ಯಲಹಂಕ: ಇಕ್ಕಟ್ಟಾದ ರಸ್ತೆಯಲ್ಲಿ ಬಲವಂತವಾಗಿ ಕಾರು ಚಲಾಯಿಸಲು ಯತ್ನಿಸಿದಾಗ ಇಬ್ಬರು ಚಾಲಕರ ಮಧ್ಯೆ ವಾಗ್ವಾದ ಶುರುವಾಗಿದೆ.
ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ಹೆದ್ದಾರಿಯಿಂದ ಬಡಾವಣೆಗಳಿಗೆ ಸಂಪರ್ಕಿಸುವ ಇಕ್ಕಾಟ್ಟದ ರಸ್ತೆಯಲ್ಲಿ ಬಡಾವಣೆಯಿಂದ ಹೆದ್ದಾರಿಗೆ ಬರಲು ಕಾರುಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಹೆದ್ದಾರಿಯಿಂದ ಬಡಾವಣೆಯ ರಸ್ತೆಗೆ ಬಂದ ಮತ್ತೊಂದು ಕಾರಿನ ಚಾಲಕ ಜಾಗ ಇಲ್ಲದಿದ್ದರು, ಬಲವಂತವಾಗಿ ಕಾರು ಚಾಲನೆ ಮಾಡಲು ಯತ್ನಿಸಿದ್ದಾನೆ.
ಈ ಕಾರಣಕ್ಕೆ ಇಬ್ಬರು ಕಾರು ಚಾಲಕರ ನಡುವೆ ವಾಗ್ವಾದ ಶುರುವಾಗಿದ್ದು, ಜಗಳ ತಾರಕಕ್ಕೇರಿದೆ. ಇದರಿಂದ ಕೋಪಗೊಂಡ ಚಾಲಕ, ಎದುರಿಗಿದ್ದ ಮತ್ತೊಂದು ಕಾರಿನ ಚಾಲಕನ ಮೇಲೆ ಕಾರು ಹರಿಸಲು ಯತ್ನಿಸಿದ್ದಾನೆ.
ಪ್ರಾಣಾಪಾಯದಿಂದ ಪಾರಾಗಲು ತಕ್ಷಣವೇ ಕಾರಿನ ಬಾನೆಟ್ ಮೇಲೆ ಮೇಲೆ ಕುಳಿತು ಕಾರು ನಿಲ್ಲಿಸಲು ಯತ್ನಿಸಿದ್ದಾನೆ. ಆದರೆ ಆತ ಕಾರು ನಿಲ್ಲಿಸದೆ ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಕಾರಿನ ಬಾನೆಟ್ ಮೇಲಿಂದ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.