ETV Bharat / state

ನಾನೂ ಮೇಯರ್​ ಸ್ಥಾನದ ಆಕಾಂಕ್ಷಿ-ಆದ್ರೆ ಪಕ್ಷದ ನಿರ್ಧಾರಕ್ಕೆ ತಲೆಬಾಗುವೆ : ಪದ್ಮನಾಭರೆಡ್ಡಿ

ಬಿಬಿಎಂಪಿ ಮೇಯರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಪೊರೇಟರ್​ಗಳ ಸಭೆ ನಡೆಸಲಾಯಿತು.

ಪದ್ಮನಾಭರೆಡ್ಡಿ
author img

By

Published : Sep 25, 2019, 8:36 PM IST

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಪೊರೇಟರ್​ಗಳ ಸಭೆ ನಡೆಸಲಾಯಿತು. ಅಭ್ಯರ್ಥಿ ಆಯ್ಕೆಗೆ ರಚಿಸಿರುವ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು ನೇತೃತ್ವದ ಸಮಿತಿ ‌ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಶಾಸಕರಾದ ರವಿಸುಬ್ರಮಣ್ಯ, ಎನ್.ರವಿಕುಮಾರ್, ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು, ಮೇಯರ್ ಹುದ್ದೆಯ ಆಕಾಂಕ್ಷಿಗಳು ಕೂಡಾ ಭಾಗಿಯಾಗಿದ್ದರು.

ನಾನೂ ಮೇಯರ್​ ಸ್ಥಾನದ ಆಕಾಂಕ್ಷಿ

ಪದ್ಮನಾಭರೆಡ್ಡಿ ಮತ್ತು ಎಲ್.ಶ್ರೀನಿವಾಸ್ ನಡುವೆ ಮೇಯರ್ ಗಾದಿಗೆ ತೀವ್ರ ಪೈಪೋಟಿ ನಡೆದ ಹಿನ್ನೆಲೆ ಮೇಯರ್ ಆಯ್ಕೆ ಸಭೆ ಮುಕ್ತಾಯದ ನಂತರ ಬಹುತೇಕ ಕಾರ್ಪೊರೇಟರ್​ಗಳನ್ನು ರಾಜ್ಯಾಧ್ಯಕ್ಷ ನಳೀನ್​ಕುಮಾರ ಕಟೀಲ್ ಕರೆದು ಅಭಿಪ್ರಾಯ ಸಂಗ್ರಹಿಸಿದರು.

ಪದ್ಮನಾಭರೆಡ್ಡಿಗೆ ಮೇಯರ್ ಹುದ್ದೆ ಬೇಡವೇಬೇಡ‌. ನಾಲ್ಕು ವರ್ಷ ಪ್ರತಿಪಕ್ಷ ನಾಯಕನ ಹುದ್ದೆ ಅನುಭವಿಸಿದ್ದಾರೆ. ಹಾಗಾಗಿ ಈ ಬಾರಿ ಅವರಿಗೆ ಮೇಯರ್ ಸ್ಥಾನ ನೀಡಬಾರದು. ಉಮೇಶ್ ಶೆಟ್ಟಿ ಇಲ್ಲವೇ ಎಲ್.ಶ್ರೀನಿವಾಸ್ ಅವರಿಗೆ ಅವಕಾಶ ನೀಡಿ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 16 ಕಾರ್ಪೊರೇಟರ್​ಗಳು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಯಲಚೇನಹಳ್ಳಿ ಕಾರ್ಪೊರೇಟರ್ ಬಿ.ಬಾಲಕೃಷ್ಣ, ನಾನು ಪಕ್ಷಕ್ಕಾಗಿ 14 ವರ್ಷದಿಂದ ದುಡಿದಿದ್ದೇನೆ‌. ಮೇಯರ್ ಸ್ಥಾನದ ಆಕಾಂಕ್ಷಿ. ನಾನು ಪಕ್ಷಕ್ಕೆ ಎಂದೂ ಕೆಟ್ಟ ಹೆಸರು ತರಲ್ಲ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಅವಕಾಶದ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಮಾತನಾಡಿದ ಮೇಯರ್ ಸ್ಥಾನದ ಆಕಾಂಕ್ಷಿ ಪದ್ಮನಾಭರೆಡ್ಡಿ, ಪಕ್ಷ ನೇಮಕ ಮಾಡಿದ ಸಮಿತಿ ನಮ್ಮೆಲ್ಲರ ಸಭೆ ಕರೆದು ಚರ್ಚೆ ನಡೆಸಿದೆ. ಎಲ್ಲ ಸದಸ್ಯರು ಅವರರವರ ಅಭಿಪ್ರಾಯ ಹೇಳಿದ್ದಾರೆ. ನಾನೂ ಮೇಯರ್ ಸ್ಥಾನದ ಆಕಾಂಕ್ಷಿ. ಆದರೆ ಪಕ್ಷ ಏನೂ ಹೇಳುವುದೋ ಆ ಆದೇಶಕ್ಕೆ ತಲೆಬಾಗುವೆ. ಏಳೆಂಟು ಜನ ಮೇಯರ್ ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ, ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

Intro:

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ಬಿಜೆಪಿ ಕಾರ್ಪೋರೇಟರ್ ಗಳ ಸಭೆ ನಡೆಸಲಾಯಿತು.

ಅಭ್ಯರ್ಥಿ ಆಯ್ಕೆಗೆ ರಚಿಸಿರುವ ಸಿ.ವಿ. ರಾಮನ್ ನಗರ ಶಾಸಕ ಎಸ್. ರಘು ನೇತೃತ್ವದ ಸಮಿತಿ ‌ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಶಾಸಕರಾದ ರವಿಸುಬ್ರಮಣ್ಯ, ಎನ್. ರವಿಕುಮಾರ್, ಬೆಂಗಳೂರು ಮಹಾನಗರ ಬಿಜೆಪಿ ಅಧ್ಯಕ್ಷ ಎಸ್. ಮುನಿರಾಜು, ಮೇಯರ್ ಹುದ್ದೆಯ ಆಕಾಂಕ್ಷಿಗಳು ಕೂಡಾ ಸಭೆಯಲ್ಲಿ ಭಾಗಿಯಾಗಿದ್ದರು.

ಪದ್ಮನಾಭರೆಡ್ಡಿ ಮತ್ತು ಎಲ್.ಶ್ರೀನಿವಾಸ್ ನಡುವೆ ಮೇಯರ್ ಗಾದಿಗೆ ತೀವ್ರ ಪೈಪೋಟಿ ನಡೆದ ಹಿನ್ನಲೆಯಲ್ಲಿ ಮೇಯರ್ ಆಯ್ಕೆ ಸಭೆ ಮುಕ್ತಾಯದ ನಂತರ ಬಹುತೇಕ ಕಾರ್ಪೋರೇಟರ್ ಗಳನ್ನು ರಾಜ್ಯಾಧ್ಯಕ್ಷ ಕಟೀಲ್ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿದರು.

ಪದ್ಮನಾಭರೆಡ್ಡಿಗೆ ಮೇಯರ್ ಹುದ್ದೆ ಬೇಡವೇಬೇಡ‌.ನಾಲ್ಕು ವರ್ಷ ಪ್ರತಿಪಕ್ಷ ನಾಯಕನ ಹುದ್ದೆ ಅನುಭವಿಸಿದ್ದಾರೆ. ಹಾಗಾಗಿ ಈ ಬಾರಿ ಅವರಿಗೆ ಮೇಯರ್ ಸ್ಥಾನ ನೀಡಬಾರದು ಉಮೇಶ್ ಶೆಟ್ಡಿ ಇಲ್ಲವೇ ಶ್ರೀನಿವಾಸ್ ಗೆ ಅವಕಾಶ ನಿಕಡಿ ಎಂದು ಗೋವಿಂದರಾಜನಗರ ,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 16ಕಾರ್ಪೋರೇಟರ್ ಗಳ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಯಲಚೇನಹಳ್ಳಿ ಕಾರ್ಪೋರೇಟರ್ ಬಿ.ಬಾಲಕೃಷ್ಣ ಕೂಡ ನಾನು ಪಕ್ಷಕ್ಕಾಗಿ 14 ವರ್ಷದಿಂದ ದುಡಿದಿದ್ದೇನೆ‌.ಮೇಯರ್ ಸ್ಥಾನಕ್ಕೆ ಆಕಾಂಕ್ಷಿ.ನಾನು ಪಕ್ಷಕ್ಕೆ ಎಂದೂ ಕೆಟ್ಟ ಹೆಸರು ತರಲ್ಲ‌.ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಅವಕಾಶದ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಬಳಿಕ ಮಾತನಾಡಿದ ಮೇಯರ್ ಸ್ಥಾನದ ಆಕಾಂಕ್ಷಿ ಪದ್ಮನಾಭರೆಡ್ಡಿ, ಪಕ್ಷ ನೇಮಕ ಮಾಡಿದ ಸಮಿತಿ ನಮ್ಮೆಲ್ಲರ ಸಭೆ ಕರೆದು ಚರ್ಚೆ ನಡೆಸಿದೆ ಎಲ್ಲಾ ಸದಸ್ಯರು ಅವರರ ಅಭಿಪ್ರಾಯ ಹೇಳಿದ್ದಾರೆ ನಾನೂ ಮೇಯರ್ ಆಕಾಂಕ್ಷಿ ಆದರೆ ಬಿಜೆಪಿ ಪಕ್ಷ ಏನೂ ಹೇಳುವುದೋ ಆ ಆದೇಶಕ್ಕೆ ತಲೆಬಾಗುವೆ‌ ಎಳೆಂಟು ಜನ ಮೇಯರ್ ಆಕಾಂಕ್ಷಿಗಳಿದ್ದಾರೆ ಬಿಜೆಪಿ ಶಿಸ್ತಿನ ಪಕ್ಷ , ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.