ETV Bharat / state

ನಿಲುವಳಿ ಸೂಚನೆ ಕರೆದ ಉದ್ದೇಶ ಈಡೇರಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಆಯನೂರು

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿ ನಡೆಸಿದ ಚರ್ಚೆಯಲ್ಲಿ ಪ್ರತಿಪಕ್ಷದಿಂದ ಯಾವುದೇ ಸಮರ್ಥ ಪ್ರತಿಪಾದನೆ ಕಂಡುಬಂದಿಲ್ಲ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

bjp-member-aayanoor-manjunaths-speech-at-vidhan-parishad-assemblybjp-member-aayanoor-manjunaths-speech-at-vidhan-parishad-assembly
bjp-member-aayanoor-manjunaths-speech-at-vidhan-parishad-assembly
author img

By

Published : Feb 19, 2020, 8:57 PM IST

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿ ನಡೆಸಿದ ಚರ್ಚೆಯಲ್ಲಿ ಪ್ರತಿಪಕ್ಷದಿಂದ ಯಾವುದೇ ಸಮರ್ಥ ಪ್ರತಿಪಾದನೆ ಕಂಡುಬಂದಿಲ್ಲ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.

ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷದ ನಿಲುವಳಿ ಸೂಚನೆ ಅಡಿ ಮಾತನಾಡಿದ ಅವರು, ರಾಜ್ಯಪಾಲರ ಬಜೆಟ್ ಮೇಲಿನ ಚರ್ಚೆಗಿಂತ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮಂಗಳೂರು, ಹುಬ್ಬಳ್ಳಿ, ಬೀದರ್​​ನಲ್ಲಿ ಮಾತ್ರ ಸ್ವಲ್ಪ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆದರೆ ಉಳಿದ ಯಾವುದೇ ಕಡೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಪ್ರತಿಪಕ್ಷದ ಆರೋಪ ನಾವು ಸ್ವೀಕರಿಸುತ್ತಿದ್ದೇವೆ. ಆದರೆ ಎಲ್ಲಿ ತಪ್ಪಾಗಿದೆ ಎಂಬ ಮಾಹಿತಿ ನೀಡುವ ಕಾರ್ಯ ಆಗಿಲ್ಲ ಎಂದಾಗ ಐವಾನ್ ಡಿಸೋಜ ಮಾತಿಗಿಳಿದರು.

ಅದಕ್ಕೆ ಅವರ ಕಾಲೆಳೆದ ಆಯನೂರು ಮಂಜುನಾಥ್, ಐವಾನ್ ನನ್ನ ಆಪ್ತ ಸ್ನೇಹಿತ. ಆದರೆ ಅವರು ಕೂತ ಜಾಗ ಸರಿಯಿಲ್ಲ. ಬಹುಶಃ ಆಸನದಲ್ಲಿ ಮೊಳೆ ಇದ್ದು ಚುಚ್ಚುತ್ತಿರಬೇಕು. ಅದಕ್ಕೆ ಆಸನ ಬದಲಿಸಿ ಇಲ್ಲವೇ ಚುಚ್ಚುತ್ತಿರುವ ವಸ್ತು ಹುಡುಕಿ ತೆಗೆಸಿ ಎಂದು ಸಭಾಪತಿಗಳಿಗೆ ವಿನಂತಿಸಿಕೊಂಡರು.

ಮಾತು ಮುಂದುವರಿಸಿ, ಎಮರ್ಜೆನ್ಸಿ ಸಮಯದಲ್ಲಿ ನಾವು ಜೈಲಲ್ಲಿದ್ದೆವು. ಹೊಡೆಯಬಾರದ ಜಾಗದಲ್ಲಿ ನಮಗೆ ಹೊಡೆದಿದ್ದರು. ಅಂದು ಇಲ್ಲದ ಕಾನೂನು ಸುವ್ಯವಸ್ಥೆ ಇಂದು ಎಲ್ಲಿ ಹದಗೆಟ್ಟಿದೆ ಎಂದಾಗ ಮತ್ತೆ ಎದ್ದ ಐವಾನ್ ಡಿಸೋಜ, ಅಂದರೆ ಇಂದು ರಾಜ್ಯದಲ್ಲಿ ಎಮರ್ಜನ್ಸಿ ಇದೆಯೇ ಎಂದು ಪ್ರಶ್ನೆ ಹಾಕಿದರು. ಎಲ್ಲರೂ ನಕ್ಕಾಗ ಪ್ರತಿಕ್ರಿಯಿಸಿದ ಮಂಜುನಾಥ್, ನನಗೂ ಸರಿಯಾದ ಸಮಯಕ್ಕೆ ಬಾಂಬ್ ತಿರುಗಿ ಎಸೆಯಲು ಬರುತ್ತದೆ ಎಂದರು.

ಇಂದು ದೊಡ್ಡ ಗಲಾಟೆ ಆಗುತ್ತಿದೆ. ಶರತ್ ಮಡಿವಾಳ, ಪರೇಶ್ ಮೆಸ್ತಾ ಅವರು ಸಾವನ್ನಪ್ಪಿದಾಗ ಬಿಜೆಪಿ ಸರ್ಕಾರ ಇತ್ತಾ? ಅಂದು ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲವಾ? ನಿನ್ನೆ ಛಾಯಾಚಿತ್ರ ಪ್ರದರ್ಶನವಾಯಿತು. ಅದನ್ನು ತಂದಿದ್ದು ನಾವಲ್ಲ. ಅವು ಸಿಸಿಟಿವಿ ದಾಖಲೆಗಳು. ಮೇಲ್ಮನೆ ಸದನದಲ್ಲಿ ಗಂಭೀರ ಚರ್ಚೆ ಆಗಬೇಕು. ಅನಗತ್ಯ ವಿವರಣೆ ಬೇಡ. ನಿನ್ನೆಯಿಂದ ಒಂದೇ ವಿಚಾರ ಪದೇ ಪದೆ ಹೇಳಿದರೆ ಕೇಳುವುದು ಹೇಗೆ. ಸದನದಲ್ಲಿ ಹೊಸ ವಿಚಾರ ಚರ್ಚೆ ಆಗಿದ್ದರೆ ಹೊಸ ನಿರ್ಣಯವನ್ನು ಕೈಗೊಳ್ಳಬಹುದಿತ್ತು. ನಿಲುವಳಿ ಸೂಚನೆ ಕರೆದ ಉದ್ದೇಶ ಈಡೇರಿಲ್ಲ. ರಾಜ್ಯದಲ್ಲಿ ಕಾನೂನು ಸೂವ್ಯವಸ್ಥೆ ಹದಗೆಟ್ಟಿಲ್ಲ. ರಾಜ್ಯದಲ್ಲಿ ಎಲ್ಲಾ ಸರಿಯಿದೆ. ನಿಲುವಳಿ ಸೂಚನೆ ವಿಫವಾಗಿದೆ ಎಂದು ಪ್ರತಿಪಾದಿಸುತ್ತೇನೆ. ಪರಿಷತ್​ನ ಪವಿತ್ರ ಸಭೆಯನ್ನು ಗೌರವಿಸುತ್ತೇನೆ. ಇದು ಮೇಲ್ಮನೆ. ಕೆಂಪು ಹಾಸು ಇದೆ. ಇದಕ್ಕೆ ವಿಶೇಷ ಅರ್ಥವಿದೆ. ಇದು ಬೆಳಗಬೇಕು, ಮಾಸಬಾರದು. ನಿಜವಾಗಿ ಇಲ್ಲಾಗಬೇಕಾದ ಚರ್ಚೆ ಆಗಿಲ್ಲ. ಆ ಕಾರಣ ವಿಫಲವಾಗಿದೆ ಎಂದರು.

ಒಟ್ಟಾರೆ ಚರ್ಚೆಯಲ್ಲಿ ಹಾನಿ, ಅಭಿವೃದ್ಧಿ ಕುಂಠಿತವಾಗಿಲ್ಲ. ಎಲ್ಲಾ ಸರಿ ಇದೆ ಎಂದು ಪ್ರತಿಪಾದಿಸುತ್ತೇನೆ. ಸರ್ಕಾರಕ್ಕೂ ಈ ವಿವರ ನೀಡುತ್ತೇನೆ ಎಂದರು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದನದ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.