ETV Bharat / state

ಬಿಎಸ್​ವೈಮುಕ್ತ ಕನಸು ರಾಷ್ಟ್ರೀಯ ಬಿಜೆಪಿ ನಾಯಕರದ್ದಾಗಿದೆ: ಹೆಚ್‌.ಸಿ ಮಹದೇವಪ್ಪ

ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ, ಹಿಂದೆ ಸರ್ಕಾರ ರಚನೆ ಮಾಡುವ ಸಂದರ್ಭ ಯಡಿಯೂರಪ್ಪ ಬೇಕಾಗಿತ್ತು. ಆದರೆ ಈಗ ರಾಷ್ಟ್ರೀಯ ನಾಯಕರಿಗೆ ಬಿಎಸ್​ವೈ ಬೇಕಾಗಿಲ್ಲ ಎಂದು ಹೇಳಿದ್ದಾರೆ.

author img

By

Published : Jul 26, 2021, 10:57 PM IST

KPCC president Ishwar Khandre and former minister H.C. Mahadevappa
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ

ಬೆಂಗಳೂರು: ಅನಿವಾರ್ಯ ಸಂದರ್ಭದಲ್ಲಿ ಬಳಸಿಕೊಂಡು ಈಗ ಬಿ.ಎಸ್.ಯಡಿಯೂರಪ್ಪಗೆ ಕೈಕೊಡುವ ಕಾರ್ಯವನ್ನು ಕೇಂದ್ರ ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಹಿಂದೆ ಸರ್ಕಾರ ರಚನೆ ಮಾಡುವ ಸಂದರ್ಭ ಯಡಿಯೂರಪ್ಪ ಬೇಕಾಗಿತ್ತು. ಆದರೆ ಈಗ ರಾಷ್ಟ್ರೀಯ ನಾಯಕರಿಗೆ ಬಿಎಸ್​ವೈ ಬೇಕಾಗಿಲ್ಲ ಎಂದು ಹೇಳಿದ್ದಾರೆ.

  • ಎದುರಾಳಿ ಪಕ್ಷದ 17 ಜನ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ರಚಿಸಲು ಹೊರಟಿದ್ದ ಪ್ರಯತ್ನಕ್ಕೆ ನೇರವಾಗಿ ಬೆಂಬಲ ನೀಡಿದ್ದ @BJP4Karnataka ಪಕ್ಷವು ಇದೀಗ ಪಕ್ಷವು ಒಂದು ಹಂತಕ್ಕೆ ತಲುಪುತ್ತಿದೆ ಎಂಬ ಸೂಚನೆಯನ್ನರಿತು ಸರ್ಕಾರ ರಚನೆಗೆ ಕಾರಣವಾದ ಯಡಿಯೂರಪ್ಪನವರನ್ನು
    ಕೆಳಗಿಳಿಸಿದೆ

    1/4 pic.twitter.com/dW5HsbgWwn

    — Dr H.C.Mahadevappa (@CMahadevappa) July 26, 2021 " class="align-text-top noRightClick twitterSection" data=" ">

ಎದುರಾಳಿ ಪಕ್ಷದ 17 ಜನ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡ್ರು. ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ರಚಿಸಲು ಹೊರಟಿದ್ದ ಯಡಿಯೂರಪ್ಪ ಪ್ರಯತ್ನಕ್ಕೆ ನೇರವಾಗಿ ಬೆಂಬಲ ನೀಡಿದ್ದು ರಾಜ್ಯ ಬಿಜೆಪಿ ಪಕ್ಷ. ಇದೀಗ ಪಕ್ಷವು ಒಂದು ಹಂತಕ್ಕೆ ತಲುಪುತ್ತಿದೆ ಎಂಬ ಸೂಚನೆಯನ್ನರಿತು ಸರ್ಕಾರ ರಚನೆಗೆ ಕಾರಣವಾದ ಯಡಿಯೂರಪ್ಪನವರನ್ನು ಕೆಳಗಿಳಿಸಿದೆ.

ಓರ್ವ ಜನ ಬೆಂಬಲ ಇರುವ ನಾಯಕನಾಗಿದ್ದರೂ, ಕೇಂದ್ರದ ಬಿಜೆಪಿ ಪಕ್ಷದ ನಾಯಕರ ಪ್ರೇರಣೆಯಿಂದ ಅನೈತಿಕ ಮಾರ್ಗದಲ್ಲಿ ಸರ್ಕಾರವನ್ನು ರಚಿಸಿದ ಯಡಿಯೂರಪ್ಪನಂತಹ ನಾಯಕನನ್ನು 2ನೇ ಆಲೋಚನೆಯೇ ಇಲ್ಲದೇ ಬಿಜೆಪಿ ಪಕ್ಷವು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದೆ.ಈ ಮೂಲಕ ರಾಷ್ಟ್ರೀಯ ಬಿಜೆಪಿ ಪಕ್ಷವು ಬಿಎಸ್ ಯಡಿಯೂರಪ್ಪ ಅವರಿಗೂ ತನ್ನ ಫ್ಯಾಸಿಸಂ ಅನ್ನು ಪರಿಚಯಿಸಿದೆ ಎಂದು ಮಾಜಿ ಸಚಿವ ಎಚ್. ಸಿ. ಮಹದೇವಪ್ಪ ಅವರ ಟ್ವೀಟ್ ಮಾಡಿದ್ದಾರೆ.

ಓದಿ: ಹೆದರಿಸಿ ಯಡಿಯೂರಪ್ಪನಿಂದ ರಾಜೀನಾಮೆ ಕೊಡಿಸಿದ್ದಾರೆ : ವಿಪಕ್ಷ ನಾಯಕ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.