ETV Bharat / state

ಕೋವಿಡ್ ಕಟ್ಟಿಹಾಕುವುದರಲ್ಲೇ ಬಹುಪಾಲು ಶ್ರಮಿಸಿದ ಬಿಎಸ್​ವೈ ಆಡಳಿತ; ಈ ಮಧ್ಯೆ ಒಂದಿಷ್ಟು ಸಾಧನೆಯ ತೃಪ್ತಿ.. - ಎಸ್​ಎಸ್​ಎಲ್​ಸಿ ಪರೀಕ್ಷೆಯ ದಿಟ್ಟ ನಿರ್ಧಾರ

ಸಮಾಜದ ನಾನಾ ವರ್ಗದಿಂದ, ಪ್ರತಿಪಕ್ಷಗಳಿಂದ, ಪೋಷಕರಿಂದ ತೀವ್ರ ವಿರೋಧದ‌ ಮಧ್ಯೆಯೂ ಬಿಜೆಪಿ ಸರ್ಕಾರ ಯಶಸ್ವಿಯಾಗಿ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ನೆರವೇರಿಸಿತು. ಇತರ ಯಾವ ರಾಜ್ಯಗಳೂ ಕೋವಿಡ್ ಅಬ್ಬರದ ಮಧ್ಯೆ ಪರೀಕ್ಷೆ ನಡೆಸುವ ಬಗ್ಗೆ ಊಹೆಯನ್ನೂ ಮಾಡಿರಲಿಲ್ಲ.

CM BS Yadiyurappa
ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪ
author img

By

Published : Jul 25, 2021, 5:06 PM IST

ಬೆಂಗಳೂರು: ಯಡಿಯೂರಪ್ಪ ಸರ್ಕಾರ ನಾಳೆಗೆ ಎರಡು ವರ್ಷದ ಆಡಳಿತ ಪೂರೈಸಲಿದೆ. ನಾಯಕತ್ವದ ಅ‌ನಿಶ್ಚಿತತೆ, ಕೋವಿಡ್ ಮಹಾಮಾರಿಯ ಸವಾಲಿನ ಮಧ್ಯೆ ಬಿಜೆಪಿ ಸರ್ಕಾರ ತನ್ನ ಎರಡು ವರ್ಷವನ್ನು ಪೂರೈಸುತ್ತಿದೆ. ಕೋವಿಡ್ ಮಹಾಮಾರಿಯ ಮಧ್ಯೆ ಬಿಜೆಪಿ ಸರ್ಕಾರ ನಿರೀಕ್ಷಿತ ಸಾಧನೆ ತೋರುವಲ್ಲಿ ವಿಫಲವಾಗಿದ್ದರೂ, ಒಂದಿಷ್ಟು ಸಾಧನೆಗಳನ್ನು ಮಾಡುವಲ್ಲಿ ಸಫಲವಾಗಿದೆ.

ಎರಡು ವರ್ಷದ ಹರುಷದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಆರಂಭದಿಂದಲೂ ಕಾಡಿದ್ದು ಆರ್ಥಿಕ ಸಂಕಷ್ಟ. ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಯಡಿಯೂರಪ್ಪ ಸರ್ಕಾರ ಆಡಳಿತ ನಡೆಸುವ ಅನಿವಾರ್ಯ ಬಂದೊದಗಿತು. ಕೋವಿಡ್ ಮಹಾ‌ಮಾರಿ, ಲಾಕ್​ಡೌನ್​ ಹೇರಿದ ಆರ್ಥಿಕ ಬರೆ ಯಡಿಯೂರಪ್ಪ ಸರ್ಕಾರದ ಆಡಳಿತಕ್ಕೆ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿತು. ಈ ಮಧ್ಯೆಯೂ ಯಡಿಯೂರಪ್ಪ ಸರ್ಕಾರ ಇತಿ ಮಿತಿಯೊಳಗೆ ಕೆಲ ಸಾಧನೆ, ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ.

ವೈರುದ್ಯಗಳ ಮಧ್ಯೆಯೂ ಒಂದಿಷ್ಟು ಕೆಲಸ: ಯಡಿಯೂರಪ್ಪ ಸರ್ಕಾರ ತನ್ನ ಎರಡು ವರ್ಷದ ಆಡಳಿತಾವಧಿಯಲ್ಲಿ ವೈರುಧ್ಯಗಳನ್ನೇ ಎದುರಿಸಿಕೊಂಡು ಬರುತ್ತಿದೆ. ಆದರೂ ಒಂದಿಷ್ಟು ಉತ್ತಮ ತೀರ್ಮಾನಗಳನ್ನು ಕೈಗೊಂಡಿದೆ. ಸಂಕಷ್ಟದ ಮಧ್ಯೆ ಇತಿಮಿತಿಯೊಳಗೆ ಕೆಲ ಉತ್ತಮ ಕೆಲಸಗಳನ್ನು ಯಡಿಯೂರಪ್ಪ ಸರ್ಕಾರ ಕೈಗೊಂಡಿದೆ.

ಕೋವಿಡ್ ಮೊದಲ‌ ಅಲೆ ಕಟ್ಟಿಹಾಕಲು ಸಫಲ: ಯಡಿಯೂರಪ್ಪ ಸರ್ಕಾರ ಕೋವಿಡ್ ಮೊದಲ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಬಹುತೇಕ ಮಟ್ಟಿಗೆ ಸಫಲವಾಗಿತ್ತು.

ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಅಲೆ ಬೊಬ್ಬಿರಿಯುತ್ತಿದ್ದರೂ, ಕರ್ನಾಟಕ ಮೊದಲ‌ ಅಲೆ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಯಶ ಕಂಡಿತು. ಮೊದಲ‌ ಅಲೆ ರಾಜ್ಯದಲ್ಲಿ ತನ್ನ ರೌದ್ರಾವತಾರ ಪ್ರಾರಂಭಿಸುತ್ತಿದ್ದ ಹಾಗೇ ಸಿಎಂ ಬಿಎಸ್​ವೈ ರಾಜ್ಯದಲ್ಲಿ ಮೊದಲೇ ಲಾಕ್‌ಡೌನ್ ಹೇರಿಕೆ ಮಾಡಿತು. ನಂತರ ಕೇಂದ್ರ ಸರ್ಕಾರ ರಾಷ್ಟ್ರೀಯ ಲಾಕ್‌ಡೌನ್ ಘೋಷಣೆ ಮಾಡಿತ್ತು.

ಕೊರೊನಾದ ಗಾಂಭೀರ್ಯತೆಯನ್ನು ಅರಿತ ಯಡಿಯೂರಪ್ಪ ಆಡಳಿತ ಕ್ಷಿಪ್ರ ಕಾರ್ಯಾಚರಣೆಗಿಳಿದು ಕೋವಿಡ್ ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಾಧ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿತು. ಪ್ರತಿ ಹಂತದಲ್ಲೂ ಕೋವಿಡ್ ನಿರ್ವಹಣೆಗಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿ, ತಂತ್ರಜ್ಞಾನಗಳನ್ನು ಬಳಸಿ ಕೋವಿಡ್ ಪಸರುವಿಕೆಯನ್ನು ನಿಯಂತ್ರಿಸುವಲ್ಲಿ ದೊಡ್ಡ ಮಟ್ಟಿಗೆ ಯಶ ಕಂಡಿತು. ಮೊದಲ ಅಲೆ ಕೈ‌ಮೀರದಂತೆ ನೋಡಿಕೊಳ್ಳುವಲ್ಲಿ ಸಫಲವಾಯಿತು.

ಕೋವಿಡ್ ವಿಶೇಷ ಪ್ಯಾಕೇಜ್ ಘೋಷಣೆ: ಕೋವಿಡ್ ಹೇರಿದ ಮೊದಲ ಬಾರಿಯ ಲಾಕ್‌ಡೌನ್​ನಿಂದ ರಾಜ್ಯದ ಜನರು, ಬಡವರು, ಕಾರ್ಮಿಕ ವರ್ಗ ನಲುಗಿ ಹೋಗಿತ್ತು.‌ ದುಡಿಮೆ, ಊಟ ಇಲ್ಲದೆ ಬಡ ಸಮುದಾಯದ ಜೀವನವೇ ನರಕವಾಯಿತು.

ಇದನ್ನ ಮನಗಂಡ ಯಡಿಯೂರಪ್ಪ ಸರ್ಕಾರ ನೊಂದ, ಬಡ, ಕಾರ್ಮಿಕ ವರ್ಗದವರಿಗೆ ಕೋವಿಡ್ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಲ್ಲಿ ಮೊದಲಿಗನಾಗಿತ್ತು. ಕೋವಿಡ್ ಮೊದಲ ಅಲೆ ವೇಳೆ ಸಂಕಷ್ಟಕ್ಕೀಡಾದ ಸಮಯದಾಯದವರಿಗೆ ಮೊದಲ ಪ್ಯಾಕೇಜ್‌ನಲ್ಲಿ 1,610 ಕೋಟಿ ರೂ. 2ನೇ ಪ್ಯಾಕೇಜ್‌ನಲ್ಲಿ 162 ಕೋಟಿ ರೂ. ಹಾಗೂ 3ನೇ ಪ್ಯಾಕೇಜ್‌ನಲ್ಲಿ 500 ಕೋಟಿ ರೂ. ಸೇರಿದಂತೆ ಒಟ್ಟು 2,277 ಕೋಟಿ ರೂ.ಗಳ ಮೂರು ಹಂತದ ಪರಿಹಾರದ ಪ್ಯಾಕೇಜನ್ನು ಘೋಷಿಸಿತು.

ಅಸಂಘಟಿತ ವಲಯದ ಕಾರ್ಮಿಕರು, ರೈತರು, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು, ರೇಷ್ಮೆ ಬೆಳೆಗಾರರು, ನೇಕಾರರು ಮತ್ತು ಮೀನುಗಾರರು, ನಿರ್ಮಾಣ ವಲಯದ ಕಾರ್ಮಿಕರು, ಪಾರಂಪರಿಕ ವೃತ್ತಿನಿರತ ಕ್ಷೌರಿಕರು ಮತ್ತು ಮಡಿವಾಳರು, ಟ್ಯಾಕ್ಸಿ ಚಾಲಕರು ಮತ್ತು ಆಟೋ ಸೇರಿ ಬಡವರಿಗೆ ಮುಂಗಡ, ಉಚಿತ ಪಡಿತರ ಹಾಗೂ ಧನಸಹಾಯವನ್ನು ನೀಡಿ, ಸ್ವಲ್ಪ ಮಟ್ಟಿಗೆ ಲಾಕ್‌ಡೌನ್ ಸಂಕಷ್ಟವನ್ನು ನೀಗಿಸಲು ಯತ್ನಿಸಿತು.

2ನೇ ಕೋವಿಡ್ ಅಲೆಯ ಸಂದರ್ಭದಲ್ಲೂ ಲಾಕ್‌ಡೌನ್​ನಿಂದ ಬಡ ವರ್ಗ ಸಂಕಷ್ಟಕ್ಕೀಡಾಗಿದ್ದನ್ನು ಮನಗಂಡ ಸರ್ಕಾರ ಮತ್ತೊಂದು ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಿತು. ಸಂಕಷ್ಟಕ್ಕೀಡಾದ ಎಲ್ಲ ವರ್ಗದವರಿಗೆ 1250 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಲಾಯಿತು. ಆರ್ಥಿಕ ಸಂಕಷ್ಟದ ಮಧ್ಯೆ ಯಡಿಯೂರಪ್ಪ ಸರ್ಕಾರ ಅಳೆದು ತೂಗಿ ಇತಿಮಿತಿಯೊಳಗೆ ಪರಿಹಾರ ಪ್ಯಾಕೇಜ್ ಘೋಷಿಸಿ ಸಾಮಾಜಿಕ ಬದ್ಧತೆ ತೋರಿಸಿರುವ ಬಗ್ಗೆ ವಿಶ್ಲೇಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯ ದಿಟ್ಟ ನಿರ್ಧಾರ: ಸಮಾಜದ ನಾನಾ ವರ್ಗದಿಂದ, ಪ್ರತಿಪಕ್ಷಗಳಿಂದ, ಪೋಷಕರಿಂದ ತೀವ್ರ ವಿರೋಧದ‌ ಮಧ್ಯೆಯೂ ಬಿಜೆಪಿ ಸರ್ಕಾರ ಯಶಸ್ವಿಯಾಗಿ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನೆರವೇರಿಸಿತು. ಇತರ ಯಾವ ರಾಜ್ಯಗಳೂ ಕೋವಿಡ್ ಅಬ್ಬರದ ಮಧ್ಯೆ ಪರೀಕ್ಷೆ ನಡೆಸುವ ಬಗ್ಗೆ ಊಹೆಯನ್ನೂ ಮಾಡಿರಲಿಲ್ಲ. ಆದರೆ, ಬಿಎಸ್​ವೈ ಸರ್ಕಾರ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ಸಂಚಕಾರ ಬರದ ರೀತಿಯಲ್ಲಿ ಕ್ರಮಬದ್ಧವಾಗಿ, ಸುಗಮವಾಗಿ ಪರೀಕ್ಷೆ ಕೈಗೊಂಡು ದೇಶಕ್ಕೆ ಮಾದರಿಯಾಯಿತು.

ನಿರುದ್ಯೋಗ, ಭಾರೀ ಆರ್ಥಿಕತೆ ಕುಸಿತದಿಂದ ಪಾರು: ಲಾಕ್‌ಡೌನ್ ನಂತರ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಕಳೆದ ವರ್ಷದ ಲಾಕ್ ಡೌನ್‌ನಿಂದ ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ 29.8%ಗೆ ದಾಖಲೆ ಏರಿಕೆ ಕಂಡಿತ್ತು. ನಿರುದ್ಯೋಗದ ಕರಿ ಛಾಯೆ ವ್ಯಾಪಿಸುತ್ತಿರುವ ಹೊತ್ತಿನಲ್ಲೇ ರಾಜ್ಯ ಸರ್ಕಾರ ಆರ್ಥಿಕತೆ ಚೇತರಿಕೆ, ವಿಶೇಷ ಪ್ಯಾಕೇಜ್​ನ ಕೆಲ ನಿರ್ಧಾರ ಕೈಗೊಂಡಿತು.

ಇದರಿಂದ ರಾಜ್ಯದ ನಿರುದ್ಯೋಗ ಪ್ರಮಾಣ ಅನ್​ಲಾಕ್​ ಪ್ರಕ್ರಿಯೆ ಆರಂಭವಾದ ಕಾರಣ ಚೇತರಿಕೆ ಕಾಣತೊಡಗಿತು. ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ ನಿರುದ್ಯೋಗ ಪ್ರಮಾಣ 1.2% ಗೆ ಇಳಿಕೆಯಾಯಿತು. 2ನೇ ಅಲೆಗೆ ಮತ್ತೆ ಲಾಕ್‌ಡೌನ್ ಹೇರಿರುವ ಕಾರಣ ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ 5.3% ಗೆ ಏರಿಕೆ ಕಂಡಿತ್ತು. ನಿರುದ್ಯೋಗ ಪ್ರಮಾಣ ಮಿತಿ ಮೀರದಂತೆ ನೋಡಿಕೊಳ್ಳುವಲ್ಲಿ ಸರ್ಕಾರ ಸ್ವಲ್ಪ ಮಟ್ಟಿಗೆ ಯಶ ಕಂಡಿದೆ.

ಕೃಷಿ ವಲಯದಲ್ಲಿ ಉತ್ತಮ ಸಾಧನೆ: ಇತ್ತ ಪಾತಾಳಕ್ಕೆ ಇಳಿದಿದ್ದ ರಾಜ್ಯದ ಆರ್ಥಿಕತೆಯನ್ನು ಮೇಲೇಳಿಸಲು ಯಡಿಯೂರಪ್ಪ ಸರ್ಕಾರ ಕೆಲ ಉದ್ಯಮ ಸ್ನೇಹಿ, ಸುಧಾರಣಾ ಕ್ರಮಗಳನ್ನು ಕೈಗೊಂಡಿತು. ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸುಗಮ ವಹಿವಾಟಿಗೆ ಯತ್ನಿಸಿತು. ಆದಷ್ಟು ಬೇಗ ರಾಜ್ಯದ ಆರ್ಥಿಕತೆ ಚೇತರಿಕೆ ಕಾಣುವ ನಿಟ್ಟಿನಲ್ಲಿ ಸರ್ಕಾರ ಕೆಲ ಪೂರಕ ನಿರ್ಧಾರಗಳನ್ನು ಕೈಗೊಂಡಿತು. ಈ ಹಿನ್ನೆಲೆ ಕಳೆದ ಎರಡು ವರ್ಷದಲ್ಲಿ ರಾಜ್ಯಕ್ಕೆ ಗಣನೀಯ ಪ್ರಮಾಣದಲ್ಲಿ ಹೂಡಿಕೆಗಳು ಹರಿದು ಬಂದಿವೆ. ಇತ್ತ ಕೃಷಿ ವಲಯದ ವೃದ್ಧಿಯಲ್ಲೂ ಗಣನೀಯ ಏರಿಕೆ ಕಂಡಿದೆ. ಲಾಕ್‌ಡೌನ್ ಮಧ್ಯೆಯೂ ರಾಜ್ಯದಲ್ಲಿ ಕೃಷಿ ವಲಯ ಉತ್ತಮ ಸಾಧನೆ ಕಂಡಿದೆ.

ಲಸಿಕಾ ಅಭಿಯಾನದಲ್ಲೂ ಉತ್ತಮ ಸಾಧನೆ: ಲಸಿಕಾ ಕಾರ್ಯಕ್ರಮದಲ್ಲೂ ರಾಜ್ಯ ಸರ್ಕಾರ ಉತ್ತಮ ಸಾಧನೆ ತೋರಿಸುವಲ್ಲಿ ಸಫಲವಾಗಿದೆ. ಕೊರತೆಯ ಮಧ್ಯೆಯೂ ಎಲ್ಲರಿಗೂ ಲಸಿಕೆ ಪೂರೈಕೆ ಮಾಡುವಲ್ಲಿ ಬಿಎಸ್​ವೈ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿತು.

ಲಸಿಕೆ ಪೂರೈಕೆಯ ಗೊಂದಲ, ಕೊರತೆಯ ಮಧ್ಯೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಉತ್ತಮ ಸಾಧನೆ ಮಾಡಿದೆ. ನೆರೆ ರಾಜ್ಯಗಳಿಗಿಂತ ಅತಿ ಹೆಚ್ಚು ಲಸಿಕೆ ಹಾಕಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದಲ್ಲೂ ಕರ್ನಾಟಕ ಕೋವಿಡ್ ಲಸಿಕಾಕರಣದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ.

ಕೋವಿಡ್ ಮೃತ ಕುಟುಂಬಕ್ಕೆ ಪರಿಹಾರ: ಯಡಿಯೂರಪ್ಪ ಸರ್ಕಾರ ಆರ್ಥಿಕ ಸಂಕಷ್ಟದ ಮಧ್ಯೆಯೂ ಕೋವಿಡ್ ಮೃತ ಕುಟುಂಬಸ್ಥರಿಗೂ ಪರಿಹಾರ ಘೋಷಿಸಿದ್ದು ಪ್ರಶಂಸನೀಯವಾಗಿದೆ.

ದೊಡ್ಡ ಹೊರೆಯಾಗುವ ವಾಸ್ತವತೆಯ ಮಧ್ಯೆಯೂ ಕೋವಿಡ್​ನಿಂದ ದುಡಿಯುವ ಕೈಗಳನ್ನು ಕಳೆದುಕೊಂಡ ಬಿಪಿಎಲ್ ಪಡಿತರ ಹೊಂದಿರುವ ಕುಟುಂಬಸ್ಥರಿಗೆ ಯಡಿಯೂರಪ್ಪ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಣೆ‌ ಮಾಡಿದೆ. ಕೇಂದ್ರ ಸರ್ಕಾರವೇ ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಹಿಂದೆ ಮುಂದೆ ನೋಡುತ್ತಿದೆ. ಅಂಥಹದರಲ್ಲಿ ಕೆಲವೇ ಕೆಲ ರಾಜ್ಯಗಳು ವೈರಸ್​ನಿಂದ ಮೃತ ಹೊಂದಿದ ಕುಟುಂಬಸ್ಥರಿಗೆ ಪರಿಹಾರ ಘೋಷಣೆಯ ಧೈರ್ಯ ಮಾಡಿತ್ತು. ಅದರಲ್ಲಿ ರಾಜ್ಯ ಸರ್ಕಾರವೂ ಒಂದಾಗಿದೆ.

ಆರ್ಥಿಕ ಸಂಕಷ್ಟದ ಮಧ್ಯೆ ಹೊರೆ ವಿಧಿಸದ ಸರ್ಕಾರ: ಎರಡು ವರ್ಷದ ಹರುಷದಲ್ಲಿರುವ ಸರ್ಕಾರಕ್ಕೆ ಆರಂಭದಿಂದಲೂ ಕಾಡಿದ್ದು ಆರ್ಥಿಕ ಸಂಕಷ್ಟ. ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಯಡಿಯೂರಪ್ಪ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕಾಯಿತು. ಸೀಮಿತ ಸಂಪನ್ಮೂಲದಿಂದಲೇ ಹಿತ ಮಿತದಡಿ ಬಜೆಟ್ ಮಂಡಿಸುವ ಅನಿವಾರ್ಯ ಎದುರಾಯಿತು.

ಯಡಿಯೂರಪ್ಪ ಸರ್ಕಾರಕ್ಕೆ ಅಧಿಕಾರ ಸ್ವೀಕರಿಸಿದ ಆರಂಭದಿಂದಲೂ ಸವಾಲುಗಳೇ ಹೆಚ್ಚಾಗಿ ಎದುರಾಗಿದ್ದು. ಅದರಲ್ಲೂ ಆರ್ಥಿಕ ಸಂಕಷ್ಟ ಬಿಜೆಪಿ ಸರ್ಕಾರವನ್ನು ಮೊದಲಿನಿಂದಲೂ ಬಹುವಾಗಿ ಕಾಡಿದ ಸವಾಲು. ತಮ್ಮ ಹೊಸ ಪರಿಕಲ್ಪನೆ, ಜನಪ್ರಿಯ ಯೋಜನೆಗಳನ್ನು ಘೋಷಿಸಲು ಬಿಗಿ ಆರ್ಥಿಕತೆ ಯಡಿಯೂರಪ್ಪ ಸರ್ಕಾರವನ್ನು ಕಟ್ಟಿ ಹಾಕಿತ್ತು. ಇದರ‌ ಮಧ್ಯೆ ಜನರ ಮೇಲೆ ಹೆಚ್ಚಿನ ಹೊರೆ ಹಾಕದಂತೆ, ವಾರ್ಷಿಕ ಆಯವ್ಯಯ ಮಂಡಿಸುವ ಅನಿವಾರ್ಯತೆ ಇತ್ತು. ಅದರಂತೆ ಸಿಎಂ ಯಡಿಯೂರಪ್ಪ ಸೊರಗಿದ ಬೊಕ್ಕಸದ ಮಧ್ಯೆಯೂ ರಾಜ್ಯದ ಜನತೆ ಮೇಲೆ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಹೊರೆ ಹಾಕಲಿಲ್ಲ.

ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಸ್ಥಾನಮಾನ: ಕೇಂದ್ರ ಜಲ ಆಯೋಗದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಗಿಟ್ಟಿಸಿಕೊಂಡಿರುವುದು ಯಡಿಯೂರಪ್ಪ ಸರ್ಕಾರದ ಹೆಗ್ಗಳಿಕೆಯಾಗಿದೆ.

ರಾಷ್ಟ್ರೀಯ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಎಂಬ ಹೆಗ್ಗಳಿಕೆಗೆ ಈ ಭದ್ರಾ ಮೇಲ್ದಂಡೆ ಯೋಜನೆ ಪಾತ್ರವಾಗಿದೆ. ಈ ಸಂಬಂಧ ಯಡಿಯೂರಪ್ಪ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಹೇರುತ್ತಾ ಬಂದಿತ್ತು. ಸಿಎಂ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದರು. ಈ ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗಲಿದೆ. ಯೋಜನೆಗೆ 21,450 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 16,125 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ.

ಇದನ್ನೂ ಓದಿ: ನಾನಿಲ್ಲಿ ಪ್ರವಾಹ ಪ್ರದೇಶದ ಭೇಟಿಗೆ ಬಂದಿದ್ದೇನೆ, ನಾಯಕತ್ವ ಚರ್ಚೆ ಬೇಡ: ಬಿಎಸ್‌ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.