ಬೆಂಗಳೂರು: ನಾಯಕತ್ವ ಬದಲಾವಣೆಯ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ವೀರಶೈವ-ಲಿಂಗಾಯತರಿಗೆ ಒಬಿಸಿ ಪಟ್ಟ ನೀಡುವ ಅಸ್ತ್ರವನ್ನು ಬಳಸಿದ್ದರು. ಆದರೆ ಏಕಾಏಕಿ ಬಿಎಸ್ವೈ ಅವರ ಒಬಿಸಿ ಪಂಚ್ ಬಿಜೆಪಿ ಹೈ ಕಮಾಂಡನ್ನೇ ಸುಸ್ತು ಬೀಳಿಸುವಂತೆ ಮಾಡಿತ್ತು. ಒಬಿಸಿ ಶಿಫಾರಸಿನ ಹಿಂದಿನ ಮರ್ಮ ಅರಿತ ಹೈ ಕಮಾಂಡ್ ಕೂಡಲೇ ಯಡಿಯೂರಪ್ಪರ ಒಬಿಸಿ ಮೀಸಲಾತಿ ಓಟಕ್ಕೆ ಬ್ರೇಕ್ ಹಾಕಿದೆ.
ನಿಗಮ ಮಂಡಳಿಗಳ ನೇಮಕಾತಿ ಮೂಲಕ ಹೈ ಕಮಾಂಡ್ಗೆ ಸ್ಟ್ರಾಂಗ್ ಮೆಸೇಜ್ ಕಳುಹಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ-ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಶಿಫಾರಸು ಮಾಡಲು ಮುಂದಾಗುವ ಮೂಲಕ ಬಿಜೆಪಿ ವರಿಷ್ಠರಿಗೆ ದೊಡ್ಡ ಆಘಾತವನ್ನೇ ನೀಡಿದ್ದರು. ಸಂಪುಟ ಸಭೆಯ ಅಜೆಂಡಾದಲ್ಲಿ ಒಬಿಸಿ ವಿಷಯವನ್ನು ಸೇರಿಸುವ ಮೂಲಕ ಯಡಿಯೂರಪ್ಪ ಹೈ ಕಮಾಂಡ್ಗೆ ಮುಟ್ಟಿಸಬೇಕಾಗಿದ್ದ ಸಂದೇಶವನ್ನು ಕಳುಹಿಸಿದ್ದರು.
ನಾಯಕತ್ವ ಬದಲಾವಣೆಯ ಚರ್ಚೆ ಇನ್ನೊಂದೆಡೆ ಸಂಪುಟ ವಿಸ್ತರಣೆಯ ಸಂಕಟದಿಂದ ಪಾರಾಗಲು ಯಡಿಯೂರಪ್ಪ ಪ್ರಬಲ ಸಮುದಾಯವನ್ನು ಮುಂದಿಟ್ಟುಕೊಂಡು ರಾಜಕೀಯ ರಣತಂತ್ರ ರೂಪಿಸಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಈ ರಾಜಕೀಯ ರಣತಂತ್ರಕ್ಕೆ ಬಿಜೆಪಿ ಹೈ ಕಮಾಂಡ್ ಕೂಡ ಬೆದರಿ ಹೋಗಿತ್ತು. ಅದಕ್ಕಾಗಿನೇ ಅಮಿತ್ ಶಾ ಕೂಡಲೇ ಕರೆ ಮಾಡಿ ಒಬಿಸಿ ಅಜೆಂಡಾವನ್ನು ಕೈ ಬಿಟ್ಟು, ದೆಹಲಿಗೆ ಬರುವಂತೆ ಸೂಚಿಸಿದ್ದರು. ಅದರಂತೆ ಸಂಪುಟ ಸಭೆಯಲ್ಲಿ ಒಬಿಸಿ ವಿಷಯವನ್ನು ಮುಂದೂಡಲಾಯಿತು.
ಹೈ ಕಮಾಂಡ್ ಬಿಎಸ್ ವೈ ಒಬಿಸಿ ಅಸ್ತ್ರಕ್ಕೆ ಬೆದರಿದ್ದೇಕೆ?:
ನಿಗಮ ಮಂಡಳಿಯ ನೇಮಕಾತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಿಜೆಪಿ ಹೈ ಕಮಾಂಡ್ಗೆ ಯಡಿಯೂರಪ್ಪರ ವೀರಶೈವ-ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ಪ್ಲಾನ್ ಅಕ್ಷರಶ: ಬೆಚ್ಚಿ ಬೀಳಿಸಿತ್ತು ಎನ್ನಲಾಗಿದೆ.
ಬಿಎಸ್ ವೈ ನಾಯಕತ್ವ ಬದಲಾವಣೆಯ ತಯಾರಿಯಲ್ಲಿದ್ದ ಬಿಜೆಪಿ ಹೈ ಕಮಾಂಡ್ಗೆ ಒಬಿಸಿ ವಿಚಾರ ಎಂಥಾ ಬಿಸಿ ತುಪ್ಪ ಎಂಬ ವಾಸ್ತವತೆ ಅರಿವಾಗಿತ್ತು. ಆ ಮೂಲಕ ಯಡಿಯೂರಪ್ಪ ಯಾವ ರೀತಿ ಪ್ರಬಲ ಸಮುದಾಯದ ಸಂಪೂರ್ಣ ವಿಶ್ವಾಸ ಗಳಿಸಲಿದ್ದಾರೆ ಎಂಬ ಅಂಶ ಬಿಜೆಪಿ ವರಿಷ್ಠರಿಗೆ ಮನದಟ್ಟಾಗಿತ್ತು.
ನಾಯಕತ್ವ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ಹೈ ಕಮಾಂಡ್ಗೆ ಯಡಿಯೂರಪ್ಪರ ಈ ನಡೆ ಎಷ್ಟು ದುಬಾರಿಯಾಗಲಿದೆ ಎಂಬ ವಾಸ್ತವತೆ ಅರಿವಾಗಿತ್ತು. ಇದೇ ಹಿನ್ನೆಲೆ ಬಿಎಸ್ ವೈಗೆ ಒಬಿಸಿ ಪ್ಲಾನ್ಅನ್ನು ಸದ್ಯಕ್ಕೆ ಕೈ ಬಿಡುವಂತೆ ಸೂಚಿಸಿ, ದೆಹಲಿಗೆ ಬರುವಂತೆ ಹೇಳಿತ್ತು.
ಹೈ ಕಮಾಂಡ್ಗೆ ಎದುರಾದ ಆತಂಕವೇನು?:
ಒಬಿಸಿ ಮೀಸಲಾತಿಯಿಂದ ಬಿಎಸ್ವೈ ಪ್ರಬಲ ಸಮುದಾಯದ ಅನುಕಂಪ, ಬೆಂಬಲ, ವಿಶ್ವಾಸಗಳಿಸುವ ಆತಂಕ ಹೈ ಕಮಾಂಡ್ಗೆ ಬಹುವಾಗಿ ಕಾಡಿತ್ತು. ವೀರಶೈವ-ಲಿಂಗಾಯತ ಸಮುದಾಯವೇ ಯಡಿಯೂರಪ್ಪರ ಬೆನ್ನಿಗೆ ನಿಲ್ಲಲಿದ್ದು, ಆಗ ನಾಯಕತ್ವ ಬದಲಾವಣೆ ಬಹುತೇಕ ಕಷ್ಟ ಸಾಧ್ಯ ಎಂಬ ಕಟುಸತ್ಯ ಹೈ ಕಮಾಂಡ್ಗೆ ಗೊತ್ತಾಗಿತ್ತು.
ಒಂದು ವೇಳೆ ಯಡಿಯೂರಪ್ಪರನ್ನು ಬದಲಾಯಿಸಿದರೆ, ಇಡೀ ಸಮುದಾಯಕ್ಕೆ ಬಿಜೆಪಿ ವಿರುದ್ಧ ತಪ್ಪು ಸಂದೇಶ ರವಾನೆಯಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಏಟು ಬೀಳಲಿದೆ ಎಂಬ ಭೀತಿ ಹೈ ಕಮಾಂಡ್ಗೆ ಎದುರಾಗಿತ್ತು. ಸಮುದಾಯದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ ಬಳಿಕ ಯಡಿಯೂರಪ್ಪರನ್ನು ಮುಟ್ಟುವುದು ಕಷ್ಟ ಎಂಬ ಕಟು ಸತ್ಯ ಹೈ ಕಮಾಂಡ್ಗೆ ಅರಿವಾಗಿತ್ತು.
ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ವೀರಶೈವ-ಲಿಂಗಾಯತ ಸಮುದಾಯದ ವಿರೋಧ ಕಟ್ಟಿದರೆ, ಸೋಲು ಖಚಿತ ಎಂಬ ವಾಸ್ತವಾಂಶ ಬಿಜೆಪಿ ವರಿಷ್ಠರಿಗೆ ಇತ್ತು. ಹೀಗಾಗಿ ಒಂದು ವೇಳೆ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರೂ ಬಿಎಸ್ವೈ ಪರ ವಾಲುವ ಬೃಹತ್ ಸಮುದಾಯದ ಮತ ಕ್ರೋಢೀಕರಣದ ವಾಸ್ತವತೆಯೇ ಹೈ ಕಮಾಂಡ್ನ್ನು ಆತಂಕಕ್ಕೀಡು ಮಾಡಿತ್ತು. ಇದರಿಂದ ಮುಂದೆ ಮಾಡಲು ಉದ್ದೇಶಿಸಿರುವ ಸುಗಮ ನಾಯಕತ್ವ ಬದಲಾವಣೆಗೆ ಎದುರಾಗುವ ವಿಘ್ನವನ್ನು ಅರಿತ ಹೈ ಕಮಾಂಡ್ ಕೂಡಲೇ ಬಿಎಸ್ವೈ ಒಬಿಸಿ ಪ್ಲಾನ್ಗೆ ಬ್ರೇಕ್ ಹಾಕಿದೆ.
ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಯಡಿಯೂರಪ್ಪರ ಒಬಿಸಿ ಅಸ್ತ್ರಕ್ಕೆ ಬಿಜೆಪಿ ಹೈ ಕಮಾಂಡ್ ಬೆದರಿದ್ಯಾಕೆ!?