ETV Bharat / state

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಹೆಚ್​ಡಿಕೆ ನಡೆಸುವ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ: ಅಶ್ವತ್ಥ ನಾರಾಯಣ್

author img

By ETV Bharat Karnataka Team

Published : Oct 27, 2023, 2:02 PM IST

ಸಾತನೂರು ತಾಲೂಕು ಆಗಬೇಕು ಎನ್ನುವ ಬೇಡಿಕೆ ಇದೆ. ಅದನ್ನೇ ಡಿ ಕೆ ಶಿವಕುಮಾರ್​ ಅವರ ಕೈಯಲ್ಲಿ ಮಾಡೋಕೆ ಆಗಿಲ್ಲ, ಈಗ ಜಿಲ್ಲೆಯ ಹೆಸರು ಬದಲಾವಣೆಗೆ ಹೊರಟಿದ್ದಾರೆ ಎಂದು ಅಶ್ವತ್ಥನಾರಾಯಣ್ ಟೀಕಿಸಿದ್ದಾರೆ.

Etv Bharatbjp-supports-h-d-kumaraswamy-satyagraha-says-ashwatthanarayan
ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಹೆಚ್​ಡಿಕೆ ನಡೆಸುವ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ: ಅಶ್ವತ್ಥನಾರಾಯಣ್

ಬೆಂಗಳೂರು: "ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿರುವುದು ಖಂಡನೀಯ, ಜಿಲ್ಲೆಯ ಅಭಿವೃದ್ಧಿಗೆ ಏನೂ ಕೊಡುಗೆ ನೀಡದ ಡಿಸಿಎಂ ಡಿ ಕೆ ಶಿವಕುಮಾರ್ ಇದೀಗ ಸ್ವಾರ್ಥಕ್ಕಾಗಿ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ" ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಡಿಸಿಎಂ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರ ರಾಮನಗರ ಜಿಲ್ಲೆಗೆ ಬೇಡ ಬೆಂಗಳೂರಿಗೆ ಸೇರಿಸಬೇಕು ಅಂತಾ ಹೇಳಿ ನಂತರ ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು ಎಂದಿದ್ದಾರೆ. ಕನಕಪುರದಲ್ಲಿ ಡಿ ಕೆ ಶಿವಕುಮಾರ್ 8 ಬಾರಿ ಪ್ರತಿನಿಧಿಸಿದರೂ ಅದು ಹಿಂದುಳಿದ ಕ್ಷೇತ್ರವಾಗಿದೆ.

ಆದರೆ, ತಮ್ಮ ಅಭಿವೃದ್ಧಿ ಮಾತ್ರ ಚೆನ್ನಾಗಿ ಆಗಿದೆ 1500 ಕೋಟಿ ಆದಾಯ ಘೋಷಣೆ ಮಾಡಿಕೊಂಡಿದ್ದೀರಿ, ರಾಮನಗರ ಅಂತಾ ನಾಮಕರಣ ಮಾಡಿದವರು ಕೆಂಗಲ್ ಹನುಮಂತಯ್ಯ ಅವರು ನೀವು ಏನಾದರೂ ಒಂದೇ ಒಂದು ಕಲ್ಲನ್ನು ಇಟ್ಟಿದ್ದೀರಾ?, ತಮ್ಮ ಲಾಭಕ್ಕೆ ಇಡೀ ಜಿಲ್ಲೆಯಲ್ಲಿನ ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೀರಿ" ಎಂದು ಟೀಕಿಸಿದ್ದಾರೆ.

"ನಿಮ್ಮ ಜೀವಮಾನದದಲ್ಲಿ ಪ್ರಧಾನಿ ತರ ಒಂದು ಕೆಲಸ ಮಾಡಿದ್ದೀರಾ?. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಅಷ್ಟೆ, ಪ್ರಧಾನಿಗಳು ರಾಮನಗರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಆದರೆ, ರಾಜೀವ್ ಗಾಂಧಿ ಮೆಡಿಕಲ್ ಕಾಲೇಜನ್ನು ನೀವು ಕಳ್ಳತನ ಮಾಡಿದ್ದೀರಿ, ಡೆಪಾಸಿಟ್ ಬರದ ಬಿಜೆಪಿಯವರು ನಾವು ರಾಮನಗರ ಜಿಲ್ಲೆಯಲ್ಲಿ ಮಾಡಿದ್ದೇವೆ. ಆದರೆ ಸ್ಕ್ವೇರ್ ಫೀಟ್ ಶಿವಕುಮಾರ್ ಎಂದು ನೀವು ಪ್ರಖ್ಯಾತಿ ಆಗಿದ್ದೀರಿ. ಈಗ ರಾಮನಗರಕ್ಕೆ ಬೇರೆ ಹೆಸರಿನ ನಾಮಕರಣ ಮಾಡಲು ಹೊರಟಿದ್ದೀರಿ. ಮೊದಲು ನಿಮ್ಮ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿ, ನಿಮ್ಮ ಮಕ್ಕಳಂತೆ ಆರೋಗ್ಯ ಸೌಲಭ್ಯ ಕೊಡಿ. ಅಭಿವೃದ್ಧಿ ಮಾಡದೇ, ಹೆಸರು ಬದಲಾವಣೆಯ ವೀರ ಅಂದರೆ ಅದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್" ಎಂದು ಲೇವಡಿ ಮಾಡಿದರು.

"ನಾನು ಕನಕಪುರದ ಹೆಮ್ಮೆಯ ಮಗ ಎಂದು ಹೇಳಿಕೊಂಡು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗದೇ, ಬೆಂಗಳೂರಿಗೆ ಓಡಿ ಬಂದಿದ್ದೀರಿ, ನೀವಂತೂ ಜನರಿಗೆ ಒಳ್ಳೆಯದು ಮಾಡಲ್ಲ, ಆದರೆ ಕೆಟ್ಟದ್ದನ್ನಂತೂ ಮಾಡಬೇಡಿ. ಮಂತ್ರಿ ಆಗಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿಸಿದ್ದೀರಿ. ಸಾತನೂರು ತಾಲೂಕು ಆಗಬೇಕು ಎನ್ನುವ ಬೇಡಿಕೆ ಇದೆ, ಅದನ್ನೇ ಅವರ ಕೈಯಲ್ಲಿ ಮಾಡೋಕೆ ಆಗಿಲ್ಲ ಈಗ ಜಿಲ್ಲೆಯ ಹೆಸರು ಬದಲಾವಣೆಗೆ ಹೊರಟಿದ್ದಾರೆ" ಎಂದು ವ್ಯಂಗ್ಯವಾಡಿದರು.

"ಕಾಂಗ್ರೆಸ್ ಸರ್ಕಾರ ಅಂದರೆ ಲೂಟಿ, ಬುರುಡೆ ಬಿಡೋದು, ಅಧಿಕಾರಕ್ಕೆ ಬಂದ ಈ ಆರು ತಿಂಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಐಟಿ ದಾಳಿಯಲ್ಲಿ ದುಡ್ಡು ಸಿಕ್ಕಿದೆ, ಅದರ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ನೈಸ್ ನಿಂದ ಶುರುವಾಗಿ ಎಲ್ಲ ಕಡೆಯೂ ಡಿಕೆ ಶಿವಕುಮಾರ್ ಅವರದ್ದು ಬೇನಾಮಿ ಇದೆ. ಇವರ ಬೇನಾಮಿ ಬಗ್ಗೆ ದೊಡ್ಡ ಸಿರೀಸ್ ಮಾಡಬಹುದು" ಎಂದು ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆ ಎಂದಾದರೆ ತೊಂದರೆ ಇಲ್ಲ: ರಾಮಲಿಂಗಾರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.