ಬೆಂಗಳೂರು: ಅದಾನಿ ಬೆಳೆಸಿದ್ದು ಇದೇ ಪ್ರಧಾನಿಯವರು, ಗುಜರಾತ್ ನಿಂದ ಇವರನ್ನ ತಂದು ಬೆಳೆಸಿದರು. ಅದಾನಿ ಹಿಂದಿರುವ ಕ್ಯಾಪಟಲಿಸಂ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿ ಗ್ರೂಪ್ ಕುಸಿತ ಕಂಡಿದೆ. ಪ್ರಧಾನಿಗೆ, ಅದಾನಿಯವರ ಜೊತೆ ಸಂಬಂಧ ಇರಬಹುದು. ಈ ಹಿಂದೆ ರತನ್ ಟಾಟಾ ಕಾರು ಕಂಪನಿ ಸ್ಥಾಪನೆಗೆ ಎಂದು ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಆಗ ಅವರನ್ನ ಕರೆತಂದು ಮೋದಿ ಅವಕಾಶ ಕೊಟ್ಟರು. ಗುಜರಾತ್ನಲ್ಲಿ ಭೂಮಿ ಕೊಟ್ಟು ಅವಕಾಶ ನೀಡಿದರು. ಅದೇ ರೀತಿ ಅದಾನಿಯನ್ನ ಬೆಳೆಸಿದ್ದು ಇದೇ ಪ್ರಧಾನಿ ಎಂದು ಆರೋಪಿಸಿದರು.
ಮೊದಲು ಅವರು ಗುಜರಾತ್ ಕೈಗಾರಿಕೋದ್ಯಮಿಗಳನ್ನ ಬೆಳೆಸುವ ಕೆಲಸ ಮಾಡಿದರು. ಅಲ್ಲದೇ ಅವರನ್ನ ಕರೆತಂದು ಭೂಮಿ ಕೊಟ್ಟು ಅವಕಾಶ ನೀಡಿದರು. ಪ್ರಧಾನಿ ಅದಾನಿಯನ್ನ ಗುಜರಾತ್ನಿಂದ ದಿಲ್ಲಿಗೆ ಜೊತೆಯಲ್ಲೇ ಕರೆದೋಯ್ಯುತಿದ್ರು, ವಿದೇಶಕ್ಕೆ ಹೋದಾಗಲೆಲ್ಲ ಕರೆದೊಯ್ಯುತ್ತಿದ್ದರು. ಅದು ಯಾಕೆ ಅನ್ನೋದು ಎಲ್ಲರಿಗೆ ಗೊತ್ತಿದೆ. ಆಸ್ಟ್ರೇಲಿಯಾದಲ್ಲಿ ಆದಾನಿಗೆ ಗೋಬ್ಯಾಕ್ ಅಂದ್ರು. ಕೈಗಾರಿಕೆ ಮಾಡ್ತೇನೆ ಅಂದಾಗ ವಿರೋಧಿಸಿದ್ರು. ಆಗ ಆದಾನಿ ಅಲ್ಲಿಂದ ವಾಪಸ್ ಬರಬೇಕಾಯ್ತು. ಅಲ್ಲಿ ಕೈಗಾರಿಕೆ ತೆಗೆಯೋಕೆ ಅವಕಾಶ ಸಿಗಲಿಲ್ಲ. ಭಾರತದ ಪ್ರಧಾನಿ ಹಿಂದಿದ್ದಾರೆಂದು ಹಿಂದೆ ಕಳಿಸಿದ್ರು. ಈ ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ತನಿಖೆಯಾಗಬೇಕು. ಅದಾನಿ ಹಿಂದಿರುವ ಕ್ಯಾಪಟಲಿಸಂ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗುಜರಾತ್ ಸಿಎಂ ಆಗಿದ್ದಾಗ ಅದಾನಿಗೆ ಸಾಲ: ಇದು ಗುಜರಾತ್ ಮಾಡೆಲ್. ಈ ಬಗ್ಗೆ ಅಲ್ಲಿನ ಸಿಎಜಿಯೇ ರಿಪೋರ್ಟ್ ಕೊಟ್ಟಿತ್ತು. 2014 ರಿಂದ ಅದಾನಿ ಅಸೆಟ್ಸ್ ಈಕ್ವೆಲ್ ಇತ್ತು. ಅಂಬಾನಿ ಜೊತೆ ಸರಿಸಮನಾಗಿತ್ತು. ಆದರೆ, ಒಂದೇ ವರ್ಷದಲ್ಲಿ ಅದಾನಿ ಆಸ್ತಿ ಡಬಲ್ ಆಯ್ತು. ಮೋದಿ ಪ್ರಧಾನಿ ಆಗ್ತಾರೆ ಅನ್ನುತ್ತಲೇ ಆದಾನಿ ಷೇರು ಆಕಾಶಕ್ಕೆ ಏರಿತು. ಹಿಂದೆ 2023ರ ಅವಧಿಯಲ್ಲಿ ಏರಿಕೆಯಾಗಿತ್ತು. 2015 ರಲ್ಲಿ ಅವರ ಆಸ್ತಿ 65 ಸಾವಿರ ಕೋಟಿ ಇತ್ತು. ಬಳಿಕ ಅಂಬಾನಿ ಆಸ್ತಿಗಿಂತ ಡಬಲ್ ಆಗಿತ್ತು. ಅದಾನಿ ಆಸ್ತಿ ಡಬಲ್ಗೆ ಕಾರಣ ಪ್ರಧಾನಿ ಮೋದಿ. ಯಾಕೆಂದರೆ ಎಲ್ಲವನ್ನೂ ಮೋದಿ ಅದಾನಿಗೆ ನೀಡುತ್ತಿದ್ದರು. ಆದರೆ ಇವತ್ತು ಆದಾನಿ ಆಸ್ತಿ ಏನಾಗಿದೆ? ಎಂದು ಚಂದ್ರಶೇಖರ್ ಪ್ರಶ್ನಿಸಿದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಒಂದು ಬಿಲಿಯನ್ ದುಡಿಯೋಕೆ 20 ವರ್ಷ ಬೇಕು. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಬೇಕು. ಆದರೆ ಮೂರೇ ವರ್ಷದಲ್ಲಿ ಅದಾನಿ ಕಂಪನಿ ಇಷ್ಟು ದುಡಿಯಲು ಹೇಗೆ ಸಾಧ್ಯ? ಎಲ್ಐಸಿಯಲ್ಲಿ 28 ಕೋಟಿ ಜನ ಇನ್ವೆಸ್ಟ್ ಮಾಡಿದ್ದಾರೆ. ಈ ಎಲ್ಐಸಿ ಆದಾನಿ ಗ್ರೂಪ್ಗೆ ಇನ್ವೆಸ್ಟ್ ಮಾಡಿದೆ. ಈ ಪಬ್ಲಿಕ್ ಪ್ರಾಪರ್ಟಿ ಅದೇಗೆ ಕೊಟ್ರು? ಎಲ್ಐಸಿ ಪಬ್ಲಿಕ್ ಅಕೌಂಟ್ಸ್ ತಾನೇ? ಪಬ್ಲಿಕ್ ಹಣವನ್ನ ಹೇಗೆ ಪ್ರವೇಟ್ ಸಂಸ್ಥೆಗೆ ಕೊಟ್ಟರು? ಇದರ ಬಗ್ಗೆ ತನಿಖೆಯಾಗಬೇಕು. ಆದರೆ ತನಿಖೆಗೆ ಪಾರ್ಲಿಮೆಂಟ್ ಮುಂದೆ ಬರ್ತಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಈ ಬಾರಿ ಕೇಂದ್ರದ ಬಜೆಟ್ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್ ವಿಶ್ವನಾಥ್