ಬೆಂಗಳೂರು: ವಿಧಾನಸೌಧ ಸುತ್ತಮುತ್ತಲೂ ನಿಷೇಧಾಜ್ಞೆ ಘೋಷಣೆಯನ್ನು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಿಂಪಡೆದಿದ್ದಾರೆ.
ಇಂದು ಎರಡನೇ ಶನಿವಾರ ನಾಳೆ ಭಾನುವಾರ ಸರ್ಕಾರಿ ರಜೆ ಇರುವ ಕಾರಣ 144 ಸೆಕ್ಷನ್ ರದ್ದುಗೊಳಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಕಲಾಪ ಇಲ್ಲದಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ನಿಷೇಧಾಜ್ಞೆಯನ್ನ ವಾಪಾಸ್ ಪಡೆದಿದ್ದಾರೆ.