ETV Bharat / state

ಅಂಬೇಡ್ಕರ್ ಇತಿಹಾಸ ಮರೆಮಾಚಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ: ಹರಿಪ್ರಸಾದ್ - ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್

ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ- ಬಿ ಕೆ ಹರಿಪ್ರಸಾದ್.

BK Hariprasad
ಬಿ ಕೆ ಹರಿಪ್ರಸಾದ್
author img

By

Published : Dec 7, 2022, 7:07 AM IST

ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇತಿಹಾಸ ಮರೆಮಾಚಿ ಮೊಸಳೆ ಕಣ್ಣೀರು ಸುರಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​​ ಮಾಡಿರುವ ಅವರು, ಬಾಬಾ ಸಾಹೇಬರ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಇತಿಹಾಸದ ಸತ್ಯಗಳನ್ನ ಮರೆಮಾಚಿ, ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಚಿಕೆಗೇಡು. ವಾಟ್ಸಪ್ ಯೂನಿವರ್ಸಿಟಿಯಲ್ಲಿ ಉತ್ಪಾದಿಸಿದ ಸುಳ್ಳುಗಳನ್ನ ಹರಿ ಬಿಟ್ಟಿರುವುದು, ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬಾ ಸಾಹೇಬರಿಗೆ ಮಾಡಿದ ಅವಮಾನವಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

  • ಮನುವಾದಿ ಬಿಜೆಪಿಯ ಮುಖವಾಡವನ್ನ ಬಾಬಾ ಸಾಹೇಬರು ಅಂದೇ ಮನುಸ್ಮೃತಿಯನ್ನ ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ?

    ಮನುಷ್ಯ ವಿರೋಧಿ ಮನುಸ್ಮೃತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಾ ಅಲ್ವಾ @BJP4Karnataka ?
    4/5

    — Hariprasad.B.K. (@HariprasadBK2) December 6, 2022 " class="align-text-top noRightClick twitterSection" data=" ">

ಜಗತ್ತಿಗೆ ಶ್ರೇಷ್ಠವಾದ ಸಂವಿಧಾನವನ್ನು ಕೊಡಲು ಬಾಬಾ ಸಾಹೇಬರಿಗೆ ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಒಂದಿಷ್ಟು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪ್ರಧಾನಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿಯಲ್ಲ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಬಾಬಾ ಸಾಹೇಬರ ವಿರುದ್ಧ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದು ನಿಜ. ಅದೊಂದು ಚುನಾವಣಾ ಪ್ರಕ್ರಿಯೆ. ಆದರೆ ಇಂದಿನ ರಾಜ್ಯ ಬಿಜೆಪಿ ಮುಖವಾಡವೇ ಆಗಿದ್ದ ಹಿಂದೂ ಮಹಾಸಭಾ, ಬಾಬಾ ಸಾಹೇಬರ ವಿರುದ್ಧ ಸ್ಪರ್ಧಿಸಿದ್ದು ಸುಳ್ಳಾ?. ಬಾಬಾ ಸಾಹೇಬರಿಗೆ ಮತ ನೀಡಬೇಡಿ, ಹಿಂದೂ ವಿರೋಧಿಯೆಂದು ಪ್ರಚಾರ ಮಾಡಿದ್ದು ಸುಳ್ಳಾ? ಎಂದು ಕಿಡಿಕಾರಿದ್ದಾರೆ.

  • ಬಾಬಾ ಸಾಹೇಬರ ಮಾನವೀಯ ಸಿದ್ದಾಂತಕ್ಕೂ @BJP4Karnataka ಮನುವಾದಿ ಸಿದ್ದಾಂತಕ್ಕೆ ಎತ್ತಿಂದೆತ್ತಣ ಸಂಬಂಧ?

    ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ.
    5/5

ಮನುವಾದಿ ಬಿಜೆಪಿಯ ಮುಖವಾಡವನ್ನು ಬಾಬಾ ಸಾಹೇಬರು ಅಂದೇ ಮನುಸ್ಮೃತಿಯನ್ನ ಸುಡುವ ಮೂಲಕ ದೇಶಕ್ಕೆ ಸಾರಿದ್ದು ಸುಳ್ಳಾ?. ಮನುಷ್ಯ ವಿರೋಧಿ ಮನುಸ್ಮೃತಿಯನ್ನ ಸುಟ್ಟ ಸಿಟ್ಟಿಗೆ ಬಿಜೆಪಿ ಇಂದು ಸಂವಿಧಾನವನ್ನೇ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಾ ಅಲ್ವಾ?. ಬಾಬಾ ಸಾಹೇಬರ ಮಾನವೀಯ ಸಿದ್ಧಾಂತಕ್ಕೂ ರಾಜ್ಯ ಬಿಜೆಪಿ ಮನುವಾದಿ ಸಿದ್ಧಾಂತಕ್ಕೆ ಎತ್ತಿಂದೆತ್ತಣ ಸಂಬಂಧ? ಇತಿಹಾಸದ ಸತ್ಯಗಳನ್ನ ಮರೆಮಾಚಿ, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವುದನ್ನ ಬಿಜೆಪಿ ನಿಲ್ಲಿಸದಿದ್ದರೆ, ಜನರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಹರಿಪ್ರಸಾದ್​ ಟ್ವಿಟ್​ ಮಾಡಿದ್ದಾರೆ.

ಇದನ್ನೂ ಓದಿ: ರಾಮರಾಜ್ಯ ಮಾಡುತ್ತೇವೆಂದವರು ರೌಡಿ ರಾಜ್ಯ ಮಾಡಲು ಮುಂದಾಗಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.