ಆನೇಕಲ್: ಬೆಂಗಳೂರು ಹೊರವಲಯದಲ್ಲಿನ ವಿದ್ಯುತ್ ಚಿತಾಗಾರದ ಒಂದು ಸ್ಟ್ರೆಚರ್ ರಿಪೇರಿಯಲ್ಲಿದ್ದರೂ ಸಮಸ್ಯೆ ನಿವಾರಣೆಯಲ್ಲಿ ಸುಧಾರಣೆ ಕಾಣುತ್ತಿದೆ.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಬೊಮ್ಮನಹಳ್ಳಿ-ಕೂಡ್ಲು ವಿದ್ಯುತ್ ಚಿತಾಗಾರದ ಮುಂದೆ ಕೋವಿಡ್ 2ನೇ ಅಲೆಯ ಆರಂಭದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವ ಹೊತ್ತ ಆ್ಯಂಬುಲೆನ್ಗಳ ಸಾಲೇ ಇರುತ್ತಿತ್ತು. ಈ ಚಿತಾಗಾರದಲ್ಲಿ ಎರಡು ಸ್ಟ್ರೆಚರ್ಗಳಿದ್ದು, ದಿನವೊಂದಕ್ಕೆ 15 ಶವ ಸಂಸ್ಕಾರ ನಡೆಸಬಹುದು. ಅದರಂತೆ ಮೂವತ್ತು ಶವಗಳ ಅಂತ್ಯಕ್ರಿಯೆ ಮಾಡುವ ವ್ಯವಸ್ಥೆ ಇಲ್ಲಿದ್ದು, ಸದ್ಯ ಒಂದು ಸ್ಟ್ರೆಚರ್ ರಿಪೇರಿಯಲ್ಲಿದೆ. ಹೀಗಾಗಿ, ಇದೀಗ ಪ್ರತಿದಿನ ಕೇವಲ 20 ಮೃತದೇಹಗಳನ್ನು ಶವ ಸಂಸ್ಕಾರ ಮಾಡಲಾಗುತ್ತಿದೆ. ಉಳಿದ ಶವಗಳನ್ನು ಮರುದಿನಕ್ಕೆ ಸಂರಕ್ಷಿಸಿ ಭಸ್ಮಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.
ಇದೀಗ ಶವ ಸಾಗಿಸುವ ಆ್ಯಂಬುಲೆನ್ಸ್ ಸೇವೆ, ವಾಹನಗಳ ಮೊಬೈಲ್ ಸಂಖ್ಯೆ, ಸಿಬ್ಬಂದಿ, ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕಿಸಬೇಕಾದ ಪಟ್ಟಿ ಬಿಡುಗಡೆಗೊಳಿಸುವ ಮುಖಾಂತರ ಮೃತರ ಕುಟುಂಬಸ್ಥರ ಸಮಸ್ಯೆ ನಿವಾರಣೆ ಮಾಡುವಲ್ಲಿ ಬಿವಿಎಂಪಿ ಯಶಸ್ವಿಯಾಗಿದೆ. ಬೊಮ್ಮನಹಳ್ಳಿ ಬಿಬಿಎಂಪಿ ವ್ಯಾಪ್ತಿ ಹಾಗೂ ಆನೇಕಲ್ ಭಾಗಕ್ಕೂ ಇದೇ ಚಿತಾಗಾರ ಬಳಕೆಯಾಗುತ್ತದೆ.
ಓದಿ: ನಾನು ಡಾಕ್ಟರ್ ಇದೀನಿ, ನನಗೆ ರೂಲ್ಸ್ ಹೇಳ್ತಿಯಾ ಎಂದ ವ್ಯಕ್ತಿಗೆ ಡಿಸಿಪಿ ತರಾಟೆ