ETV Bharat / state

ಬಿಜೆಪಿಗೆ ಹೆಚ್ಚು ಜನರು ಬರುತ್ತಿರುವುದು ಕಾಂಗ್ರೆಸ್‌ ಆತಂಕ ಹೆಚ್ಚಿಸಿದೆ: ಅರುಣ್ ಸಿಂಗ್ - Bommai comes in Congress leaders dream

ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ಆರೋಪ, ಎಸ್‌ ಟಿ ಸಮಾವೇಶ ಹಾಗು ವಿಧಾನಸಭೆ ಚುನಾವಣೆ ಕುರಿತಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

BJP state in-charge Arun Singh
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
author img

By

Published : Nov 20, 2022, 6:49 AM IST

ಬೆಂಗಳೂರು: ಕಾಂಗ್ರೆಸ್ ಟೊಳ್ಳು ಪಾರ್ಟಿ. ಡಿಕೆಶಿ, ಸಿದ್ದರಾಮಯ್ಯ ಅವರ ಕನಸಲ್ಲಿ ಮಾತ್ರವಲ್ಲ, ಕಾಂಗ್ರೆಸ್​ನ ಹೆಚ್ಚಿನವರ ಕನಸಲ್ಲಿ ಬೊಮ್ಮಾಯಿ ಅವರೇ ಬರ್ತಿದ್ದಾರೆ. ಬಿಜೆಪಿಗೆ ಹೆಚ್ಚು ಜನರು ಬರುತ್ತಿರುವುದರಿಂದ ಅವರಿಗೆ ಆತಂಕವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಬೆಂಗಳೂರಿನ ಕೆ.ಕೆ.ಗೆಸ್ಟ್ ಹೌಸ್​ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಮಾಚಲ ಪ್ರದೇಶ, ಗುಜರಾತ್‌ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಸೋಲಲಿದೆ. ಈ ಭೀತಿಯಲ್ಲಿ ಅವರು ಆರೋಪ ಮಾಡುತ್ತಿದ್ದಾರೆ ಎಂದರು.

ಬಿಬಿಎಂಪಿಯು ಮತದಾರರ ಪರಿಷ್ಕರಣೆ ಅನುಮತಿಯನ್ನು ಡಾಟಾ ಏಜೆನ್ಸಿಗೆ ಕೊಟ್ಟಿದೆ. ಮಾಹಿತಿಯನ್ನು ಸೋರಿಕೆ ಮಾಡಿರುವ ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇಂದಿನ ಬಿಜೆಪಿ ಎಸ್‌‌ಟಿ ಸಮಾವೇಶ ವಿಚಾರದ ಕುರಿತು ಮಾತನಾಡಿ, ಲಕ್ಷಾಂತರ ಜನ ನಾಳಿನ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಪಾಲ್ಗೊಳ್ಳಲಿದ್ದಾರೆ. ಎಸ್ ಟಿ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ. ಈಗಾಗಲೇ ರಾಜ್ಯ ಸರ್ಕಾರ ಎಸ್ ಟಿ ಮಿಸಲಾತಿಯನ್ನು ಹೆಚ್ಚಳ ಮಾಡಿದ್ದು, ಈ ಸಮುದಾಯಕ್ಕಾಗಿ ಹೆಚ್ಚು ಕೆಲಸ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಸಿದ್ದರಾಮಯ್ಯ ಸರ್ಕಾರ, ಕೂಡಲೇ ಅವರು ರಾಜೀನಾಮೆ ಕೊಡಲಿ: ಎನ್.ರವಿಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.