ETV Bharat / state

ಚುನಾವಣೆ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೇ ಬರಬೇಕು: ಹೆಚ್​ಡಿಕೆಯಿಂದ ಸಮ್ಮಿಶ್ರ ಸರ್ಕಾರ ರಚನೆ ಸುಳಿವು?

ಬಿಜೆಪಿ ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವ್ರ ಜತೆ ಸೇರಿ ನಾನು ಸರ್ಕಾರ ನಡೆಸೋಕ್ಕೆ ಆಗುತ್ತಾ?. ಮುಂದಿನ ಸಲ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ. ಆಗ ಬಿಜೆಪಿಯವ್ರು ನಮ್ಮ ಮುಂದೆ ಅರ್ಜಿ ಹಿಡಿದು ಬರ್ತಾರೆ ಎಂದು ಮಾಜಿ ಸಿಎಂ‌ ಕುಮಾರಸ್ವಾಮಿ ಹೇಳಿದರು.

author img

By

Published : Dec 19, 2022, 6:01 PM IST

ಜೆಡಿಎಸ್​ ಮತ್ತು ಬಿಜೆಪಿ
ಜೆಡಿಎಸ್​ ಮತ್ತು ಬಿಜೆಪಿ

ಬೆಂಗಳೂರು: 2023ರ ಚುನಾವಣೆ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೆ ಬರಬೇಕು ಎಂದು ಮಾಜಿ ಸಿಎಂ‌ ಕುಮಾರಸ್ವಾಮಿ ಮತ್ತೆ ಸಮ್ಮಿಶ್ರ ಸರ್ಕಾರ ರಚನೆಯ ಅನುಮಾ‌ನ ಮೂಡಿಸುವ ಹೇಳಿಕೆ ನೀಡಿದ್ದಾರೆ.

ಜೆ.ಪಿ.ಭವನದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಿಸ್ಟರ್ ಸಂತೋಷ್, ಮಿಸ್ಟರ್ ಆರ್. ಅಶೋಕ್. 2023ರ ಚುನಾವಣೆ ಬಳಿಕ ಬಿಜೆಪಿಯವರು ಜನತಾದಳದ ಮನೆ ಬಾಗಿಲಿಗೆ ಬರಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ಮತ್ತೆ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ, ಬಿಜೆಪಿ ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವ್ರ ಜತೆ ಸೇರಿ ನಾನು ಸರ್ಕಾರ ನಡೆಸೋಕ್ಕೆ ಆಗುತ್ತಾ?. ಮುಂದಿನ ಸಲ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ. ಆಗ ಬಿಜೆಪಿಯವ್ರು ನಮ್ಮ ಮುಂದೆ ಅರ್ಜಿ ಹಿಡಿದು ಬರ್ತಾರೆ ಎಂದು ಸಮಜಾಯಿಶಿ ನೀಡಿದರು.

ಬಿ.ಎಲ್. ಸಂತೋಷ್ ವಿರುದ್ಧ ಕಿಡಿ: ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು. ನಿನಗೂ ಕರ್ನಾಟಕಕ್ಕೂ ಸಂಬಂಧ ಇಲ್ಲ. ಸಂತೋಷವಾಗಿ ಇದ್ದಾರಂತೆ. ಮಿಸ್ಟರ್ ಸಂತೋಷ್.. ನಿಮ್ಮ ಯೋಗ್ಯತೆಗೆ ಸರ್ಕಾರ ಲೂಟಿ ಮಾಡ್ತಾ ಇದಿಯಲ್ಲಾ?. ದರೋಡೆ ಹಣ ತೆಲಂಗಾಣಕ್ಕೆ ಕೊಂಡೊಯ್ದು ಸರ್ಕಾರ ಬೀಳಿಸಲು ಹೊರಟಿದ್ದೀರಾ. ಇಂದು ಆರೋಪಿಯಾಗಿದ್ದೀರಾ. ಕ್ರಿಕೆಟ್ ಬೆಟ್ಟಿಂಗ್ ಮಾಡಿದ ಹಣದಿಂದ ಸರ್ಕಾರ ರಚನೆ ಮಾಡಿದ್ದೀರ. ಜನಗಳ ಮುಂದೆ ನಾವು ಹೋಗುವವರು. ನೀವು ರಣಹದ್ದುಗಳು. ಅಪಮಾರ್ಗದಿಂದ ಆಡಳಿತ ನಡೆಸುವವರು ನೀವು. ನಿಮ್ಮಿಂದ ತ್ಯಾಗ ಮನೋಭಾವ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋದಿ ಹೆಸರಲ್ಲಿ ಹೊಟ್ಟೆ ಪಾಡು ಮಾಡುವವರು ನೀವು. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. ಅವರಿಗೆ ಜನರ ಕಷ್ಟ ಏನು ಗೊತ್ತು?. ಬಿಜೆಪಿ ಎಂಪಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರಲ್ಲ. ವಿಶ್ವನಾಥ್ ಅವರಿಗೆ 15 ಕೋಟಿ ಕೊಟ್ಟಿರೋದಾಗಿ. ಈಗ ಯಾರ ಮೇಲೆ ಕ್ರಮ ತಗೋತಾರೆ ತಗೊಳ್ಳಲಿ. ಲೂಟಿ ಹೊಡೆದ ದುಡ್ಡು ಕೊಟ್ಟಿದ್ದಾರೆ ಎಂದು ಹೆಚ್​ಡಿಕೆ ಕಿಡಿಕಾರಿದರು.

ಸಚಿವ ಅಶೋಕ್​ಗೆ ತಿರುಗೇಟು: ಇದೇ ವೇಳೆ ಸಚಿವ ಆರ್.ಅಶೋಕ್​ಗೆ ತಿರುಗೇಟು ನೀಡಿದ ಅವರು, ಬೆಳಗಾವಿ ಅಧಿವೇಶನ ನಡೆಸುವುದು ಬಿಲ್ ಪಾಸ್ ಮಾಡಲು. ಸಾವರ್ಕರ್ ಫೋಟೋ ಅನಾವರಣಕ್ಕೆ ಮಾಡುತ್ತಿದ್ದೀರಾ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲು ಕಾರಣ ಕುಮಾರಸ್ವಾಮಿ. ನೀವು ಯಾರೂ ಸುವರ್ಣಸೌಧ ಕಟ್ಟಲು ಹೇಳಿಲ್ಲ ಎಂದು ಸಚಿವ ಆರ್.ಅಶೋಕ್ ಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ನಿಮ್ಮ ನಾಯಕರು ಬೆಳಗಾವಿಯನ್ನು ರಣಹದ್ದು ತರ ಲಪಟಾಯಿಸಲು ಮುಂದಾಗಿದ್ದರು. ಅದನ್ನು ಮರೆತರೇ.. ನೆನಪಿಸಿಕೊಳ್ಳಿ. ನಿಮ್ಮಿಂದ ಕಲಿಯಬೇಕಾಗಿಲ್ಲ. ಬೆಳಗಾವಿ ಅಧಿವೇಶನಕ್ಕೆ ಬರದೇ ರಾಜ್ಯ ಸುತ್ತುತ್ತಿದ್ದೇನೆ. ನಿಮ್ಮ ಡ್ರಾಮಾ ನೋಡೋಕ್ಕೆ ಬೆಳಗಾವಿಗೆ ಬರ್ಬೇಕಾ?. ಮತ್ತೆ ಜನತೆಗೋಸ್ಕರ ಪಕ್ಷ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಸಾವರ್ಕರ್ ಫೋಟೋ ಆದರೂ ಹಾಕಲಿ, ಗೋಡ್ಸೆ ಫೋಟೋ ಆದರೂ ಹಾಕಲಿ ಎಂದು ಸುವರ್ಣಸೌಧ ಸಭಾಂಗಣದಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದರ ವಿರುದ್ಧ ಹೆಚ್​ಡಿಕೆ ಪ್ರತಿಕ್ರಿಯಿಸಿದರು.

ಮೈಮರೆತರೆ ಬದಲಾವಣೆ: ಜೆಡಿಎಸ್ ನ 2023ರ ಚುನಾವಣೆಗಾಗಿನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. 116 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಜಿಲ್ಲಾವಾರು ಪಕ್ಷದ ಮುಖಂಡರ ಮನವಿ ಮೇರೆಗೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ತಡೆ ಹಿಡಿದಿದ್ದೇವೆ. ಇದರಲ್ಲಿ ನಮ್ಮಿಂದ ಯಾವುದೇ ಲೋಪ‌ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023: ಜೆಡಿಎಸ್​ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ: 93 ಅಭ್ಯರ್ಥಿಗಳ ಹೆಸರು ಘೋಷಣೆ

ಮುಂದಿನ ನಾಲ್ಕು ತಿಂಗಳು ಅಭ್ಯರ್ಥಿಗಳಿಗೆ ಸಲಹೆ ಕೊಡುತ್ತಾ ಇರುತ್ತೇವೆ. ಪಟ್ಟಿಯಲ್ಲಿನ ಅಭ್ಯರ್ಥಿಗಳು ಕೆಲಸ‌ ಮಾಡುವುದರಲ್ಲಿ ಮೈಮರೆತರೆ ಬದಲಾವಣೆ ಆಗಲಿದೆ ಎಂದು ಎಚ್ಚರಿಕೆ ನೀಡಿದರು. ಲೋಪದೋಷ ಆದರೆ ಕೆಲವು ಹೆಸರು ಬದಲಾವಣೆ ಆಗಬಹುದು. ನಾನೇ ಅಭ್ಯರ್ಥಿಯಾಗಿ ಇರುತ್ತೇನೆ ಎಂದು ಮೈಮರೆಯುವ ಹಾಗಿಲ್ಲ. ಲೋಪ ದೋಷವಾದರೆ ಬದಲಾವಣೆ ಆಗಲಿದೆ ಎಂದು ತಿಳಿಸಿದರು.

ಗೋಡಾ ಹೇ ಮೈದಾನ ಹೇ: ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ‌.‌ ಇಬ್ರಾಹಿಂ ಏ ಪಂಚೆ.. ಆಪರೇಷನ್ ಕಮಲದ ಆ ವಿಡಿಯೋ ನೋಡಿ ಸಂತೋಷವಾಗಿದ್ದಿಯಾ? ಅಥವಾ ತಡೆಯಾಜ್ಞೆ ಸಿಕ್ತು ಎಂದು ಸತೋಷವಾಗಿದ್ದೀರಾ? ಎಂದು ಬಿ.ಎಲ್.ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎಷ್ಟು ಜನ ಸತ್ತಿದ್ದಾರೆ. ಮಿಸ್ಟರ್ ಸಂತೋಷ್.. ಅಶ್ವಯಾಗ ಕುದುರೆ ಬಿಟ್ಡಿದ್ದೇವೆ. ಬನ್ನಿ ಮೈದಾನಕ್ಕೆ ಬನ್ನಿ ನೋಡೋಣ. ಗೋಡಾ ಹೇ ಮೈದಾನ್ ಹೇ ಎಂದು ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.