ETV Bharat / state

ಕಾಶಿಯಾತ್ರೆಗೆ 5 ಸಾವಿರ ರೂ ಸಹಾಯಧನ; ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿಗೆ ವಿಶೇಷ ಪ್ಯಾಕೇಜ್‌ ಟ್ರಿಪ್ - karnataka state Budget 2022

ಕಳೆದ ಐದು ವರ್ಷಗಳಲ್ಲಿ ಜೀವಿಶಾಸ್ತ್ರ ವ್ಯವಸ್ಥೆಯ ಮೇಲಿನ ಉಂಟಾದ ದುಷ್ಪರಿಣಾಮ ಸರಿದೂಗಿಸಲು ಇದೇ ಮೊದಲ ಬಾರಿಗೆ 100 ಕೋಟಿ ರೂ. ವೆಚ್ಚದಲ್ಲಿ ಹಸಿರು ಆಯವ್ಯಯ ಮಂಡಿಸಲಾಗಿದೆ.

cm Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Mar 4, 2022, 2:51 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು 2022ನೇ ಸಾಲಿನ ರಾಜ್ಯ ಬಜೆಟ್​ ಮಂಡಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಬಾರಿ ಬಜೆಟ್​ನಲ್ಲಿ ನೀಡಿರುವ ಕೊಡುಗೆಗಳು ಈ ಕೆಳಕಂಡಂತಿವೆ.

* ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತ ಹಾಗೂ ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು ಹಳೇಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ.

* ಬೇಲೂರು, ಹಳೇಬೀಡು, ಸೋಮನಾಥಪುರ ಒಳಗೊಂಡಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ.

* ಜೋಗ ಜಲಪಾತದಲ್ಲಿ 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೋಟೆಲ್ ಹಾಗೂ ರೋಪ್‌ವೇ ಅಭಿವೃದ್ಧಿ.

* ನಂದಿ ಬೆಟ್ಟದಲ್ಲಿ 93 ಕೋಟಿ ರೂ.ವೆಚ್ಚದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಅನುಮೋದನೆ. ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಕ್ರಮ.

* ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ.

* ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ದತ್ತಪೀಠಗಳಲ್ಲಿ ರೋಪ್‌ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ.

* ಕರಾವಳಿ ಭಾಗದ ಜಲ ಮೂಲಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ನಿವಾರಿಸಲು 840 ಕೋಟಿ ರೂ. ವೆಚ್ಚದ ವಿನೂತನ ಎಸ್ಪಿ ನಿರ್ವಹಣೆ ಯೋಜನೆ ಜಾರಿ. ಇದು ದೇಶದಲ್ಲೇ ಮೊದಲು.

* ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರ ಬೆಳೆಸಲು ಉತ್ತೇಜನ ನೀಡಲು ಶ್ರೀಗಂಧ ನೀತಿ ಅನುಷ್ಠಾನ.

* ಕಡಲತೀರದ ಪ್ರವಾಸೋದ್ಯಮ ಉತ್ತೇಜನಕ್ಕೆ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಕ್ರಮ. ತದಡಿ ಬಂದರಿನಲ್ಲಿ ಸಮಗ್ರ ಪರಿಸರ ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ.

* ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್‌ ಹಾಗೂ ಕಲಬುರಗಿ ಕೋಟೆಗಳ ಪುನರುಜೀವನಕ್ಕೆ ಕ್ರಮ.

* ರಾಜ್ಯದ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು “Adopt a Monument* ಯೋಜನೆ ಜಾರಿ.

* ಯಾತ್ರಾಸ್ಥಳ ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣ. ಮೊದಲ ಹಂತದ ಕಾಮಗಾರಿಗೆ 45 ಕೋಟಿ ರೂ. ಅನುದಾನ.

*ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ವತಿಯಿಂದ ಕೆ.ಎಸ್.ಟಿ.ಡಿ.ಸಿ.ವತಿಯಿಂದ ಕಾರ್ಯಕ್ರಮ ಜಾರಿ.

ರಾಜ್ಯದಿಂದ ಕಾಶಿ ಯಾತ್ರೆಯನ್ನು ಕೈಗೊಳ್ಳುವ ಸುಮಾರು 30,000 ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ. ತಲಾ 5,000 ರೂ.ಗಳ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್‌ಮರವತ್ತೂರು ಇನ್ನಿತರ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ.

ಪರಿಸರ ಸಂರಕ್ಷಣೆ

ಕಳೆದ ಐದು ವರ್ಷಗಳಲ್ಲಿ ಜೀವಿಶಾಸ್ತ್ರ ವ್ಯವಸ್ಥೆಯ ಮೇಲಿನ ದುಷ್ಪರಿಣಾಮ ಸರಿದೂಗಿಸಲು ಮೊದಲ ಬಾರಿ 100 ಕೋಟಿ ರೂ. ವೆಚ್ಚದಲ್ಲಿ ಹಸಿರು ಆಯವ್ಯಯ (Green Budget) ಜಾರಿ.

ಕರಾವಳಿ ಭಾಗದ ಜಲ ಮೂಲಗಳಲ್ಲಿನ ಪ್ಲಾಸ್ಟಿಕ್ ಮೊಬಿನ ನಿವಾರಿಸಲು 840 ಕೋಟಿ ರೂ. ವೆಚ್ಚದ ವಿನೂತನ ಎಸ್​ಪಿ ನಿರ್ವಹಣೆ ಯೋಜನೆ ಜಾರಿ, ಇದು ದೇಶದಲ್ಲೇ ಮೊದಲು.

• ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರ ಬೆಳೆಸಲು ಉತ್ತೇಜನ ನೀಡಲು ಶ್ರೀಗಂಧ ನೀತಿ ಅನುಷ್ಠಾನ.

ಇದನ್ನೂ ಓದಿ: ಬಜೆಟ್​ 2022: ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ 500 ಕೋಟಿ ರೂ. ಅನುದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.