ಬೆಂಗಳೂರು: ಸಚಿವ ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಿಸಿಬಿ ಪೊಲೀಸರು ವಿಡಿಯೋ ರಾ ಫುಟೇಜ್ ಯಾವ ಡಿವೈಸ್ನಿಂದ ಮಾಡಲಾಗಿದೆ. ಯಾವುದರಿಂದ ಎಡಿಟ್ ಮಾಡಲಾಗಿದೆ ಎನ್ನುವುದರ ಕುರಿತು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಎಫ್.ಎಸ್.ಎಲ್ಗೆ ವಿಡಿಯೋ ಕಳಿಸಿರುವ ಸಿಸಿಬಿ ಪೊಲೀಸ್ ಸಿಬ್ಬಂದಿ ಆ ವಿಡಿಯೋ ಒರಿಜಿನಲ್ ಆಗಿದೆಯಾ? ಅಥವಾ ಮಾರ್ಫಿಂಗ್ ಮಾಡಿದ್ದಾರಾ ? ಎನ್ನುವುದರ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಯಲಯಕ್ಕೆ ರಿಪೋರ್ಟ್ ನೀಡಲು ಕೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಹರಿಬಿಡುವುದಾಗಿ ಸಚಿವ ಸೋಮಶೇಖರ್ ಪುತ್ರನಿಗೆ ಬ್ಲಾಕ್ಮೇಲ್ : ಆರೋಪಿ ಬಂಧನ
ಈಗಾಗಲೇ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಅವರ ಬಳಿ ಇರುವ ಮೊಬೈಲ್, ಲ್ಯಾಪ್ ಟಾಪ್ಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆರೋಪಿಗಳ ವ್ಯಾಟ್ಸಪ್ ಸಂವಹನಗಳ ಕುರಿತು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ. ಯಾರ ಯಾರ ಜೊತೆಗೆ ಅರೋಪಿಗಳಿಗೆ ಕಾಂಟ್ಯಾಕ್ಟ್ ಇದೆ? ವಿಡಿಯೋ ಯಾರಿಂದ ಹಂಚಿಕೆಯಾಗಿದೆ? ಎನ್ನುವುದರ ಕುರಿತು ಸಿಸಿಬಿ ಪೊಲೀಸರು ಕೂಲಂಕಷವಾಗಿ ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ದೊರೆತಿದೆ.