ETV Bharat / state

ಪೇಜಾವರ ಶ್ರೀಗಳನ್ನು ನೆನೆದು ಕಂಬನಿ ಮಿಡಿದ ಬಿಜೆಪಿ ನಾಯಕರು - ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ

ಪೇಜಾವರ ಶ್ರೀ ವಿಶ್ವೇಶ ತೀರ್ಥರ ಅಗಲಿಕೆಗೆ ರಾಜ್ಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

BJP leaders condolence to Pejavara shri death
ಅಗಲಿದ ಪೇಜಾವರ ಶ್ರೀಗಳ ನೆನೆದು ಕಂಬನಿ ಮಿಡಿದ ಬಿಜೆಪಿ ನಾಯಕರು
author img

By

Published : Dec 29, 2019, 1:25 PM IST

ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ ತೀರ್ಥರ ಅಗಲಿಕೆಗೆ ರಾಜ್ಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಸಚಿವ ಆರ್. ಅಶೋಕ್ ಅವರು, ಪೇಜಾವರ ಶ್ರೀಗಳು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀಗಳ ನಿಧನದಿಂದ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

  • ಪೇಜಾವರ ಶ್ರೀ ವಿಶ್ವೇಶ ತೀರ್ಥರು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳುವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀ ಗಳ ನಿಧನ ನಮ್ಮ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟ.
    ಓಂ ಶಾಂತಿಃ. 🙏🙏

    — R Ashoka (@RAshokaBJP) December 29, 2019 " class="align-text-top noRightClick twitterSection" data=" ">

ಸದಾ ಸಮಾಜದ ಒಳಿತಿನ ಬಗ್ಗೆ ಕಾಳಜಿ ತೋರುತ್ತಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಹಿಂದು ಧರ್ಮಕ್ಕೆ ನೈತಿಕ ಸ್ಫೂರ್ತಿ ತುಂಬುತ್ತಿದ್ದ ಸೆಲೆಯಾಗಿದ್ದರು ಎಂದು ಸಚಿವ ಸುರೇಶ್ ಕುಮಾರ್ ಸ್ಮರಿಸಿದ್ದಾರೆ.

ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಇಹಲೋಕದಿಂದ ನಮ್ಮನ್ನೆಲ್ಲಾ ಅಗಲಿರುವುದು ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಕಂಬನಿ ಮಿಡಿದಿದ್ದಾರೆ.

  • ಉಡುಪಿ ಪರ್ಯಾಯದಲ್ಲಿ ಶ್ರೀ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯ ಆಗಿದ್ದಾರೆ. pic.twitter.com/Xi553vAtcW

    — K S Eshwarappa (@ikseshwarappa) December 29, 2019 " class="align-text-top noRightClick twitterSection" data=" ">

ಉಡುಪಿ ಪರ್ಯಾಯದಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ವಿಶ್ವೇಶ ತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯರಾಗಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಕಂಬನಿ ಮಿಡಿದಿದ್ದಾರೆ.

ಶ್ರೀಗಳನ್ನು ಕಳೆದುಕೊಂಡು ಈ ನಾಡು ತಬ್ಬಲಿಯಾಗಿದೆ. ಅವರು ನಡೆದು ಬಂದ ಹೆಜ್ಜೆ ನಮಗೆ ಸ್ಫೂರ್ತಿಯಾಗಬೇಕು. ಅವರ ನಡೆ ನುಡಿ ಜೀವನ ಶೈಲಿಯೇ ನಮ್ಮ ಮುಂದೆ ಬೆಳಕು ತೋರಬೇಕು ಎಂದು ಅಗಲಿದ ತೀರ್ಥರನ್ನು ಮಾಜಿ ಸಚಿವ ಸಿ.ಎಂ. ಉದಾಸಿ, ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್, ಗೃಹ ಸಚಿವ ಬಸವರಾಜ್​ ಬೊಮ್ಮಾಯಿ, ಸಚಿವ ಶ್ರೀರಾಮುಲು ಸೇರಿದಂತೆ ಇನ್ನಿತರ ನಾಯಕರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Intro:Body:KN_BNG_01_PEJAWARSREE_BJPLEADERS_SCRIPT_7201951

ಪೇಜಾವರ ಶ್ರೀಗಳ ನಿಧನ: ಕಂಬನಿ ಮಿಡಿದ ಬಿಜೆಪಿ ನಾಯಕರು

ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶ ತೀರ್ಥ ಅಗಲಿಕೆಗೆ ರಾಜ್ಯ ಬಿಜೆಪಿ ನಾಯಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ ಸಚಿವ ಆರ್.ಅಶೋಕ್, ಪೇಜಾವರ ಶ್ರೀಗಳು ಶ್ರೀ ಕೃಷ್ಣನಲ್ಲಿ ಲೀನರಾದ ವಿಷಯ ತಿಳಿದು ಮನಸ್ಸಿಗೆ ನೋವುಂಟಾಗಿದೆ. ರಾಮ ಮಂದಿರ ಚಳುವಳಿ, ಹಿಂದುತ್ವದ ಏಳಿಗೆಗಾಗಿ ಶ್ರಮಿಸಿದ ಶ್ರೀ ಗಳ ನಿಧನ ನಮ್ಮ ರಾಜ್ಯಕ್ಕೆ ಹಾಗೂ ಇಡೀ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಕಂಬನಿ ಮಿಡಿದಿದ್ದಾರೆ.

ಕೆ.ಎಸ್‌.ಈಶ್ವರಪ್ಪ ಸಂತಾಪ:

ಉಡುಪಿ ಪರ್ಯಾಯದಲ್ಲಿ ಶ್ರೀ ಶ್ರೀ ವಾದಿರಾಜ ಸ್ವಾಮಿಗಳ ನಂತರದಲ್ಲಿ 5 ಬಾರಿ ಪರ್ಯಾಯ ನಡೆಸಿದ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಸಂಖ್ಯ ಭಕ್ತರನ್ನು ಬಿಟ್ಟು ಕೃಷ್ಣನಲ್ಲಿ ಐಕ್ಯ ಆಗಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ಅಶ್ವತ್ಥ್ ನಾರಾಯಣ್ ಕಂಬನಿ:

ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಇಹಲೋಕದಿಂದ ನಮ್ಮನ್ನೆಲ್ಲಾ ಅಗಲಿರುವ ವಿಷಯ ತಿಳಿದು ಮನಸ್ಸಿಗೆ ಬಹಳ ನೋವು ತಂದಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಕಂಬನಿ ಮಿಡಿದಿದ್ದಾರೆ.

ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಇವರು ಕೈಗೊಂಡಿರುವ ಕಾರ್ಯಗಳು ಇಡೀ ದೇಶಕ್ಕೆ ಆದರ್ಶಪ್ರಾಯ. ಇವರ ಅಗಲಿಕೆ ಕೋಟ್ಯಾಂತರ ಭಕ್ತರಿಗೆ ತುಂಬಲಾರದ ನಷ್ಟ ಎಂದು ಟ್ವೀಟ್ ಮಾಡಿದ್ದಾರೆ.

ಸುರೇಶ್ ಕುಮಾರ್ ಕಂಬನಿ:

ನಾಡಿನ ಯತಿ ಶ್ರೇಷ್ಟರನ್ನು ಕಳೆದುಕೊಂಡಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಕಂಬನಿ ಮಿಡಿದಿದ್ದಾರೆ.

ಸದಾ ಸಮಾಜದ ಒಳಿತಿನ ಬಗ್ಗೆ ಕಾಳಜಿ ತೋರುತ್ತಿದ್ದ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು ಹಿಂದು ಧರ್ಮಕ್ಕೆ ನೈತಿಕ ಸ್ಪೂರ್ತಿ ತುಂಬುತ್ತಿದ್ದ ಸೆಲೆಯಾಗಿದ್ದರು. ಸ್ವಾಮೀಜಿಗಳನ್ನು ನಾನು ಕಂಡಾಗಲೆಲ್ಲ ನನ್ನ ಗಮನ ಸೆಳೆಯುತ್ತಿದ್ದದ್ದು ಆ ವಾಮನ ಮೂರ್ತಿಯಲ್ಲಿದ್ದ ತ್ರಿವಿಕ್ರಮ ಚೈತನ್ಯ ಎಂದು ಸ್ಮರಿಸಿದ್ದಾರೆ.

ವಿಶೇಷವಾಗಿ ಅಸ್ಪೃಶ್ಯತೆ ವಿರುದ್ಧ ಅವರು ಕೈಗೊಂಡ ನಿರಂತರ ಕಾರ್ಯ ಅವಿಸ್ಮರಣೀಯ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಬೇಕೆಂಬುದು ಮತ್ತು ರಾಮನ ಪೂಜೆ ತಾವು ಮಾಡಬೇಕೆಂಬುದು ಅವರ ಪ್ರಬಲ ಇಚ್ಛೆಯಾಗಿತ್ತು. ಅನೇಕ ವರ್ಷಗಳಿಂದ ಅವರನ್ನು ಅತ್ಯಂತ ಸನಿಹದಿಂದ ನೋಡಿ, ವಿವಿಧ ವಿಚಾರಗಳ ಕುರಿತು ಮಾತನಾಡಿ, ಆಶೀರ್ವಾದ ಪಡೆಯುವ, ಅವಕಾಶಗಳು ನನ್ನ ಪಾಲಿಗೆ ದೊರಕಿದ್ದು ನನ್ನ ಬಾಳಿನ ಸುಕೃತ ಎಂದು ಸ್ಮರಿಸಿದ್ದಾರೆ.

ಅವರ ಮಾತು ಮಿತ ಆದರೆ ಖಚಿತ. ಅದೆಷ್ಟೋ ಕಾರ್ಯಕ್ರಮಗಳಲ್ಲಿ ಅವರ ಮಾತುಗಳಿಂದ ನನಗೆ ಪ್ರೇರಣೆ ಸಿಕ್ಕಿದೆ. ಇನ್ನು ಶ್ರೀಗಳ ನೆನಪೇ ನಮಗೆ ಬೆಳಕು ತೋರಬೇಕು. ಯತಿಶ್ರೇಷ್ಟರಿಗೆ ನನ್ನ ಪ್ರಣಾಮಗಳು ಎಂದು ಕಂಬನಿ ಮಿಡಿದಿದ್ದಾರೆ.

ಬೊಮ್ಮಾಯಿ ಸಂತಾಪ:

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನವಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿಗಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ..

ದೇವರು ಸಕಲ ಭಕ್ತರಿಗೂ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಶ್ರೀರಾಮುಲು ಕಂಬನಿ:

ಶ್ರಿ ಶ್ರೀ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಶ್ರೀಕೃಷ್ಣನ ಜೊತೆಗೂಡಿದ್ದಾರೆ ಎಂದು ಸಚಿವ ಶ್ರೀರಾಮುಲು ಕಂಬನಿ ಮಿಡಿದಿದ್ದಾರೆ.

ಶ್ರೀಗಳ ದೇಹ ನಮ್ಮನ್ನು ಬಿಟ್ಟು ದೂರ ಹೋಗಿರಬಹುದೇ ಹೊರತು ಅವರ ವಿಚಾರಗಳನ್ನೆಲ್ಲ. ಅವರು ನಮ್ಮೆಲ್ಲರ ಮನೆ ಹಾಗೂ ಮನಗಳಲ್ಲಿ ಪೂಜ್ಯಭಾವನೆ ಯೊಂದಿಗೆ ಎಂದೆಂದಿಗೂ ನೆಲೆಸಿರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.