ETV Bharat / state

ಬಿಜೆಪಿ ಶಾಸಕಾಂಗ ಸಭೆ: ಸಚಿವ, ಶಾಸಕರಿಗೆ ಬಿಎಸ್​ವೈ ಕೊಟ್ಟ ಸೂಚನೆ ಏನು?

ವಿಧಾನ‌ ಪರಿಷತ್ ಉಪಚುನಾವಣೆ ಹಿನ್ನೆಲೆ ನಾಳೆ ಬೆಳಗ್ಗೆ ಎಲ್ಲಾ ಶಾಸಕರು 8.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೇರಬೇಕು. ಉಪಹಾರದ ನಂತರ ಎಲ್ಲರೂ ಒಟ್ಟಾಗಿ ತೆರಳಿ ಡಿಸಿಎಂ ಲಕ್ಷ್ಮಣ ಸವದಿ‌ ಪರ ಮತ ಚಲಾಯಿಸಬೇಕು ಎಂದು ಸಿಎಂ‌ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.

BSY notice to Ministers and MLAs over session
ಬಿಜೆಪಿ ಶಾಸಕಾಂಗ ಸಭೆ
author img

By

Published : Feb 16, 2020, 11:04 PM IST

ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ನಾಳೆ ಬೆಳಗ್ಗೆ ಎಲ್ಲರೂ ಒಟ್ಟಾಗಿ ಹೋಗಿ ಡಿಸಿಎಂ ಲಕ್ಷ್ಮಣ್ ಸವದಿ ಪರ ಮತ ಚಲಾಯಿಸುವಂತೆ ಸೂಚನೆ ನೀಡಲಾಗಿದೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುಮಾರು ಅರ್ಧ ಗಂಟೆ ನಡೆದ ಸಿಎಂ ನೇತೃತ್ವದ ಶಾಸಕಾಂಗ ಸಭೆಯಲ್ಲಿ ನಾಳೆಯಿಂದ ಪ್ರಾರಂಭವಾಗುವ ಜಂಟಿ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದೆ‌. ವಿಧಾನ‌ ಪರಿಷತ್ ಉಪಚುನಾವಣೆ ಹಿನ್ನೆಲೆ ಸೋಮವಾರ ಬೆಳಗ್ಗೆ ಎಲ್ಲಾ ಶಾಸಕರು 8.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೇರಬೇಕು. ಉಪಹಾರದ ನಂತರ ಎಲ್ಲರೂ ಒಟ್ಟಾಗಿ ತೆರಳಿ ಡಿಸಿಎಂ ಲಕ್ಷ್ಮಣ ಸವದಿ‌ ಪರ ಮತ ಚಲಾಯಿಸಬೇಕು ಎಂದು ಸಿಎಂ‌ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೂಚಿಸಿದರು.

ಇದೇ ವೇಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಸವದಿ, ತನಗೆ ಮತ ಹಾಕುವಂತೆ ಶಾಸಕರಲ್ಲಿ ಮನವಿ ಮಾಡಿದರು. ಸದನದಲ್ಲಿ ಎಲ್ಲರೂ ಒಟ್ಟಾಗಿರಬೇಕು, ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡಬಾರದು. ಈ ಬಾರಿಯ ಬಜೆಟ್ ಕಠಿಣವಾಗಿರಲಿದೆ. ಪ್ರತಿಪಕ್ಷಗಳ ಟೀಕೆ, ಆರೋಪಗಳನ್ನು ಸಮರ್ಥವಾಗಿ ಎದುರಿಸಬೇಕು. ಸರ್ಕಾರದ ನಡೆಯನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕು ಎಂದು ಸಿಎಂ ನಿರ್ದೇಶನ ನೀಡಿದರು.

ಇನ್ನು ಫೆ.27ರ ಸಿಎಂ ಹುಟ್ಟುಹಬ್ಬ ಸಮಾರಂಭದಲ್ಲಿ ಪಕ್ಷದ ಎಲ್ಲಾ ಶಾಸಕರೂ ಭಾಗವಹಿಸಬೇಕು. ಕೇಂದ್ರದಿಂದ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಬರುತ್ತಾರೆ. ಹೀಗಾಗಿ ಶಾಸಕರೆಲ್ಲರೂ ಪಾಲ್ಗೊಳ್ಳಬೇಕು ಎಂದು ಸೂಚನೆ ನೀಡಲಾಯಿತು.

ಉಮೇಶ್ ಕತ್ತಿ ಗೈರು:

ಶಾಸಕಾಂಗ ಸಭೆಗೆ ಬಹುತೇಕ ಎಲ್ಲ ಶಾಸಕರು ಪಾಲ್ಗೊಂಡಿದ್ದರು. ಅದರೆ ಅತೃಪ್ತ ಶಾಸಕ ಉಮೇಶ್ ಕತ್ತಿ ಗೈರಾಗಿದ್ದರು. ಇತ್ತ ಸಚಿವ ರಮೇಶ್ ಜಾರಕಿಹೊಳಿ ಜತೆಗೂಡಿ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ ಶಾಸಕಾಂಗ ಸಭೆಗೆ ಆಗಮಿಸಿದರು. ಉಳಿದಂತೆ ಸಚಿವೆ ಶಶಿಕಲಾ ಜೊಲ್ಲೆ, ಬಸನಗೌಡ ಯತ್ನಾಳ್ ಸಭೆಗೆ ಆಗಮಿಸಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.