ETV Bharat / state

ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ, ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ - ಈಟಿವಿ ಭಾರತ ಕನ್ನಡ

ಬಸವರಾಜ ಬೊಮ್ಮಾಯಿ ಸಿಎಂ ಆಗಿದ ಅಧಿಕಾರ ಸ್ವೀಕರಿಸಿ ಒಂದೂವರೆ ವರ್ಷ ಕಳೆದರೂ ಸಚಿವ ಸಂಪುಟ ವಿಸ್ತರಣೆ ಭಾಗ್ಯ ಕೂಡಿಬಂದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಮುಂದೂಡಲ್ಪಡುತ್ತಿದ್ದು, ಸದ್ಯ ಗುಜರಾತ್​, ಹಿಮಾಚಲ ಪ್ರದೇಶಗಳ ಚುನಾವಣೆ ಹಿನ್ನೆಲೆ ಮತ್ತೆ ಮುಂದೂಡಲ್ಪಟ್ಟಿದೆ. ಗುಜರಾತ್​ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

cabinet-expansion-is-being-postponing-due-to-various-reasons
ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ,ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ:ಮೋದಿ ಬಂದಾಗ ನಡೆಯುತ್ತಾ ಮ್ಯಾಜಿಕ್...?
author img

By

Published : Nov 8, 2022, 5:28 PM IST

Updated : Nov 8, 2022, 6:35 PM IST

ಬೆಂಗಳೂರು : ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷವಾಗುತ್ತಾ ಬಂದರೂ ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಕಾಲ ಕೂಡಿ ಬಂದಿಲ್ಲ. ಸದಾ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬರುತ್ತಿರುವ ಸಂಪುಟ ವಿಸ್ತರಣೆ ಪ್ರಹಸನ ಈಗ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಕಾರಣಕ್ಕೆ ಮತ್ತೆ ವಿಳಂಬವಾಗುವಂತಾಗಿದೆ.

ಸಚಿವ ಸಂಪು ವಿಸ್ತರಣೆಗೆ ಕೂಡಿ ಬಂದಿಲ್ಲ ಕಾಲ : ರಾಜ್ಯ ಬಿಜೆಪಿ ಭೀಷ್ಮ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ 16 ತಿಂಗಳು ಕಳೆದಿದೆ. ತಿಂಗಳಿಗೊಮ್ಮೆಯಂತೆ ಸಿಎಂ ದೆಹಲಿ ಯಾತ್ರೆಯನ್ನೂ ಮಾಡಿದ್ದಾರೆ. ಆಗಾಗ ವರಿಷ್ಠರೇ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ.

ಆದರೆ, ಸಚಿವ ಸಂಪುಟ ವಿಸ್ತರಣೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಯಡಿಯೂರಪ್ಪ ಕಾಲದಿಂದಲೂ ಸಚಿವರಾಗಬೇಕು ಎಂದು ಎರಡು ವರ್ಷ ಕಾದು ಕುಳಿತಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳು ಬೊಮ್ಮಾಯಿ ಸರ್ಕಾರದಲ್ಲಿಯಾದರೂ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲೇ ಮತ್ತೆ ಒಂದೂವರೆ ವರ್ಷ ದೂಡಿದ್ದಾರೆ. ಆದರೆ, ಅವಕಾಶ ಮಾತ್ರ ಸಿಕ್ಕಿಲ್ಲ. ಕಾಯುವುದರಲ್ಲೇ ಕಾಲ ಹರಣ ಮಾಡಿದಂತಾಗಿರುವ ಆಕಾಂಕ್ಷಿಗಳು ಇದೀಗ ಅವಕಾಶ ಸಿಕ್ಕರೂ ಬೇಡ ಎನ್ನುವ ನಿಲುವಿಗೆ ಬಂದು ಬಿಟ್ಟಿದ್ದಾರೆ.

ವಿವಿಧ ಕಾರಣಗಳಿಂದ ಮುಂದೂಡಲ್ಪಡುತ್ತಿರುವ ಸಂಪುಟ ವಿಸ್ತರಣೆ : ಸದಾ ಒಂದಿಲ್ಲೊಂದು ಕಾರಣಗಳು ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಗ್ರಹಣ ಹಿಡಿಯುವಂತೆ ಮಾಡಿವೆ. ಸರ್ಕಾರ ರಚನೆಯಾಗುತ್ತಿದ್ದಂತೆ ಬೊಮ್ಮಾಯಿ ಸರ್ಕಾರಕ್ಕೆ ಸವಾಲಾಗುವಂತೆ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಬಂದವು. ಅವುಗಳು ಮುಗಿಯುವಷ್ಟರಲ್ಲೇ ದಸರಾ, ದೀಪಾವಳಿ ಬಂದು, ಬೆಳಕಿನ ಹಬ್ಬದ ಪಟಾಕಿ ಸದ್ದು ಮುಗಿಯುವಷ್ಟರಲ್ಲೇ 2022 ರ ಹೊಸ ವರ್ಷ ಬಂತು.

ಹೊಸ ವರ್ಷಕ್ಕಾದರೂ ಸಂಪುಟ ಸೇರುತ್ತೇವೆ ಎನ್ನುವ ಅಪೇಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಹೊಸ ವರ್ಷಾರಂಭ ನಿರಾಸೆ ಮೂಡಿಸಿತು. ವರ್ಷಾಂತ್ಯವಾಗುತ್ತಾ ಬಂದರೂ ಸಂಪುಟ ಮಾತ್ರ ವಿಸ್ತರಣೆಯಾಗಲೇ ಇಲ್ಲ. ಹೊಸ ವರ್ಷದ ನಂತರ ಸಂಕ್ರಾಂತಿಗೆ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿತ್ತು. ವರಿಷ್ಠರೂ ಈ ಕುರಿತು ಸುಳಿವು ನೀಡಿದ್ದರು.

ಆದರೆ, ತಕ್ಷಣವೇ ಪಂಚರಾಜ್ಯ ಚುನಾವಣೆ ಘೋಷಣೆಯಾಯಿತು. ಹಾಗಾಗಿ ಮತ್ತೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಯಿತು. ಅದು ಮುಗಿಯುತ್ತಿದ್ದಂತೆ ರಾಜ್ಯ ಮುಂಗಡ ಬಜೆಟ್ ಎದುರಾಯಿತು. ಈ ವೇಳೆ ಸಂಪುಟ ವಿಸ್ತರಣೆ ಬೇಡ ಎನ್ನುವ ವರಿಷ್ಠರ ಸಲಹೆಯಂತೆ ಬೊಮ್ಮಾಯಿ ದೆಹಲಿಯಿಂದ ಬರಿಗೈನಲ್ಲಿ ವಾಪಸ್​ ಆಗಿದ್ದರು.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಿಂದ ಮತ್ತೆ ಅಡ್ಡಿ : ಬಜೆಟ್ ಅಧಿವೇಶನ ಮುಗಿಸಿಕೊಂಡು ಬನ್ನಿ ಯುಗಾದಿಗೆ ನೋಡೋಣ ಎನ್ನುವ ವರಿಷ್ಠರ ಮಾತಿನಂತೆ ರಾಜ್ಯಕ್ಕೆ ಮರಳಿದ್ದ ಬೊಮ್ಮಾಯಿ ಯುಗಾದಿ ಮುಗಿಯುತ್ತಿದ್ದಂತೆ ಮಳೆಗಾಲ ಶುರುವಾಗಿ ಮಳೆ ಅನಾಹುತಗಳ ಹಿನ್ನಲೆಯಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿಯೇ ಮೂರ್ನಾಲ್ಕು ತಿಂಗಳು ಕಳೆದು ಹೋಯಿತು.

ನಂತರ ಮತ್ತೆ ಸಂಪುಟ ವಿಸ್ತರಣೆ ಸುದ್ದಿ ಚರ್ಚೆಗೆ ಬಂದಾಗ ಪರಿಷತ್ ಚುನಾವಣೆ, ರಾಜ್ಯಸಭೆ ಚುನಾವಣೆಗಳು ಬಂದವು. ಅವು ಮುಗಿದು ಎಲ್ಲವೂ ಸರಿಯಾಗಿದೆ ಎನ್ನುತ್ತಿರುವಂತೆಯೇ ಮಹಾರಾಷ್ಟ್ರದಲ್ಲಿ ಕೆಲವು ರಾಜಕೀಯ ವಿದ್ಯಮಾನಗಳು ನಡೆದವು ಇದು ಮತ್ತೆ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮೇಲೆ ಪರಿಣಾಮ ಬೀರುವಂತೆ ಮಾಡಿತು.

ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಸರ್ಕಾರ ಪತನಗೊಂಡು ಶಿಂಧೆ ಬಣದ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿ ಮಹಾರಾಷ್ಟ್ರ ರಾಜಕಾರಣ ತಿಳಿಯಾಯಿತು. ನಂತರ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿ ಬಂದರು.

ಆಕಾಂಕ್ಷಿಗಳ ಪಟ್ಟಿಯನ್ನೂ ಕೊಟ್ಟು ಬಂದರು. ರಾಜ್ಯ ಮಟ್ಟ ಮತ್ತು ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯೂ ನಡೆಯಿತು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿ ಕೋರ್ ಕಮಿಟಿ ಸಭೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿ ದೆಹಲಿಗೆ ತೆರಳಿ ತಿಳಿಸುವುದಾಗಿ ಹೇಳಿದ್ದರಾದರೂ ಅದು ಕಾರ್ಯಗತವಾಗಲಿಲ್ಲ. ಇತ್ತೀಚೆಗಷ್ಟೇ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದು, ಈ ವೇಳೆಯೂ ಅಂತಹ ಬೆಳವಣಿಗೆಗಳು ನಡೆಯಲಿಲ್ಲ.

ರಾಷ್ಟ್ರಪತಿ ಚುನಾವಣೆ ಘೋಷಣೆ : ಅಷ್ಟರಲ್ಲೇ ರಾಷ್ಟ್ರಪತಿ ಚುನಾವಣೆ ಘೋಷಣೆಯಾಯಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ರಾಷ್ಟ್ರಪತಿ ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಷಯ ನನೆಗುದಿಗೆ ಬಿದ್ದಿತು. ಇದೀಗ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಜೀವ ಬಂದಿದೆ.

ಎರಡು ದಿನಗಳ ಹಿಂದಷ್ಟೇ ವರಿಷ್ಠರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಬಸವರಾಜ ಬೊಮ್ಮಾಯಿ ಖುದ್ದು ಭೇಟಿಗೆ ಸಮಯಾವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ಅಷ್ಟರಲ್ಲಿ ಹಿಮಾಚಲ ಪ್ರದೇಶ,ಗುಜರಾತ್ ರಾಜ್ಯಗಳ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ವರಿಷ್ಠರು ಸಮಯಾವಕಾಶ ನೀಡಲಿಲ್ಲ ಹೀಗಾಗಿ ಬೊಮ್ಮಾಯಿ ದೆಹಲಿ ಪ್ರವಾಸ ಕೊನೆ ಕ್ಷಣದಲ್ಲಿ ರದ್ದಾಯಿತು.

ನವೆಂಬರ್ 11ಕ್ಕೆ ಬೆಂಗಳೂರಿಗೆ ಆಗಮಿಸುತ್ತಿರುವ ಮೋದಿ : ಇದೀಗ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿದ್ದಾರೆ. ಈ ವೇಳೆ ರಾಜ್ಯದ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಮುಂದಿನ ವರ್ಷ ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಹಾಗಾಗಿಯೇ ಈ ಭೇಟಿ ವೇಳೆ ಸಚಿವ ಸಂಪುಟದ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ತಮ್ಮ ಮೇಲೆ ಆರೋಪಗಳ ಬಂದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ಇಬ್ಬರನ್ನಾದರೂ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎನ್ನುವ ಚಿಂತನೆ ಸಿಎಂ ಬೊಮ್ಮಾಯಿ ಅವರಿಗಿದೆ. ಈ ಬಗ್ಗೆ ಒತ್ತಡವೂ ಹೆಚ್ಚಾಗುತ್ತಿದೆ. ಹಾಗಾಗಿ ಪ್ರಧಾನಿ ಮೋದಿ ಭೇಟಿ ವೇಳೆ ಮತ್ತೆ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಗುಜರಾತ್ ವಿಧಾನಸಭಾ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ : ಸಿಎಂ ಬೊಮ್ಮಾಯಿ

Last Updated : Nov 8, 2022, 6:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.