ಬೆಂಗಳೂರು : ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಆರ್.ಆರ್. ನಗರ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸ್ ಇಲಾಖೆ ಭಾರಿ ಕಟ್ಟೆಚ್ಚರ ವಹಿಸಿದೆ.
3 ಡಿಸಿಪಿ, 8 ಎಸಿಪಿ, 41 ಇನ್‌ಸ್ಪೆಕ್ಟರ್, 105 ಪಿಎಸ್ಐ, 179 ಎಎಸ್ಐ, 1,068 ಪೊಲೀಸ್ ಕಾನ್ಸ್ಟೇಬಲ್, 83 ಮಫ್ತಿ ಪೊಲೀಸರು ಸೇರಿದಂತೆ ಒಟ್ಟು 1670 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಜತೆಗೆ 9 ಕೆಎಸ್ಆರ್ಪಿ ತುಕಡಿ ಹಾಗೂ 9 ಸಿಎಆರ್ ತುಕಡಿಗಳು, 104 ಚೀತಾ ವಾಹನ ಹಾಗೂ 60 ಹೊಯ್ಸಳ ವಾಹನಗಳನ್ನು ಗಸ್ತಿಗೆ ನಿಯೋಜಿಸಲಾಗಿದೆ.
ಆರ್.ಆರ್. ನಗರದ ಜಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ನಡೆಯುವ ಪ್ರದೇಶದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ. ನಾಳೆ ಒಂದು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.
ನಾಳೆಯೇ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು ಇಲ್ಲಿಯೂ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.
ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಒಳಗೊಂಡಂತೆ 197 ಪೊಲೀಸರು, 2 ಕೆಎಸ್ಆರ್ಪಿ ಹಾಗೂ 2 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.