ETV Bharat / state

ಬೆಂಗಳೂರು: ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಇಮೇಲ್, ಮೂರು ಪ್ರತ್ಯೇಕ ಎಫ್ಐಆರ್ ದಾಖಲು - Bomb threat email

ಬೆಂಗಳೂರಿನ ಮ್ಯೂಸಿಯಂಗಳಿಗೆ ಬಾಂಬ್​ ಬೆದರಿಕೆ ಇಮೇಲ್​​ ಬಂದಿರುವ ಬಗ್ಗೆ ಮೂರು ಪ್ರತ್ಯೇಕ ಎಫ್​ಐಆರ್​ ದಾಖಲಾಗಿದೆ.

bomb-threat-email-to-museums-in-bengaluru-three-firs-filed
ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಇಮೇಲ್, ಮೂರು ಪ್ರತ್ಯೇಕ ಎಫ್ಐಆರ್ ದಾಖಲು
author img

By ETV Bharat Karnataka Team

Published : Jan 6, 2024, 3:18 PM IST

ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಇಮೇಲ್, ಮೂರು ಪ್ರತ್ಯೇಕ ಎಫ್ಐಆರ್ ದಾಖಲು

ಬೆಂಗಳೂರು : ಕೇಂದ್ರ ವಿಭಾಗದ ಮೂರು ಠಾಣಾ ವ್ಯಾಪ್ತಿಯ ವಸ್ತು ಸಂಗ್ರಹಾಲಯಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಇಮೇಲ್ ಸಂಬಂಧ ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್ ಟಿ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ನಗರದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ, ವಿಧಾನಸೌಧ ಠಾಣಾ ವ್ಯಾಪ್ತಿಯ ರಾಜಭವನ ರಸ್ತೆಯಲ್ಲಿರುವ ಜವಾಹರಲಾಲ್ ನೆಹರು ತಾರಾಲಯ ಹಾಗೂ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿರುವ ನ್ಯಾಷನಲ್ ಗ್ಯಾಲರಿ ಫಾರ್ ಮಾಡರ್ನ್‌ ಆರ್ಟ್​ಗೆ ಬೆದರಿಕೆಯ ಇಮೇಲ್ ಬಂದಿದ್ದವು. 'ಬಾಂಬ್ ಇರಿಸಲಾಗಿದ್ದು, ಇವುಗಳು ಬೆಳಗ್ಗೆ ಸ್ಫೋಟಗೊಳ್ಳುವುದಾಗಿ' ದುಷ್ಕರ್ಮಿಗಳು ಇಮೇಲ್ ರವಾನಿಸಿದ್ದರು. ತಕ್ಷಣ‌ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್​ ಬೆದರಿಕೆ ಎಂಬುದು ತಿಳಿದು ಬಂದಿತ್ತು.

ಈ ಬಗ್ಗೆ ಸದ್ಯ ಕಬ್ಬನ್ ಪಾರ್ಕ್, ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಸಂದೇಶ ರವಾನೆಯಾಗಿರುವ ಇಮೇಲ್ ಐಡಿ ಬಳಕೆದಾರರ ಮಾಹಿತಿ ನೀಡುವಂತೆ ಸಂಬಂಧಪಟ್ಟ ಕಂಪನಿಗೆ ಕೋರಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್​ ಟಿ ತಿಳಿಸಿದ್ದಾರೆ.

ಹುಸಿ ಬಾಂಬ್​ ಬೆದರಿಕೆ : ಶೈಕ್ಷಣಿಕ ಪ್ರವಾಸಿ ಸ್ಥಳ ಹಾಗೂ ಅತ್ಯುನ್ನತ ವಸ್ತು ಸಂಗ್ರಹಾಲಯಗಳ ಪೈಕಿ ಒಂದಾಗಿರುವ ಕಸ್ತೂರಬಾ ರಸ್ತೆಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ನಕಲಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಶುಕ್ರವಾರ ಬೆಳಗ್ಗೆ ಎಂದಿನಂತೆ 9 ಗಂಟೆಗೆ ಮ್ಯೂಸಿಯಂ ಗೇಟ್ ತೆರೆದ ಸಿಬ್ಬಂದಿ ಇ-ಮೇಲ್ ಪರಿಶೀಲನೆ ನಡೆಸಿದ್ದರು. ಇದರಲ್ಲಿ ಒಂದು ಇಮೇಲ್​ನಲ್ಲಿ ಬಾಂಬ್​ ಬೆದರಿಕೆ ಬಂದಿತ್ತು.

Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿತ್ತು. ಮ್ಯೂಸಿಯೊಳಗೆ ವಿವಿಧ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇವೆ. ಅದನ್ನು ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ಶನಿವಾರ ಬೆಳಗ್ಗೆ ಸ್ಫೋಟಗೊಳ್ಳಲಿದೆ. ಮ್ಯೂಸಿಯಂನಲ್ಲಿರುವ ಅಷ್ಟೂ ಜನ ಸಾಯುತ್ತಾರೆ. ನಾವು ಟೆರರಿಸ್ಟ್​​ 111 ಎಂಬ ಸಂಘಟನೆಗೆ ಸೇರಿದವರು. ನಮ್ಮ ಗ್ರೂಪ್ ಹೆಸರನ್ನು ಮಾಧ್ಯಮದವರಿಗೆ ನೀಡಿ ಎಂದು‌ ಕಿಡಿಗೇಡಿಗಳು ಇಮೇಲ್​ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ : ಪೊಲೀಸರನ್ನ ಆಟವಾಡಿಸಲು ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ ಕಿಡಿಗೇಡಿಯ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.