ETV Bharat / state

ದಲಿತ ವಿರೋಧಿ ಅಲ್ಲ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಯತ್ನ: ಬಿ.ಎಲ್ ಸಂತೋಷ್​ ಟ್ವೀಟ್​! - ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ನಡೆದಿರುವ ಫೇಸ್​ಬುಕ್​​ ಪೋಸ್ಟ್​​​ ಗಲಭೆ ಇದೀಗ ಆಡಳಿತ -ವಿರೋಧ ಪಕ್ಷಗಳ ನಡುವಿನ ಟ್ವೀಟ್​ ವಾರ್​ಗೆ ಕಾರಣವಾಗಿದೆ.

BL Santosh tweet
BL Santosh tweet
author img

By

Published : Aug 14, 2020, 12:27 AM IST

ಬೆಂಗಳೂರು: ತನ್ನದೇ ಪಕ್ಷದ ದಲಿತ ಶಾಸಕರ ನಿವಾಸದ ಮೇಲಿನ ದಾಳಿಯನ್ನು ಖಂಡಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷ ಸರಣಿ ಟ್ವೀಟ್​ಗಳನ್ನು ಮಾಡಿ ದಲಿತ ವಿರೋಧಿ ಅಲ್ಲ ಎನ್ನುವುದನ್ನು ತೋರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟೀಕಿಸಿದ್ದಾರೆ.

  • Compulsion of not condemning the act of violence in DJHalli due to appeasement politics has made @INCKarnataka leaders go hunting for logics to substantiate their stand . But by multiple tweets they are only making #CongressAgainstDalits more obvious .

    — B L Santhosh (@blsanthosh) August 13, 2020 " class="align-text-top noRightClick twitterSection" data=" ">

ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಬಲವಂತವಾಗಿ ಡಿಜೆ ಹಳ್ಳಿ ಗಲಭೆ ಘಟನೆಯನ್ನು ಖಂಡಿಸಿದೆ. ಕಾಂಗ್ರೆಸ್ ನಾಯಕರು ತರ್ಕ ಬದ್ಧವಾಗಿ ತಮ್ಮ ನಿಲುವು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ದಲಿತ ವಿರೋಧಿ ಅಲ್ಲ ಎನ್ನುವುದನ್ನು ತೋರಿಸಿಕೊಳ್ಳಲು ಸರಣಿ ಟ್ವೀಟ್​ಗಳನ್ನು ಮಾಡುತ್ತಿದೆ ಅಷ್ಟೇ ಎಂದು ಕಾಂಗ್ರೆಸ್ ನಾಯಕರ ನಡೆಯನ್ನು ಖಂಡಿಸಿದರು.

ಗಲಭೆ ನಿಂತ ಬಳಿಕ ರಾಜಕಾರಣಿಗಳ ಟ್ವೀಟ್‌ ಸಮರ: ಬಿ.ಎಲ್‌.ಸಂತೋಷ್‌ಗೆ ಸಿದ್ದರಾಮಯ್ಯ ಟಾಂಗ್

ಮೇಲ್ಮನವಿ ಮತ್ತು ಸಾಮಾಜಿಕ ನ್ಯಾಯ, ಸಮಾಧಾನ ಮತ್ತು ಸಾರ್ವಜನಿಕ ಆದೇಶ ಇವುಗಳಲ್ಲಿ ಎಐಸಿಸಿ ಮತ್ತು ಕೆಪಿಸಿಸಿ ಆಯ್ಕೆ ತುಂಬಾ ಸ್ಪಷ್ಟವಾಗಿದೆ. ಕಳೆದ 72 ವರ್ಷಗಳಿಂದಲೂ ಇದನ್ನೆ ಪಕ್ಷ ಮಾಡಿಕೊಂಡು ಬಂದಿದೆ. ಇಂತಹ ಘಟನೆಗಳಲ್ಲಿ ಸದಾ ಗಲಭೆಕೋರರನ್ನು ಬೆಂಬಲಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದೆ. ಇದೇ ಆ ಪಕ್ಷದ ನಿಲುವಾಗಿದೆ ಎಂದು ಬಿ.ಎಲ್ ಸಂತೋಷ್ ಕುಟುಕಿದ್ದಾರೆ.

  • Ex CM of @INCKarnataka has tagged me in 13 tweets . Not one condemning riots or attack on his own party’s Dalit MLA or asking Govt for tough actions . Same beating around the bush asking irrelevant questions to BJP. Fear of votes & Policy of appeasement. #CongressAgainstDalits

ಸಿದ್ದು- ಬಿಎಲ್​ ಸಂತೋಷ್​ ನಡುವೆ ಟ್ವೀಟ್​ ವಾರ್​

ನಿಮ್ಮದೇ ಪಕ್ಷ ಅಧಿಕಾರದಲ್ಲಿರುವಾಗ ಓರ್ವ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ. ಕೋಟ್ಯಂತರ ಬಡ-ಅಸಹಾಯ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಎಲ್‌ ಸಂತೋಷ್‌ ಅವರು, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ದಾಳಿಯ ಕೃತ್ಯವನ್ನು ಖಂಡಿಸದೇ ಈ ರೀತಿಯ ಬೂಟಾಟಿಕೆ ಮಾಡುವುದನ್ನು ನಿಲ್ಲಿಸಿ. ನಿಮ್ಮದೇ ಕಾಂಗ್ರೆಸ್‌ ಪಕ್ಷದ ದಲಿತ ಶಾಸಕನ ಮೇಲೆ ನಡೆದ ದಾಳಿ ವೇಳೆ ಅವರ ಬೆಂಬಲಕ್ಕೆ ನಿಲ್ಲಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.