿರುವ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಮಾಯಣ್ಣ ವಿರುದ್ಧ ದೂರು ನೀಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಮಾಯಣ್ಣ ಸರ್ಕಾರಿ ಹುದ್ದೆಯಲ್ಲಿ ಇದ್ದರೂ, ಸಹ ಅನಧಿಕೃತವಾಗಿ ಪಾಲಿಕೆ ಹೆಸರಿನ ಸಂಘದ ಪತ್ರಗಳನ್ನು ದುರ್ಬಳಿಕೆ ಮಾಡಿಕೊಂಡಿರುವುದು ಬಹಿರಂಗವಾಗಿದೆ ಎಂದು ಅಮೃತ್ ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಅಂತ ಹೇಳ್ಕೊಂಡು ವಂಚನೆ: ಆರೋಪಿ ಬಂಧನ