ETV Bharat / state

ರಾಜ್ಯಸಭಾ ಚುನಾವಣೆ ಫಲಿತಾಂಶ: ಕಾಂಗ್ರೆಸ್​ ವಿರುದ್ಧ ಸಿ.ಎಂ ಇಬ್ರಾಹಿಂ ವಾಗ್ದಾಳಿ - c m ibhrahim on election result

ರಾಜ್ಯಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ, ಕಾಂಗ್ರೆಸ್​ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

c m ibhrahim outrage on congress
ಕಾಂಗ್ರೆಸ್​ ವಿರುದ್ಧ ಸಿ.ಎಂ ಇಬ್ರಾಹಿಂ ಆಕ್ರೋಶ
author img

By

Published : Jun 12, 2022, 5:11 PM IST

Updated : Jun 12, 2022, 5:29 PM IST

ಬೆಂಗಳೂರು: ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮೊದಲ ವೋಟ್ ಕಾಂಗ್ರೆಸ್​ಗೆ, ಬಿಜೆಪಿಗೆ ಎರಡನೇ ವೋಟ್ ಹಾಕಿಸಿದ್ದು. ತಕ್ಷಣವೇ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದರು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಡ್ಡ ಮತದಾನ ಹಾಕಿದ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರ ಶ್ರೀನಿವಾಸ್ ಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿ.ಎಂ.ಇಬ್ರಾಹಿಂ, ಹೆಚ್​ಡಿಕೆ ಸಿಎಂ ಆಗಲು ಸಿದ್ದು, ಡಿ‌ಕೆಶಿ ಫೌಂಡೇಶನ್ ಹಾಕಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ನಂ.1 ಆಗುತ್ತೆ, ಬಿಜೆಪಿ ನಂ.2, ಕಾಂಗ್ರೆಸ್ ನಂ.3 ಆಗುತ್ತದೆ ಅಂತ ಎಲ್ಲಿರಿಗೂ ಗೊತ್ತಿದೆ. ಸಿದ್ದರಾಮಯ್ಯ, ಡಿ‌ಕೆಶಿ ಮೊದಲ ವೋಟ್ ಕಾಂಗ್ರೆಸ್ಸಿಗೆ, ಎರಡನೇ ವೋಟ್ ಬಿಜೆಪಿಗೆ ಹಾಕಿಸಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡಿ ಅಂತ ಸೋನಿಯಾ ಗಾಂಧಿಯವರಿಗೆ ವಿನಂತಿ ‌ಮಾಡುತ್ತೇನೆ.‌ ಸಿದ್ದರಾಮಯ್ಯ ಯಡಿಯೂರಪ್ಪರ ಜೊತೆಗೆ ಈಗಲೂ ಡೀಲ್ ಮಾಡಿಕೊಂಡ್ರು. ಅದಕ್ಕೆ ಸಿ.ಟಿ ರವಿ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದು. ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ ಎಂದರು.

ಸಿ.ಎಂ ಇಬ್ರಾಹಿಂ

ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ಜೆಡಿಎಸ್ ಎಂದಿಗೂ ಬಿ ಟೀಂ ಅಲ್ಲ. ನಾವು ನಿಮ್ಮ ಜೊತೆ ಸರ್ಕಾರ ಮಾಡಿದರೆ ಒಂದು ವರ್ಷ ಸರ್ಕಾರ ನಡೆಸುವುದಕ್ಕೂ ಬಿಡಲಿಲ್ಲ ನೀವು. ರಾಜಕೀಯಕ್ಕೆ ಹಣ ಮಾಡಲು ಬಂದವನಲ್ಲ ನಾನು. ರಾಜಕೀಯದಲ್ಲಿ ದುಡ್ಡು ಮಾಡಬೇಕು ಅನ್ನೋ ಸ್ವಾರ್ಥ ಇಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಎಂದು ಹೇಳಿದರು.

ಕಾಂಗ್ರೆಸ್​ನ ದ್ವಿತೀಯ ಪ್ರಾಶಸ್ತ್ಯದ ಮತ ಕೊಡಿ ಅಂತಲೇ ನಾನು ಕೇಳಿಕೊಂಡಿದ್ದೆ. ಪಾರ್ಟಿ ಅಧ್ಯಕ್ಷರು ಬಂದು ಪೋಲಿಂಗ್ ಏಜೆಂಟ್ ಆಗ್ತಾರೆ ಅಂದ್ರೆ ಕಾಂಗ್ರೆಸ್​ಗೆ ಎಷ್ಟು ಸ್ವಾರ್ಥ, ಸೇಡು ಇದೆ ಅಂತ ಲೆಕ್ಕ ಹಾಕಿ. ಆಗಲೇ ನನಗೆ ಬಹಳ ಬೇಜಾರಾಯ್ತು. ಪ್ರಾದೇಶಿಕ ಪಕ್ಷವನ್ನು ಮುಗಿಸಿಬಿಡ್ತಾರೆ ಇವರು. ದೇಶದಲ್ಲಿ ಗಟ್ಟಿಯಾದ ಪ್ರತಿಪಕ್ಷವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆಳುವ ಸರ್ಕಾರದ ಕೈಗೊಂಬೆಯಾಗಿ ದ್ವೇಷದ ಸಾಧನವಾದ 'ಇಡಿ': ದಿನೇಶ್ ಗುಂಡೂರಾವ್ ಟ್ವೀಟ್​​

ಬಿಜೆಪಿ ಬಿ ಟೀಂ ಪಿತಾಮಹ ಸಿದ್ದರಾಮಯ್ಯ. ಡೀಲ್ ರಾಮಯ್ಯ ಸಿದ್ದರಾಮಯ್ಯ ಎಂದು ಎಂಎಲ್​ಸಿ ಶರವಣ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಶಾಸಕರನ್ನು ಮನೆಗೆ ಕರೆಸಿಕೊಂಡು ಡೀಲ್ ಮಾಡ್ಕೊಂಡಿದ್ದೀರಾ?. ರಾಜ್ಯಸಭಾ ಚುನಾವಣೆಯಲ್ಲಿ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯ ಯಾರ ಮಾತೂ ಕೇಳಲ್ಲ, ಸಿದ್ದರಾಮಯ್ಯ ತಾವೇ ಹೈಕಮಾಂಡ್ ತರ ಮಾಡ್ತಿದ್ದಾರೆ ಅಂತ ಕಾಂಗ್ರೆಸ್​ನವರೇ ಹೇಳ್ತಿದ್ದಾರೆ. ದೇವೇಗೌಡರು ನನಗೆ ಫಾರೂಕ್​ಗೆ ಸಿದ್ದರಾಮಯ್ಯರನ್ನು ಭೇಟಿ ಮಾಡುವುದಕ್ಕೆ ಹೇಳಿದ್ರು. ಸಿದ್ದರಾಮಯ್ಯ ಭೇಟಿ ಮಾಡಿ ಮಾವು ಮನವಿ ಮಾಡಿಕೊಂಡ್ವಿ. ಅಲ್ಲಿ ನಡೆದದ್ದನ್ನು ಹೇಳದೇ ಶರವಣ ಸ್ವೀಟ್ ಕೊಡೋದಕ್ಕೆ ಬಂದ ಅಂತ ತಿರುಚಿ ಹೇಳೋ ಸಿದ್ದರಾಮಯ್ಯರನ್ನು ಏನಂತ ಕರೆಯಬೇಕು? ಕುಮಾರಣ್ಣ, ದೇವೇಗೌಡರ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದೀರಾ, ನೀವು ಅದಕ್ಕೆ ಬೆಲೆ ತೆರಲೇಬೇಕು ಎಂದು ಗುಡುಗಿದರು.

Last Updated : Jun 12, 2022, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.