ETV Bharat / state

ಬಣ ರಾಜಕೀಯಕ್ಕೆ ಅವಕಾಶ ನೀಡಬಾರದು.. ಕಟೀಲ್‌ಗೆ ಸಂತೋಷ್ ಸೂಚನೆ..

ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನ ನೇಮಿಸದಂತೆ ಬಿ. ಎಲ್. ಸಂತೋಷ್ ಸೂಚಿಸಿದ್ದಾರೆ.

ಸಂಘಟನಾ ವಿಷಯಗಳ ಕುರಿತು ಸಭೆ
author img

By

Published : Sep 20, 2019, 10:52 AM IST

Updated : Sep 20, 2019, 1:09 PM IST

ಬೆಂಗಳೂರು : ಏಕಾಏಕಿ ಪದಾಧಿಕಾರಿಗಳ ನೇಮಕ ಪಟ್ಟಿ ಬಿಡುಗಡೆ ಮಾಡದೇ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಸಂಘಟನಾತ್ಮಕವಾಗಿ ಪದಾಧಿಕಾರಿಗಳ ಸ್ಥಾನಕ್ಕೆ ನೇಮಿಸಿ ಎಂದು ಬಿಜೆಪಿ‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನಾ ವಿಷಯಗಳ ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳನ್ನ ನೇಮಿಸದಂತೆ ಬಿ ಎಲ್ ಸಂತೋಷ್ ಸೂಚಿಸಿದ್ದಾರೆ.

ಈ ಹಿಂದೆ ಕೆಜೆಪಿ ಮತ್ತು ಬಿಜೆಪಿ ಅಂತಾ ಭಿನ್ನಾಭಿಪ್ರಾಯ ಬಂದ ಹಿನ್ನೆಲೆ ಪದಾಧಿಕಾರಿಗಳ ನೇಮಕದಲ್ಲಿ ಅಸಮಾಧಾನ ಕೇಳಿ ಬಂದಿತ್ತು. ಪದಾಧಿಕಾರಿಗಳ ನೇಮಕದಲ್ಲಾದ ಪ್ರಮಾದ ಕಳೆದ ವಿಧಾನಸಭೆ ಹಾಗೂ ಸ್ಥಳೀಯ ಚುನಾವಣೆಗಳ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಈ ಬಾರಿಯ ಪದಾಧಿಕಾರಿಗಳ ನೇಮಕ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪದಾಧಿಕಾರಿಗಳನ್ನ ನೇಮಿಸುವಂತೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಬಿ ಎಲ್ ಸಂತೋಷ್ ಖಡಕ್‌ ಸೂಚನೆ ನೀಡಿದ್ದಾರೆ.

Intro:

ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಕೆಜೆಪಿ ಬಿಜೆಪಿ ಎಂದು ಎದುರಾಗಿದ್ದ ಬಣ ರಾಜಕೀಯ ಉದ್ಭವವಾಗಬಾರದು
ಏಕಾಏಕಿ ಪದಾಧಿಕಾರಿಗಳ ನೇಮಕ ಪಟ್ಟಿ ಬಿಡುಗಡೆ ಮಾಡದೇ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಸಂಘಟನಾತ್ಮಕ ಹಿನ್ನಲೆ ಪದಾಧಿಕಾರಿಗಳ ಸ್ಥಾನಕ್ಕೆ ನೇಮಿಸಿ ಎಂದು ಬಿಜೆಪಿ‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೂಚನೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್, ಸಂತೋಷ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನಾ ವಿಷಯಗಳ ಕುರಿತು ಸಭೆ ನಡೆಸಲಾಯಿತು.

ಸಭೆಯಲ್ಲಿ ಬಿಜೆಪಿ ಪದಾಧಿಕಾರಿಗಳ ನೇಮಕದಲ್ಲಿ ಈ ಹಿಂದೆ ನಡೆದ ಪ್ರಮಾದ ಮರುಕಳಿಸದ್ದಂತೆ‌ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದು,ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳನ್ನ ನೇಮಿಸದ್ದಂತೆ ಬಿ.ಎಲ್.ಸಂತೋಷ್ ಫರ್ಮಾನು ಹೊರಡಿಸಿದ್ದಾರೆ.

ಜಿಲ್ಲಾಧ್ಯಕ್ಷರು ಮತ್ತು ತಾಲ್ಲೂಕು ಅಧ್ಯಕ್ಷರ ನೇಮಕ ವೇಳೆ ಸ್ಥಳೀಯ ಶಾಸಕರು ಹಾಗೂ ಸಂಸದರ ಜೊತೆಗೆ ಚರ್ಚಿಸಿ ನೇಮಕಗೊಳಿಸಬೇಕು,ಸಂಘಟನಾತ್ಮಕ ಹಿನ್ನೆಲೆ ಪಕ್ಷದ ಕಾರ್ಯಕ್ರಮಗಳಿಗೆ ಸಮಯ ನೀಡುವ ನಾಯಕರಿಗೆ ಪದಾಧಿಕಾರಿಗಳ ನೇಮಕದಲ್ಲಿ ಪ್ರಾಧಾನ್ಯತೆ ನೀಡಬೇಕು.ಈ ಹಿಂದೆ ಕೆಜೆಪಿ ಮತ್ತು ಬಿಜೆಪಿ ಅಂತ ಭಿನ್ನಾಭಿಪ್ರಾಯ ಬಂದ ಹಿನ್ನೆಲೆ ಪದಾಧಿಕಾರಿಗಳ ನೇಮಕದಲ್ಲಿ ಅಸಮಧಾನ ಕೇಳಿ ಬಂದಿತ್ತು.ಪದಾಧಿಕಾರಿಗಳ ನೇಮಕದಲ್ಲಾದ ಪ್ರಮಾದ ಕಳೆದ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಗಳ ಮೇಲೆ ಪರಿಣಾಮ ಬೀರಿತ್ತು.ಹೀಗಾಗಿ ಈ ಭಾರಿಯ ಪದಾಧಿಕಾರಿಗಳ ನೇಮಕ ವೇಳೆ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಪದಾಧಿಕಾರಿಗಳ ನೇಮಿಸುವಂತೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸೂಚನೆ ನೀಡಿದ್ದಾರೆ.Body:.Conclusion:null
Last Updated : Sep 20, 2019, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.