ETV Bharat / state

ಬಿಎಸ್​ವೈ ನಮ್ಮ ಮಾಸ್​ ಲೀಡರ್​, ಅವರ ಮಾರ್ಗದರ್ಶನದಲ್ಲೇ ಮುಂದುವರೆಯುತ್ತೇವೆ: ಸಿ ಟಿ ರವಿ

ಮಾಜಿ ಸಿಎಂ ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿಲ್ಲ- ಅವರ ಮಾರ್ಗದರ್ಶನದಲ್ಲೇ ನಾವು ಮುಂದುವರೆಯುತ್ತೇವೆ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ

bsy-has-not-retired-from-active-politics-we-will-continue-under-his-guidance-says-ct-ravi
ಬಿಎಸ್​ವೈ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿಲ್ಲ, ಅವರ ಮಾರ್ಗದರ್ಶನದಲ್ಲೇ ಮುಂದುವರೆಯುತ್ತೇವೆ: ಸಿಟಿ ರವಿ
author img

By

Published : Jul 24, 2022, 6:21 PM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿಲ್ಲ, ಚುನಾವಣಾ ರಾಜಕಾರಣಕ್ಕೆ ಮಾತ್ರ ನಿವೃತ್ತಿ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು ಯಡಿಯೂರಪ್ಪ, ಅವರು ನಮ್ಮ ಮಾಸ್ ಲೀಡರ್, ಅವರ ಸಲಹೆ ಪರಿಗಣಿಸಿಯೇ ನಾವು ಮುಂದೆ ಸಾಗುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಅಧಿಕೃತ ನಿವಾಸದಲ್ಲಿ ಮಾಧ್ಯಮಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆಗೆ ನಿಲ್ಲುವುದಿಲ್ಲ ಎಂದಿರುವ ಯಡಿಯೂರಪ್ಪ ಪಕ್ಷ ಸಂಘಟನೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. 140-150 ಸ್ಥಾನ ಗೆಲ್ಲಿಸುವುದಾಗಿ ಹೇಳಿದ್ದಾರೆ. ಅವರು ಸೂಕ್ತವಾದ ಹೇಳಿಕೆಯನ್ನು ಕೊಟ್ಟಿದ್ದಾರೆ. ಯಡಿಯೂರಪ್ಪರ ಮಾರ್ಗದರ್ಶನವನ್ನು ನಾವು ಬಳಸಿಕೊಳ್ಳುತ್ತೇವೆ ಎಂದರು.

ನಮ್ಮಲ್ಲಿ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುವುದು ಪಾರ್ಲಿಮೆಂಟರಿ ಬೋರ್ಡ್, ಸಿಎಂ ಸ್ಪರ್ಧೆ ಬಗ್ಗೆ ಕೂಡ ಅದೇ ತೀರ್ಮಾನ ಮಾಡೋದು ಅದೇ ನಮ್ಮ ಪಾರ್ಟಿಯ ಸರ್ವೋಚ್ಛ ಮಂಡಳಿ, ಯಾರು ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಅದೇ ತೀರ್ಮಾನ ಮಾಡುತ್ತದೆ. ಯಡಿಯೂರಪ್ಪನವರ ಅನುಭವದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಎಸ್​ವೈ ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಅಂತಿಮ ತೀರ್ಮಾನ ಮಾಡೋದು ಪಾರ್ಟಿ. ಈ ಬಗ್ಗೆ ಯಡಿಯೂರಪ್ಪ ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾರೆ, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿ ಟಿ ರವಿ ಸ್ಪಷ್ಟಪಡಿಸಿದ್ದಾರೆ.

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ : ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಉತ್ತಮವಾಗಿ ಆಡಳಿತ ನಡೆಯುತ್ತಿದೆ. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಅವರ ಸರ್ಕಾರದ ಹೆಸರಲ್ಲಿ ನಾವು ಮತ ಕೇಳುತ್ತೇವೆ ಎಂದರು.

ಸಂಪುಟ ವಿಸ್ತರಣೆ ಸುಳಿವು : ನೂತನ ರಾಷ್ಟ್ರಪತಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಿಎಂ ದೆಹಲಿಗೆ ಹೋಗಿದ್ದಾರೆ. ತುಂಬಾ ಜನ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿದೆ. ರಮೇಶ್ ಜಾರಕಿಹೊಳಿಗೆ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಇವರು ಸ್ವಾಭಾವಿಕವಾಗಿ ಮತ್ತೆ ಸಂಪುಟ ಸೇರುವ ಬಯಕೆ ಇದೆ. ಈ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಸಿಎಂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸಿ.ಟಿ ರವಿ ಸ್ಪಷ್ಟನೆ ನೀಡಿದರು.

ಡಿಕೆಶಿ ಸವಾಲು ಸ್ವೀಕಾರ: ಬಿಜೆಪಿ ನಾಯಕರು ಚರ್ಚೆಗೆ ಬರುವಂತೆ ಡಿ ಕೆ ಶಿವಕುಮಾರ್ ಹಾಕಿರುವ ಸವಾಲನ್ನು ನಾವು ಸ್ವೀಕಾರ ಮಾಡಿದ್ದೇವೆ. ಖಂಡಿತವಾಗಿ ನಾವು ಚರ್ಚೆಗೆ ಬರೋಕೆ ರೆಡಿ ಇದ್ದೇವೆ. ನಾನಂತೂ ಮಿಸ್ ಮಾಡದೆ ಚರ್ಚೆಗೆ ಬರುತ್ತೇನೆ. ಯಾವಾಗಲಾದರೂ ಸರಿಯೇ, ಬರೋಕೆ ರೆಡಿ ಇದ್ದೇನೆ. ಅವರು ಬರುವ ದಿನ ನನಗೆ ಎಷ್ಟೇ ಕಷ್ಟ ಆದರೂ ಸರಿಯೇ, ಯಾವ ರಾಜ್ಯದಲ್ಲಿದ್ದರೂ ಸರಿಯೇ ನಾನು ಚರ್ಚೆಗೆ ಬರೋಕೆ ಸಿದ್ಧನಿದ್ದೇನೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯದ ಬೆಂಬಲಕ್ಕಾಗಿ ಡಿಕೆಶಿ ಹಾಗೂ ಕುಮಾರಸ್ವಾಮಿ ನಡುವೆ ಫೈಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಒಕ್ಕಲಿಗ ಯಾವತ್ತಿಗೂ ಸಣ್ಣ ಮನಸ್ಥಿತಿಯಲ್ಲಿ ಯೋಚನೆ ಮಾಡುವವನಲ್ಲ. ಒಕ್ಕಲಿಗರು ಸ್ವಾರ್ಥದ, ಭ್ರಷ್ಟಾಚಾರದ ರಾಜಕಾರಣ ಬೆಂಬಲಿಸೋದಿಲ್ಲ. ಯಾರ ಯಾರ ಯೋಗ್ಯತೆ ಏನು ಎಂದು ಒಕ್ಕಲಿಗರಿಗೂ ಗೊತ್ತಿದೆ. ನಾವು ನೀತಿಗಾಗಿ ರಾಜಕಾರಣ ಬಳಸೋರು, ಆದರೆ ರಾಜಕಾರಣಕ್ಕೆ ಸಮುದಾಯದ ಹೆಸರನ್ನು ಬಳಸೋದಿಲ್ಲ. ನಾನು ಹುಟ್ಟಿರೋ ಜಾತಿ ಮೇಲೆ ಗೌರವ ಇದೆ. ಉಳಿದ ಜಾತಿಗಳ ಮೇಲೂ ಅಷ್ಟೇ ಗೌರವ ಇದೆ. ನೀತಿ ರಾಜಕಾರಣದಿಂದ ಸಮುದಾಯಕ್ಕೆ ಒಳ್ಳೆಯದು ಆಗಿದೆಯೇ ವಿನಃ ಜಾತಿಯ ಹೆಸರಿಂದ ಯಾವುದೇ ಜಾತಿ ಉದ್ಧಾರ ಆಗಿಲ್ಲ. ಕೆಲವರಿಗೆ ತಾತ್ಕಾಲಿಕವಾಗಿ ಲಾಭವಾಗಿ, ಕೊನೆಗೆ ಅವರಿಗೆ ರಿವರ್ಸ್ ಆಗಿದೆ ಎಂದು ಪರೋಕ್ಷವಾಗಿ ಡಿ ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟರು.

ಫ್ಲೆಕ್ಸ್ ಹರಿದು ಹಾಕಿರುವ ವಿಚಾರಕ್ಕೆ ನಾನು ಹೆಚ್ಚೇನು ಹೇಳಲ್ಲ, ನಾನು ಫ್ಲೆಕ್ಸ್ ನಲ್ಲಿ ಇಲ್ಲ, ನಾವು ಜನರ ಹೃದಯದಲ್ಲಿ ಇರುವವರು. ನಾನು ಹಾಳೆಯ ಮೇಲೆ ಇಲ್ಲ, ಹಾಗಾಗಿ ಫ್ಲೆಕ್ಸ್ ಆದರೂ ಹರಿದು ಹಾಕಲಿ, ಬೆಂಕಿಯಾದರೂ ಹಚ್ಚಲಿ ಎಂದರು.

ಕಾಂಗ್ರೆಸ್ ನಾಯಕರ ನಡೆಗೆ ಸಿ ಟಿ ರವಿ ವ್ಯಂಗ್ಯ : ಸಿಎಂ ಆಗಬೇಕಾದರೆ ಮೊದಲು ಚುನಾವಣೆ ಆಗಬೇಕು. ಚುನಾವಣೆಯಲ್ಲಿ ಜನರು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆದಾದ ನಂತರ ಶಾಸಕರು ಸಿಎಂ ಅಭ್ಯರ್ಥಿ ಬಗ್ಗೆ ಹೇಳಬೇಕು. ಅಂತಿಮವಾಗಿ ಅದಕ್ಕೆ ಹೈಕಮಾಂಡ್ ಮುದ್ರೆ ಒತ್ತಬೇಕು. ಆದರೆ ಕಾಂಗ್ರೆಸ್ ನಲ್ಲಿ ಇದು ಯಾವುದನ್ನೂ ಮಾಡಿಲ್ಲ. ಆಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಆರಂಭಿಸಿದ್ದಾರೆ. ಕೂಸು ಹುಟ್ಟೋಕೆ ಮುನ್ನ ಕುಲಾವಿ ಹೊಲಿಸುವ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಲ್ಲಿ ಸಿಎಂ ಸ್ಪರ್ಧೆ ಮಾಡ್ತಿರೋರು ಯಾರು ಜನರ ಹಿತಕ್ಕಾಗಿ ಅಲ್ಲ. ಅವರ ಸ್ವಾರ್ಥಕ್ಕಾಗಿ ಸಿಎಂ ಸ್ಥಾನಕ್ಕಾಗಿ ಫೈಟ್ ಗೆ ಇಳಿದಿದ್ದಾರೆ. ಜಾತಿ ಹೆಸರಲ್ಲಿ ಹೋದವರನ್ನು ಜನರು ಮಣ್ಣು ಮುಕ್ಕಿಸಿದ್ದಾರೆ. 2018ರಲ್ಲಿ ನಾನೇ ನಾನೇ ಎಂದವರಿಗೆ ಪಾಠ ಕಲಿಸಿದ್ದಾರೆ. ಇವರದ್ದು ಹಗಲು ಕನಸು, ಇವರ ಕಿತ್ತಾಟ ತಮಾಷೆ ಹಾಗೂ ಹೇಸಿಗೆ ಅನಿಸುತ್ತಿದೆ. ಜಾತಿ ಹೆಸರಲ್ಲಿ ಇವರು ಕಿತ್ತಾಡ್ತಿದ್ದಾರೆ, ಇವರ ಕಿತ್ತಾಟದಿಂದ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಂದು ಸಿ ಟಿ ರವಿ ಕಿಡಿಕಾರಿದರು.

ಓದಿ : ಬಿಎಸ್​ವೈ ನಂತರ ವರ್ಷ ಮುಗಿಸಿದ ಮೊದಲ ಬಿಜೆಪಿ ಸಿಎಂ ಬೊಮ್ಮಾಯಿ..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.