ETV Bharat / state

ಜನಸಾಮಾನ್ಯರ ಅವಶ್ಯಕತೆಗೆ ಒತ್ತು ಕೊಟ್ಟಿರುವ ಬಜೆಟ್‌: ಸಿಎಂ ಬೊಮ್ಮಾಯಿ

ಕೋವಿಡ್ ನಂತರದ ಭಾರತದ ಆರ್ಥಿಕತೆ ಹೆಚ್ಚಿಸುವ ಬಜೆಟ್ ಇದಾಗಿದ್ದು, ಬೆಳವಣಿಗೆಗೆ ಪೂರಕವಾಗಿರುವ ಬಜೆಟ್​ ಆಗಿದೆ. ಮೂಲಸೌಕರ್ಯ ವಲಯದಲ್ಲಿ ದೊಡ್ಡ ಉತ್ತೇಜನ ಕೊಡಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿ, ಜನಸಾಮಾನ್ಯರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಸಿಎಂ ಹೇಳಿದ್ದಾರೆ.

author img

By

Published : Feb 1, 2022, 4:22 PM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ದೂರದೃಷ್ಟಿ ಇರುವ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರುವ ಮತ್ತು ಆಧುನಿಕತೆಯಿಂದ ಕೂಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಭಿವೃದ್ಧಿ, ಜನಸಾಮಾನ್ಯರ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡು ಅಲೆಗಳ ಕರಿಛಾಯೆಯಿಂದ ಆರ್ಥಿಕತೆ ಹಿಂಜರಿತ ಆಗಿತ್ತು. ಈ ಬಾರಿ ಅರ್ಥಿಕತೆ, ಉತ್ಪಾದನೆ ಹೆಚ್ಚಿಸುವತ್ತಲೂ ಆದ್ಯತೆ ನೀಡಲಾಗಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸುವ ಬಜೆಟ್ ಇದಾಗಿದೆ. ಕೋವಿಡ್ ನಂತರದ ಭಾರತದ ಆರ್ಥಿಕತೆ ಹೆಚ್ಚಿಸುವ ಬಜೆಟ್ ಇದಾಗಿದ್ದು, ಬೆಳವಣಿಗೆಗೆ ಪೂರಕವಾಗಿರುವ ಬಜೆಟ್​ ಆಗಿದೆ. ಮೂಲಸೌಕರ್ಯ ವಲಯದಲ್ಲಿ ದೊಡ್ಡ ಉತ್ತೇಜನ ಕೊಡಲಾಗಿದೆ. ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಆಗಿದೆ. ಗ್ರಾಮೀಣ ಭಾರತ ಸಬಲೀಕರಣ ಮಾಡಲು, ನಗರಗಳ‌ ಅಭಿವೃದ್ಧಿಗೆ ಹೊಸತನ ಕೊಡಲು ಡಿಜಿಟೈಲೈಸೇಷನ್, ಸಾರಿಗೆಗೆ ದೊಡ್ಡ ಹಣ ನೀಡಲಾಗಿದೆ, ನಗರ, ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಮನಾದ ಒತ್ತು, ಎಣ್ಣೆ ಕಾಳುಗಳ ಆಮದಿಗೆ ಒತ್ತು, ಡಿಫೆನ್ಸ್​ನಲ್ಲಿ ಶೇ.68 ರಷ್ಟು ಹೂಡಿಕೆ, ನಮ್ಮ ದೇಸೀ ಉತ್ಪಾದಕ ಬಿಡಿಭಾಗಗಳ ತಯಾರಿಗೆ ಒತ್ತು ನೀಡಿದ್ದು, ಆಡಳಿತದಲ್ಲಿ ಆಧುನಿಕತೆ ತರುವ ಬಜೆಟ್ ಆಗಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ: ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕ್ಯಾಪಿಟಲ್ ಔಟ್ಲೆಟ್ ಜಾಸ್ತಿಯಾಗಿದೆ. ಮೂರರಿಂದ ಮೂರುವರೆ ಸಾವಿರ ಕೋಟಿ ಅಧಿಕವಾಗಿ ನಮ್ಮ ಕ್ಯಾಪಿಟಲ್ ಅಕೌಂಟ್​ಗೆ ಬರುವ ಸಾಧ್ಯತೆ ಇದೆ. ಕಳೆದ ಬಾರಿ 26 ಸಾವಿರ ಕೋಟಿ ಇತ್ತು. ಈಗ 29 ಸಾವಿರ ಕೋಟಿ ಬರುವ ಅಂದಾಜು ಇದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಯಲ್ಲಿ ನಮ್ಮ ಯೋಜನೆಗಳಿವೆ. ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ಕೊಡಲಾಗಿದ್ದು, ಅದರಿಂದ ಕರ್ನಾಟಕಕ್ಕೆ ಲಾಭವಾಗಲಿದೆ. ನಮ್ಮ ಮೆಟ್ರೋಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಹೆಚ್ಚಿದೆ. ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಪ್ರಮಾಣದ ಅನುದಾನ ಸಿಕ್ಕಿದೆ. ನಮ್ಮಲ್ಲಿ ಪ್ರವಾಸೋದ್ಯಮ ವಲಯ ಜಾಸ್ತಿ ಇರುವುದರಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದಿದ್ದಾರೆ.

ಸಣ್ಣ ಕೈಗಾರಿಕೆಗಳಿಗೆ 50,000 ಕೋಟಿ ಇದ್ದ ಅನುದಾನವನ್ನು ಐದು ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಕರ್ನಾಟಕ ಅತಿ ದೊಡ್ಡ ಎಂಎಸ್ಎಂಇ ಇರುವ ರಾಜ್ಯ. ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ಇಟ್ಟಿರುವುದರಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ: ಹಸಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದ ಕೇಂದ್ರ ಬಜೆಟ್​ : ಮಾಜಿ ಸಿಎಂ ಕುಮಾರಸ್ವಾಮಿ

ನಮ್ಮ ಪಾಲಿನ ನೀರಿನ ಪ್ರಮಾಣ ನಿರ್ಧಾರಕ್ಕೆ ಮುನ್ನ ನದಿ ಜೋಡಣೆಗೆ ಸಮ್ಮತಿಸಲ್ಲ: ಭದ್ರಾ ಮೇಲ್ದಂಡೆ ಯೋಜನೆ ಕಳೆದ ಬಾರಿಯೇ ಅನುಮೋದನೆಯಾಗಿದೆ. ಹೀಗಾಗಿ ಅದಕ್ಕೆ ಬಜೆಟ್ ಅನುಮೋದನೆ ಅಗತ್ಯವಿಲ್ಲ. ಆ ಕಾರಣಕ್ಕೆ ಬಜೆಟ್​​ನಲ್ಲಿ ಅದನ್ನು ಉಲ್ಲೇಖ ಮಾಡಿಲ್ಲ. ಕಾವೇರಿ, ಕೃಷ್ಣಾ, ಪೆನ್ನಾರ್ ನದಿ ಜೋಡಣೆ ಇದೆ. ಎಲ್ಲ ರಾಜ್ಯಗಳು ಇದರ ಡಿಪಿಆರ್​ಗೆ ಒಪ್ಪಿಕೊಂಡ ನಂತರ ಚಾಲನೆ ಕೊಡುವುದಾಗಿ ಹೇಳಿದ್ದಾರೆ. ಸದ್ಯ ಇದು ಚರ್ಚೆಯಲ್ಲಿದೆ. ಪೆನ್ನಾರ್ ಡಿಪಿಆರ್ ಮಾಡುವಾಗ ನಮ್ಮ ರಾಜ್ಯದ ಪಾಲನ್ನು ಸರಿಯಾದ ರೀತಿಯಲ್ಲಿ ನಿರ್ಧಾರ ಮಾಡಬೇಕು. ಹಿಂದಿನ ಯುಪಿಎ ಸರ್ಕಾರ ಇರುವಾಗ ನಮ್ಮ ರಾಜ್ಯದ ಪಾಲನ್ನು ಕಡಿತ ಮಾಡಿದ್ದರು. ಅದಕ್ಕೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಈಗ ಅದಕ್ಕೆಲ್ಲ ತಡೆ ನೀಡಲಾಗಿದೆ. ಹೊಸದಾಗಿ ಡಿಪಿಆರ್ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡುವುದಾಗಿ ಕೇಂದ್ರದವರು ಹೇಳಿದ್ದಾರೆ. ನಮ್ಮ ಪಾಲನ್ನು ನಮಗೆ ಒಪ್ಪಿತ ರೀತಿಯಲ್ಲಿ ನೀಡಲು ಸಮ್ಮತಿಸುವವರೆಗೂ ನಾವು ಡಿಪಿಆರ್​ಗೆ ಒಪ್ಪಿಗೆ ಕೊಡುವುದಿಲ್ಲ. ಕೃಷ್ಣಾ, ಕಾವೇರಿ, ಪೆನ್ನಾರ್​​ನಲ್ಲಿ ನಮ್ಮ ಪಾಲು ಹೆಚ್ಚಾಗಬೇಕು. ನಮ್ಮ ರಾಜ್ಯದಲ್ಲಿ ಎಷ್ಟು ನೀರು ಉತ್ಪಾದನೆಯಾಗುತ್ತದೆ. ನಮ್ಮ ಅಗತ್ಯ ಏನಿದೆ ಎನ್ನುವುದನ್ನು ನಾವು ಪ್ರತಿಪಾದಿಸಿದ್ದು, ಅದಕ್ಕೆ ತಕ್ಕಂತೆ ಹಂಚಿಕೆಯಾಗಬೇಕು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇಡೀ ದೇಶದಲ್ಲಿ ಆಸ್ತಿ ತೆರಿಗೆ ನೊಂದಣಿ ಒಂದೇ ಇರಬೇಕು ಎಂದು ಉಲ್ಲೇಖ ಮಾಡಿದ್ದಾ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಎಲ್ಲ ವರ್ಗ ಇಂದು ಸಂಕಷ್ಟದಲ್ಲಿದೆ. ಆರ್ಥಿಕತೆ ಚೇತರಿಕೆಯಾದಲ್ಲಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ. ಶೂನ್ಯದಿಂದ 9.2 ಪರ್ಸೆಂಟ್​​ಗೆ ಆರ್ಥಿಕತೆ ಚೇತರಿಕೆಗೆ ಬರುವುದೇ ಜನರಿಗೆ ಅನುಕೂಲವಾಗುತ್ತಿರುವುದಕ್ಕೆ ನಿದರ್ಶನ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜ್ಯದ ರೈಲ್ವೆ ಯೋಜನೆಗಳು ಈಗಾಗಲೇ ಅನುಮೋದನೆಗೊಂಡಿವೆ. ಅನುಮೋದನೆಗೊಂಡ ಯೋಜನೆಗಳು ಈ ಬಜೆಟ್​​ನಲ್ಲಿ ಬರುವುದಿಲ್ಲ ಎಂದು ಹೇಳುವ ಮೂಲಕ ಈ ಬಾರಿ ರಾಜ್ಯಕ್ಕೆ ಹೆಚ್ಚಿನ ರೈಲ್ವೆ ಯೋಜನೆ ಘೋಷಣೆಯಾಗದಿರುವುದನ್ನು ಸಿಎಂ ಸಮರ್ಥಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.