ETV Bharat / state

ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಅಪಹರಣ ಪ್ರಕರಣ: ಬೆಂಗಳೂರಲ್ಲಿ ಮೂವರ ಬಂಧನ - Businessman abducts in Bangalore

ಪೊಲೀಸರ ಹೆಸರಿನಲ್ಲಿ ವ್ಯಾಪಾರಿಯನ್ನು ಅಪಹರಿಸಿ ಹಲ್ಲೆ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಮೂವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಇನ್​ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸಿ‌ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ‌.

Businessman abducts in Bangalore
ಪೊಲೀಸರ ಸೋಗಿನಲ್ಲಿ ವ್ಯಾಪಾರಿ ಅಪಹರಣ ಪ್ರಕರಣ
author img

By

Published : Aug 10, 2021, 5:52 PM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪೊಲೀಸರ ಸೋಗಿನಲ್ಲಿ ಉದ್ಯಮಿ ಸೇರಿದಂತೆ ಶ್ರೀಮಂತ ವ್ಯಕ್ತಿಗಳನ್ನು ಹೆದರಿಸಿ ಸುಲಿಗೆ ಮಾಡುವ ಉಪಟಳ ಹೆಚ್ಚಾಗಿದೆ. ಉದ್ಯಮಿಗಳ ವೀಕ್​ನೆಸ್​ ತಿಳಿದುಕೊಂಡು ಅವರನ್ನು ಬೆದರಿಸಿ ಹಣ ಮಾಡುವ ಗ್ಯಾಂಗ್ ರಾಜಧಾನಿಯಲ್ಲಿ ಸಕ್ರಿಯವಾಗಿದೆ.

ಪೊಲೀಸರ ಹೆಸರಿನಲ್ಲಿ ವ್ಯಾಪಾರಿಯನ್ನು ಅಪಹರಿಸಿ ಹಲ್ಲೆ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಮೂವರು ಅಪಹರಣಕಾರರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ಚಾರ್ಟೆಡ್ ಅಕೌಂಟೆಂಟ್ ಅಗಿರುವ ದಿವಾಕರ್ ರೆಡ್ಡಿ, ಸ್ನೇಹಿತ ಅರವಿಂದ‌‌ ಮೆಹ್ತಾ ಎಂಬುವರನ್ನು ಅಪಹರಿಸಿದ ಆರೋಪದ ಮೇರೆಗೆ ಅಪಹರಣಕಾರರಾದ ನದೀಂ ಷರೀಫ್, ಸಂತೋಷ್ ಹಾಗೂ ಅಜರ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌‌ ಒಪ್ಪಿಸಲಾಗಿದೆ ಎಂದು‌ ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಅರವಿಂದ ಮೆಹ್ತಾ ಚಿನ್ನದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ. ಈತನ ವಿರುದ್ಧ ದೆಹಲಿ‌ ಸೇರಿದಂತೆ ಮುಂತಾದ ಕಡೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ ಈತನ ವ್ಯವಹಾರವನ್ನು ಚಾರ್ಟೆಡ್ ಅಕೌಂಟ್​ಟೆಂಟ್ ಆಗಿದ್ದ ದಿವಾಕರ್ ರೆಡ್ಡಿ ನೋಡಿಕೊಳ್ಳುತ್ತಿದ್ದ. ಮತ್ತೊಂದೆಡೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನದೀಂ ಷರೀಫ್ ಜಾಮೀನಿನ ಮೇಲೆ ಹೊರಬಂದಿದ್ದ.

ಐಷರಾಮಿ ಜೀವನ ನಡೆಸಲು ಮುಂದಾಗಿದ್ದ ನದೀಂ ಷರೀಫ್, ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡಿದ್ದ. ವ್ಯಾಪಾರಿ ಅರವಿಂದ ಮೆಹ್ತಾ ಅವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಅರಿತ ಗ್ಯಾಂಗ್ ದಿನ‌ ಪತ್ರಿಕೆಗಳಲ್ಲಿ ಬಂದಿದ್ದಂತಹ ಮಾಹಿತಿ ಆಧರಿಸಿ‌‌ ಬ್ಯುಸಿನೆಸ್ ಬಗ್ಗೆ ಮಾತನಾಡಬೇಕೆಂದು ಹೇಳಿ ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಹೊಟೇಲ್​ಗೆ ಕರೆಯಿಸಿಕೊಂಡಿದ್ದರು.

ಭೇಟಿ ಬಳಿಕ‌ ನೀವು ಮಾಡುತ್ತಿರುವ ಅವ್ಯವಹಾರದ ಬಗ್ಗೆ ನಮಗೆ ಗೊತ್ತಿದೆ. ನಾವು ಪೊಲೀಸರು. ನಮಗೆ ಹಣ‌ ಕೊಡದಿದ್ದರೆ ನಿನ್ನ ವಿರುದ್ಧ ಸುಳ್ಳು‌‌ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಅಪಹರಣಕಾರರು ಬೆದರಿಸಿದ್ದರು. ಬಳಿಕ‌ ಇಬ್ಬರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಕೋರಮಂಗಲ ಹೊಟೇಲ್​ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ 10 ಲಕ್ಷ ಹಣಕ್ಕೆ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗ್ತಿದೆ.

ಅಪಹರಣ ವೇಳೆ ಜೊತೆಗಿದ್ದ ಸ್ನೇಹಿತ ಸಂದೀಪ್ ಪರಮೇಶ್ವರ್ ಎಂಬುವರು ಆ.7 ರಂದು ಹಲಸೂರು ಪೊಲೀಸ್ ತೆರಳಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು. ಪ್ರಕರಣ ತನಿಖೆ ಕೈಗೊಂಡ ಇನ್​ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸಿ‌ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ‌.

ನದೀಂ‌ ಪಾಷ ಹಿನ್ನೆಲೆ‌:

ಪುಲಕೇಶಿ‌ ನಗರ‌ ನಿವಾಸಿಯಾಗಿರುವ ನದೀಂ‌ ಕಳೆದ ವರ್ಷ ತಾನು ಪ್ರೀತಿಸುತ್ತಿದ್ದ ಪ್ರಿಯತಮೆ ಮನೆಯಲ್ಲಿ ಯಾರು ಇಲ್ಲದಿರುವಾಗ ಸಹಚರರ ಮೂಲಕ ಮನೆ‌ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಸಾಕ್ಷ್ಯಗಳನ್ನು ನಾಶ ಮಾಡಲು ಮನೆಯಲ್ಲಿ ಖಾರದ ಪುಡಿ ಸಿಂಪಡಿಸಿದ್ದರು.‌ ಈ ಸಂಬಂಧ ನದೀಂನನ್ನ ಪುಲಕೇಶಿ ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದು ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದಾನೆ.

ಓದಿ: ಟ್ರಾಫಿಕ್​​ ಪೊಲೀಸ್​​-ಮಹಿಳೆ ನಡುವೆ ನಡುರಸ್ತೆಯಲ್ಲೇ ಫೈಟ್​ - ವಿಡಿಯೋ ವೈರಲ್​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.