ಬೆಂಗಳೂರು: ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಕೇಂದ್ರ ಸಚಿವ ಹಾಗು ಬಿಜೆಪಿ ಹಿರಿಯ ನಾಯಕ ತಾವರ್ ಚಂದ್ ಗೆಹ್ಲೋಟ್ ಅವರಿಗೆ ರಾಜ್ಯ ಬಿಜೆಪಿ ನಾಯಕರು ಶುಭಾಷಯ ಕೋರಿದರು.
ಗೆಹ್ಲೋಟ್ ನಿವಾಸಕ್ಕೆ ತೆರಳಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ನಿಯೋಜಿತ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದರು. ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ, ಕೇಂದ್ರ ಸಂಪುಟದಲ್ಲಿ ಸಹಪಾಠಿಯಾಗಿಯೂ ಆಗಿದ್ದ ಗೆಹ್ಲೋಟ್ ಅವರಿಗೆ ರಾಜ್ಯದ ಪರವಾಗಿ ಸ್ವಾಗತ ಕೋರಿದರು.
ಗೆಹ್ಲೋಟ್ ಅವರ ಸಾರ್ವಜನಿಕ ಜೀವನದ ಸುದೀರ್ಘ ಅನುಭವ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯಿಂದ ರಾಜ್ಯ ಪ್ರಯೋಜನ ಪಡೆಯಲಿದೆ. ಅದೇ ರೀತಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಾಗಿ ಹಾಲಿ ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ