ETV Bharat / state

ಕಡಿಮೆ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 10 ಯೂನಿಟ್ ಉಚಿತ - ಗೃಹಜ್ಯೋತಿ ಯೋಜನೆ

ಗೃಹ ಜ್ಯೋತಿ ಯೋಜನೆಯಡಿ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶೇ.10ರ ಬದಲು ಹೆಚ್ಚುವರಿಯಾಗಿ 10 ಯೂನಿಟ್ ಉಚಿತವಾಗಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಗೃಹಜ್ಯೋತಿ ಯೋಜನೆ
ಗೃಹಜ್ಯೋತಿ ಯೋಜನೆ
author img

By ETV Bharat Karnataka Team

Published : Jan 18, 2024, 8:22 PM IST

Updated : Jan 18, 2024, 8:41 PM IST

ಇಂಧನ ಸಚಿವ ಕೆ ಜೆ ಜಾರ್ಜ್

ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಸಬ್ಸಿಡಿ ಅರ್ಹತೆಯ ಷರತ್ತುಗಳಲ್ಲಿ ಮಾರ್ಪಾಡು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್‍ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರ ಬದಲಿಗೆ ಹೆಚ್ಚುವರಿ 10 ಯೂನಿಟ್‍ಗಳನ್ನು ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಶೇ.10ರ ಬದಲು ಹೆಚ್ಚುವರಿಯಾಗಿ 10 ಯೂನಿಟ್ ನೀಡುವುದು ಸರ್ಕಾರಕ್ಕೆ ಹೊರೆಯಾಗಲಿದೆ. ಆದ್ರೆ ಬಡವರಿಗೆ ಮತ್ತು ಜನಸಾಮಾನ್ಯರಿಗೆ ಅನುಕೂಲ ಆಗಬೇಕೆಂದು ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕದಲ್ಲಿ ಕಡಿಮೆ ವಿದ್ಯುತ್ ಯೂನಿಟ್ ಬಳಕೆ ಮಾಡುವವರು ಹೆಚ್ಚುವರಿಯಾಗಿ ಉಚಿತವಾಗಿ 10 ಯೂನಿಟ್ ವಿದ್ಯುತ್ ಪಡೆದುಕೊಳ್ಳಲಿದ್ದಾರೆ ಎಂದು ಇಂಧನ ಸಚಿವ ಜಾರ್ಜ್ ಪ್ರತಿಕ್ರಿಯೆ ನೀಡಿದರು.

ಕಳೆದ 12 ತಿಂಗಳು ಸರಾಸರಿ ಬಳಕೆ + ಹೆಚ್ಚುವರಿ ಶೇ.10ರಷ್ಟು ಯೂನಿಟ್ ಉಚಿತವಾಗಿ​ ಬಳಸಿಕೊಳ್ಳಲು ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚು ವಿದ್ಯುತ್ ಬಳಸಿಕೊಂಡವರಿಗೆ ಬಿಲ್ ಬರಲಿದೆ. ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯೂನಿಟ್ ಬಳಕೆ ಮಾಡುತ್ತಿದ್ದಾರೆ. ಅದರಂತೆ ಸರಾಸರಿ ಬಳಕೆಗೆ ಶೇ.10ರಷ್ಟು ಹೆಚ್ಚುವರಿ ಬಳಕೆ ಸೇರ್ಪಡೆಗೊಳಿಸಿದರೆ ಅರ್ಹತಾ ಯೂನಿಟ್‍ಗಳು ಒಟ್ಟು 58 ಯೂನಿಟ್‍ಗಳಾಗುತ್ತದೆ.

30 ಯೂನಿಟ್‍ಗಳನ್ನು ಬಳಸುವ ಬಡ ಕುಟುಂಬಗಳಿಗೆ (ಶೇ.10 ಸೇರಿದರೆ) ಅರ್ಹತಾ ಯೂನಿಟ್‍ಗಳು ಕೇವಲ 33 ಯೂನಿಟ್‍ಗಳಾಗಿರುತ್ತದೆ. ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಶೇ.10ರಷ್ಟು ಹೆಚ್ಚುವರಿ ಸೇರಿಸಿದರೆ ಕೇವಲ ಮೂರು ಯೂನಿಟ್ ಹೆಚ್ಚುವರಿ ಸೇರ್ಪಡೆಯಾಗಿ 33 ಯೂನಿಟ್ ವಿದ್ಯುತ್ ಬಳಕೆಗೆ ಮಾತ್ರ ವಿದ್ಯುತ್ ಬಿಲ್ ಪಾವತಿಸುವಂತಿಲ್ಲ. 33 ಯೂನಿಟ್​ಗಿಂತೆ ಹೆಚ್ಚು ವಿದ್ಯುತ್ ಬಳಸಿದ್ರೆ ಬಿಲ್ ಕಟ್ಟಬೇಕು. ಹೀಗಾಗಿ ಕಡಿಮೆ ವಿದ್ಯುತ್ ಬಳಸುವವರಿಗೆ ಹೆಚ್ಚಿನ ಅನುಕೂಲವಾಗಲು ಶೇ.10 ಅರ್ಹತಾ ಯೂನಿಟ್‍ಗಳ ಬದಲಿಗೆ ಹೆಚ್ಚುವರಿಯಾಗಿ 10 ಯೂನಿಟ್‍ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಉದಾಹರಣೆಗೆ ಸರಾಸರಿ 30 ಯೂನಿಟ್ ಬಳಸುವವರು ಇನ್ನು 40 ಯೂನಿಟ್​ಗಳವರೆಗೆ ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ.

ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‍ಗಿಂತ ಕಡಿಮೆ ಬಳಕೆ ಮಾಡುತ್ತಿದ್ದು, 10 ಯೂನಿಟ್‍ಗಳ ಹೆಚ್ಚುವರಿ ಹೆಚ್ಚಳದಿಂದ ರೂ.33 ಕೋಟಿಗಳ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಬಸವಣ್ಣ, ಫೆ‌.16ಕ್ಕೆ ಬಜೆಟ್; ಅರ್ಹ ಗ್ರಾಹಕರಿಗೆ ಹೆಚ್ಚುವರಿ 10 ಯುನಿಟ್​ ವಿದ್ಯುತ್​

Last Updated : Jan 18, 2024, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.