ETV Bharat / state

ಆಗಸ್ಟ್​ 6ರಂದು ದೆಹಲಿಯಲ್ಲಿ ಬಿಎಸ್‌ವೈ ಮಹತ್ವದ ಚರ್ಚೆ; ರಾಜ್ಯ ಸಂಸದರಿಗೆ ಭೋಜನಕೂಟ - ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ರಾಜ್ಯದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಆಗಸ್ಟ್​ 6ರಂದು ದೆಹಲಿಯ ಖಾಸಗಿ ಹೋಟೆಲ್​​ನಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಬಿಎಸ್​ ಯಡಿಯೂರಪ್ಪ,BS Yediyurappa
author img

By

Published : Aug 2, 2019, 11:26 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಆಗಸ್ಟ್​ 6ರಂದು ರಾಜ್ಯದ ಸಂಸದರೊಂದಿಗೆ ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದಾರೆ.

ರಾಜ್ಯ ಸರ್ಕಾರದಿಂದ ಕಳುಹಿಸಲಾಗಿರುವ ಯೋಜನೆಗಳಿಗೆ ಸಂಬಂಧಿಸಿದ ಪ್ರಸ್ತಾವಣೆಗಳು ಹಾಗೂ ಬಾಕಿ ಉಳಿದಿರುವ ವಿವಿಧ ಯೋಜನೆಗಳ ಕುರಿತು ಈ ಸಭೆಯಲ್ಲಿ ವಿಸ್ತೃತ ಚರ್ಚೆಯಾಗುವ ಸಾಧ್ಯತೆ ಇದೆ.

ರಾಜ್ಯದ ಎಲ್ಲ ಸಂಸದರು ಈ ಸಭೆಯಲ್ಲಿ ಭಾಗಿಯಾಗುವಂತೆ ಬಿಎಸ್​ವೈ ಮನವಿ ಮಾಡಿದ್ದು, ಖಾಸಗಿ ಹೋಟೆಲ್‌ನಲ್ಲಿ ಭೋಜನಕೂಟವನ್ನೂ ಏರ್ಪಡಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್‌ವೈ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಜೊತೆ ಚರ್ಚೆ ನಡೆಸಲಿದ್ದಾರೆ.

Intro:Body:

ರಾಜ್ಯದ ಸಂಸದರು, ರಾಜ್ಯಸಭೆ ಸದಸ್ಯರಿಗೆ ಬಿಎಸ್​ವೈ ಭೋಜನಕೂಟ... ಆಗಸ್ಟ್​ 6ರಂದು ಮಹತ್ವದ ಚರ್ಚೆ

ಬೆಂಗಳೂರು: ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿಎಸ್​ ಯಡಿಯೂರಪ್ಪ ಬರುವ ಆಗಸ್ಟ್​ 6ರಂದು ರಾಜ್ಯದ ಸಂಸದರು ಹಾಗೂ ರಾಜ್ಯಸಭೆ ಸದಸ್ಯರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. 

ರಾಜ್ಯ ಸರ್ಕಾರದಿಂದ ಕಳುಹಿಸಲಾಗಿರುವ ಪ್ರಸ್ತಾವಣೆಗಳ ಬಗ್ಗೆ ಹಾಗೂ ಕೇಂದ್ರದಲ್ಲಿ ಬಾಕಿ ಉಳಿದಿರುವ ರಾಜ್ಯದ ವಿವಿಧ ಯೋಜನೆಗಳ ಕುರಿತು ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. 

ರಾಜ್ಯದ ಎಲ್ಲ ಸಂಸದರೂ ಹಾಗೂ ರಾಜ್ಯಸಭೆ ಸದಸ್ಯರೂ ಈ ಸಭೆಯಲ್ಲಿ ಭಾಗಿಯಾಗುವಂತೆ ಬಿಎಸ್​ವೈ ಮನವಿ ಮಾಡಿದ್ದು, ಭೋಜನಕೂಟ ಏರ್ಪಡಿಸಿದ್ದಾರೆ. ನವದೆಹಲಿಯ ಖಾಸಗಿ ಹೊಟೇಲ್​​ನಲ್ಲಿ ಈ ಸಭೆ ನಡೆಯಲಿದೆ. 

ಇನ್ನು ರಾಜ್ಯ ಸಚಿವ ಸಂಪುಟದಲ್ಲಿ ಯಾರೆಲ್ಲ ಇರಬೇಕು ಎನ್ನುವ ಲಿಸ್ಟ್​ ಹಿಡಿದುಕೊಂಡು ಅವತ್ತೆ ದೆಹಲಿಗೆ ತೆರಳುತ್ತಿರುವ ಬಿಎಸ್​ವೈ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಿ ಮಾಹಿತಿ ನೀಡಲಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.