ಬೆಂಗಳೂರು : ನಟಿ ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತರು ಚಲಿಸುತ್ತಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೊಲೀಸರ ಮುಂದೆ ಶರ್ಮಿಳಾ ಮಾಂಡ್ರೆ ಸಹೋದರ ಅಮಿತ್ ಮಾಂಡ್ರೆ ಹಾಜರಾಗಿದ್ದಾರೆ.
ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಗಾಯಗೊಂಡ ಹಿನ್ನೆಲೆ ಹೇಳಿಕೆ ದಾಖಲಿಸಲು ಕಾಲಾವಕಾಶ ನೀಡುವಂತೆ ಅಮಿತ್ ಮಾಂಡ್ರೆ ಪೊಲೀಸರಿಗೆ ಮನವಿ ಮಾಡಿದ್ದರು. ಈ ವೇಳೆ ಶರ್ಮಿಳಾ ವಿಚಾರಣೆಗೆ ಹಾಜರಾಗಲೇಬೇಕೆಂದು ಪೊಲೀಸರು ಹೇಳಿ ಕಳುಹಿಸಿದ್ದಾರೆ.
ಶರ್ಮಿಳಾ ಮಾಂಡ್ರೆ ಸಂಚರಿಸುತ್ತಿದ್ದ ಜಾಗ್ವಾರ್ ಕಾರು ವಸಂತನಗರದ ಬಳಿ ಅಪಘಾತಕ್ಕೀಡಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅಜಾರೂಕತೆಯ ಚಾಲನೆಯಿಂದ ಅಫಘಾತ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಜೊತೆಗೆ ಕರ್ನಾಟಕ ರಾಜ್ಯ ಪೊಲೀಸ್ ಕ್ಲೀಯರ್ ಪಾಸ್ ಮಿಸ್ ಯೂಸ್ ಆಗಿರೋದು ಬೆಳಕಿಗೆ ಬಂದಿದೆ. ನಿಟ್ಟಿನಲ್ಲಿ ಕೂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ ಡಿಸಿಪಿ ಕಡೆಯಿಂದ ಶರ್ಮಿಳಾ ಜೊತೆ ಇದ್ದ ಥಾಮಸ್‌ಗೆ ಪಾಸ್ ಹೋದ ಕಾರಣ ನಗರ ಆಯುಕ್ತರ ಬಳಿ ತನಿಖಾಧಿಕಾರಿಗಳು ಮಾತನಾಡಿ, ಯಾವ ರೀತಿ ತನಿಖೆ ನಡೆಸಬಹುದು ಅನ್ನೋದರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.