ETV Bharat / state

ಬೆಂಗಳೂರಿನ ಪ್ರತಿಷ್ಠಿತ ಶಾಂಗ್ರೀಲಾ ಹೋಟೆಲ್​ಗೆ ಬಾಂಬ್ ಬೆದರಿಕೆ: ದೂರು ದಾಖಲು

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ಗೆ ಬಾಂಬ್ ಬೆದರಿಕೆ ಇ - ಮೇಲ್ ಬಂದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

bomb threat
ಬಾಂಬ್ ಬೆದರಿಕೆ
author img

By

Published : Aug 12, 2023, 8:24 AM IST

Updated : Aug 13, 2023, 9:30 AM IST

ಬಾಂಬ್ ಬೆದರಿಕೆ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಸಮೀಪದಲ್ಲಿರುವಾಗಲೇ ಕೆಲ ಕಿಡಿಗೇಡಿಗಳು ಬೆಂಗಳೂರಿನ ಹೋಟೆಲ್​ ಟಾರ್ಗೆಟ್ ಮಾಡಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಪ್ರತಿಷ್ಠಿತ ಐಶಾರಾಮಿ ಹೋಟೆಲ್​ಗಳಲ್ಲಿ ಒಂದಾದ ಶಾಂಗ್ರೀಲಾಗೆ ಬಾಂಬ್ ಬೆದರಿಕೆ ಇ-ಮೇಲ್ ರವಾನಿಸಲಾಗಿದೆ‌.

ಬೆಂಗಳೂರಿನ ಶಾಂಗ್ರೀಲಾ ಹೋಟೆಲ್ ಸೇರಿ ದೇಶದ ಎಲ್ಲಾ ಬ್ರಾಂಚ್​ಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. luisamaclare@proton.me ಎಂಬ ಇ -ಮೇಲ್ ಐಡಿ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಎಲ್ಲ ಬ್ರಾಂಚ್​ಗಳಲ್ಲೂ ಬಾಂಬ್ ಇಟ್ಟಿರೋದಾಗಿ ತಿಳಿಸಿದ್ದಾರೆ. ಬೆದರಿಕೆ ಸಂದೇಶ ಬಂದ ತಕ್ಷಣವೇ ಹೋಟೆಲ್‌ ಸಿಬ್ಬಂದಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಮತ್ತೊಂದು ಶಾಲೆಗೂ ಬಾಂಬ್​ ಬೆದರಿಕೆ.. ಇ-ಮೇಲ್​ ಬಂದಿದ್ದು ಶುಕ್ರವಾರ, ನೋಡಿದ್ದು ಸೋಮವಾರ !

ಐಟಿ ಕಂಪನಿಗೆ ಹುಸಿ ಬಾಂಬ್ ಕರೆ: ಇನ್ನು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಕಳೆದ ಜೂನ್​ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು. ಕಂಪನಿಯ ಮಾಜಿ ಉದ್ಯೋಗಿ ನವನೀತ್ ಪ್ರಸಾದ್ ಬಂಧಿತ ಆರೋಪಿ. ಈತ ಜೂನ್ 13 ರಂದು ಬೆಳಗ್ಗೆ ಬೆಳ್ಳಂದೂರಿನ ಹೊರವರ್ತುಲ ರಸ್ತೆಯಲ್ಲಿರುವ ಖಾಸಗಿ ಕಂಪನಿಗೆ ಕರೆ ಮಾಡಿ, 'ಕಂಪನಿಯಲ್ಲಿ ಬಾಂಬ್ ಇಟ್ಟಿದ್ದು ಕೆಲ ಹೊತ್ತಿನಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ' ಎಂದಿದ್ದ. ಆತಂಕಗೊಂಡು ಕಾರ್ಯಪ್ರವೃತ್ತರಾದ ಕಂಪನಿ ಸಿಬ್ಬಂದಿ, ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಇದನ್ನೂ ಓದಿ : Al Qaeda ಉಗ್ರ ಸಂಘಟನೆಯಿಂದ ಬಾಂಬ್ ಬೆದರಿಕೆ : Delhi IGI airport ನಲ್ಲಿ ಕಟ್ಟೆಚ್ಚರ

ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ತಂಡ ಮೂಲೆ - ಮೂಲೆ ಜಾಲಾಡಿದ ನಂತರ ಅದೊಂದು ಹುಸಿ ಬಾಂಬ್ ಕರೆ ಎಂದು ಖಚಿತವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಬಾಂಬ್ ಕರೆ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕಂಪನಿಯ ಮಾಜಿ ಉದ್ಯೋಗಿಯಾಗಿರುವ ನವನೀತ್ ಪ್ರಸಾದ್ ಕರೆ ಮಾಡಿರುವುದು ತಿಳಿದು ಬಂದಿತ್ತು.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ : ಪ್ರಯಾಣಿಕನ ಬಂಧನ

ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ : ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರಕ್ರಿಯೆ ವಿಳಂಬವಾದ್ದರಿಂದ ಸಿಟ್ಟಿಗೆದ್ದ ಮಹಿಳಾ ವಿಮಾನ ಪ್ರಯಾಣಿಕರೊಬ್ಬರು ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಘಟನೆ ಆಗಸ್ಟ್​ ಒಂದರಂದು ನಡೆದಿತ್ತು. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಜೊತೆಗೆ, ಮುಂಬೈಗೆ ತೆರಳಬೇಕಿದ್ದ ವಿಮಾನವನ್ನು ಸುಮಾರು ಒಂದು ಗಂಟೆ ತಡ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿದ್ದವು.

ಇದನ್ನೂ ಓದಿ : ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ : ಮಹಿಳೆಯ ಬಂಧನ

Last Updated : Aug 13, 2023, 9:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.