ETV Bharat / state

ಅಂಬೇಡ್ಕರ್‌ಗೆ ಅವಮಾನ ಮಾಡಿದ ಕಾಂಗ್ರೆಸ್‌ಗೆ ಅವರ ಹೆಸರು ಹೇಳಿ ಮತ ಪಡೆಯುವ ಹಕ್ಕಿಲ್ಲ: ಸಿ.ಟಿ ರವಿ

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಸಿ.ಟಿ.ರವಿ ಮಾತನಾಡಿದರು.

CT Ravi
ಸಿ.ಟಿ.ರವಿ
author img

By

Published : Jul 11, 2021, 6:04 PM IST

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿ, ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಅವರ ಹೆಸರು ಹೇಳಿ ಮತ ಕೇಳುವ ಯಾವ ಹಕ್ಕೂ ಉಳಿದಿಲ್ಲ. ಅವರ ಚಿಂತನೆಗಳನ್ನು ಅತಿ ಹೆಚ್ಚು ಅನುಷ್ಠಾನಕ್ಕೆ ತಂದು ಅವರಿಗೆ ಗರಿಷ್ಠ ಗೌರವ ನೀಡಿದ ಪಕ್ಷ ಬಿಜೆಪಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

meeting
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ

ದೆಹಲಿಯಲ್ಲಿ ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ಅವಕಾಶವನ್ನು ಕಾಂಗ್ರೆಸ್ ನೀಡಲಿಲ್ಲ. ಆದರೆ ಅಂಬೇಡ್ಕರ್ ಅವರು ಹುಟ್ಟಿದ ಮಹುವಾ ಪ್ರದೇಶವನ್ನು ಅಭಿವೃದ್ಧಿಪಡಿಸಿ ಅದನ್ನು ಸ್ಮಾರಕವನ್ನಾಗಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಾಡಿದೆ. ದೀಕ್ಷಾ ಭೂಮಿ, ಕರ್ಮ ಭೂಮಿ ಸೇರಿದಂತೆ ಅವರು ಕಾರ್ಯ ನಿರ್ವಹಿಸಿದ ಎಲ್ಲೆಡೆ ಅಭಿವೃದ್ಧಿಪಡಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಅದನ್ನು ದಲಿತರು, ಬುದ್ಧಿಜೀವಿಗಳಿಗೆ ತಿಳಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.

'ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದಿದ್ದ ಬಾಬಾ ಸಾಹೇಬ್'

ಕಾಂಗ್ರೆಸ್‍ನ ಚಿಂತನೆಗಳನ್ನು ಆಧರಿಸಿದ ಡಾ.ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದು ಕರೆದಿದ್ದರು. ಇದನ್ನು ತಿಳಿವಳಿಕೆ ಇರುವ ಜನರ ನಡುವೆ ಹಂಚಿಕೊಳ್ಳಬೇಕು. 100ಕ್ಕೂ ಹೆಚ್ಚು ದಲಿತರಿರುವ ಬೂತ್‍ನಲ್ಲಿ ದಲಿತ ಮೋರ್ಚಾದ ಸಂಘಟನೆಯನ್ನು ದೃಢಗೊಳಿಸಬೇಕು. ಎಸ್‍ಸಿ ವಿದ್ಯಾರ್ಥಿ ನಿಲಯಗಳಲ್ಲಿ ಉಸ್ತುವಾರಿಗಳನ್ನು ನೇಮಿಸಿ ವಾಸ್ತವಿಕ ಸಂಗತಿಗಳನ್ನು ತಿಳಿಸಬೇಕು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದಲಿತ ಸಮುದಾಯದ ಮೇಲೆ ಪ್ರಭಾವ ಬೀರಬಹುದಾದ ನಾಯಕರನ್ನು ಗುರುತಿಸಿ ಅವರಿಗೆ ಪಕ್ಷದ ಕಾರ್ಯವನ್ನು ತಿಳಿಸಬೇಕು. ಇದರಿಂದ ನಮ್ಮ ಪಕ್ಷವನ್ನು ಬಲಪಡಿಸಲು ಅವಕಾಶವಿದೆ ಎಂದರು.

ಬಡವರಿಗಾಗಿ ಹಲವು ಯೋಜನೆ

ಕಾಂಗ್ರೆಸ್‍ನವರು ಬಡವರ, ಬಡತನ ದೂರ ಮಾಡಲು ಯಾವುದೇ ಯೋಜನೆ ರೂಪಿಸಲಿಲ್ಲ. ಆದರೆ ನರೇಂದ್ರ ಮೋದಿ, ಜನ್‍ಧನ್ ಖಾತೆಗಳ ಮೂಲಕ ಬಡವರನ್ನು ಬ್ಯಾಂಕಿಂಗ್ ಜೊತೆ ಜೋಡಿಸಿದರು. ಅವರ ಖಾತೆಗೆ ಹಣ ಹಾಕಿ ಅವರ ಬದುಕಿನ ಆಲೋಚನೆಗಳನ್ನು ಬದಲಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ದೀನದಯಾಳ್ ವಿದ್ಯುತ್ತೀಕರಣ ಯೋಜನೆ, ಸೌಭಾಗ್ಯ ಯೋಜನೆ, ಉಜ್ವಲಾ ಗ್ಯಾಸ್ ಯೋಜನೆ ಇವೆಲ್ಲವೂ ಬಡಜನರಿಗಾಗಿ ರೂಪಿತವಾದ ಯೋಜನೆಗಳಾಗಿವೆ.

ವಲಸೆ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಜಾರಿಗೊಳಿಸಲಾಗಿದೆ. ಮುದ್ರಾ ಯೋಜನೆ, ಸ್ಟಾರ್ಟಪ್ ಮೂಲಕ ಕೈಗಾರಿಕೆ ಸ್ಥಾಪನೆಗೆ ಶೂರಿಟಿ ಕೊಡಲಾಗಿದೆ. ಇವೆಲ್ಲವೂ ಕೆಲವು ಸ್ಯಾಂಪಲ್‍ಗಳಷ್ಟೇ ಇದೆಲ್ಲವನ್ನೂ ಜನರಿಗೆ ತಿಳಿಸಬೇಕು. ಸಮೂಹವನ್ನು ಸಂಘಟಿಸುವ ಕೆಲಸವನ್ನು ಮೋರ್ಚಾಗಳು ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.