ಬೆಂಗಳೂರು/ಮಂಗಳೂರು: ನೇತ್ರಾವತಿ ನದಿ ಸೇತುವೆ ಬಳಿ ನಾಪತ್ತೆಯಾಗಿರುವ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಕಾರು ಮಂಗಳೂರು ಸಮೀಪದ ಬ್ರಹ್ಮರಕೂಟ್ಲು ಟೋಲ್ ಬಳಿ ಸಾಗಿಹೋದ ದೃಶ್ಯಗಳು ಲಭ್ಯವಾಗಿವೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಟೋಲ್ ಬಳಿಯ ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಯಲ್ಲಿರುವಂತೆ ನಿನ್ನೆ ಸಂಜೆ 5 ಗಂಟೆ 28 ನಿಮಿಷಕ್ಕೆ ಸರಿಯಾಗಿ ಸಿದ್ಧಾರ್ಥ್ ಕಾರು ಬ್ರಹ್ಮರಕೂಟ್ಲು ಟೋಲ್ ಮೂಲಕ ಹಾದುಹೋಗಿದೆ.
ಬ್ರಹ್ಮರಕೂಟ್ಲು ಟೋಲ್ ಮಂಗಳೂರಿನ ಸಮೀಪದಲ್ಲೇ ಇದೆ. ಸದ್ಯ ನದಿ ಬಳಿ ಸಿದ್ದಾರ್ಥ್ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.