ಬೆಂಗಳೂರು: ಲಾಕ್ಡೌನ್ 5ನೇ ಹಂತಗಳಲ್ಲಿ ಸಡಲಿಕೆ ಆದರೂ ಕೆ.ಆರ್.ಪುರದ ಹೆಚ್ಎಎಲ್ ವಾರ್ಡಿನಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿ ನೆಲೆಸಿರುವ ಕಾರಣ ವಾರ್ಡ್ನ ಬಿಜೆಪಿ ಮುಖಂಡ ಮುನಿರಾಜ್, ಸಚಿವ ಬೈರತಿ ಬಸವರಾಜ್ ನೇತೃತ್ವದಲ್ಲಿ 3 ಸಾವಿರ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.
ಕಿಟ್ ವಿತರಿಸಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಅಂತರ ಕಾಯ್ದುಕೊಳ್ಳಬೇಕು, ಆರೋಗ್ಯದ ಮೇಲೆ ಎಚ್ಚರವಹಿಸಬೇಕು ಎಂದು ಹೇಳಿದರು.
ಕೊರೊನಾ ಸಂಕಷ್ಟದಿಂದ ಬಡವರು ಮನೆಯಲ್ಲಿಯೇ ಇರುವಂತಾಗಿದೆ, ಕೆಲಸವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈಗ ಕೆಲಸವಿಲ್ಲದೆ ಬಡವರ ಬದುಕು ದುಸ್ಥರವಾಗಿದೆ. ಸರ್ಕಾರ ಬಡವರ ಪರವಾಗಿ ಕೆಲಸ ಮಾಡುವ ಜೊತೆಗೆ ನಮ್ಮ ಮುಖಂಡರು ಆಹಾರ ಸಾಮಗ್ರಿಗಳಂತಹ ಕಿಟ್ ಗಳನ್ನು ಒದಗಿಸಿ ಬಡವರಿಗೆ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ಕೊರೊನಾದಿಂದ ಪಾರಾಗಲು ಮಾಸ್ಕ್, ಸ್ಯಾನಿಟೈಸರ್, ಸಾಬೂನು ಅಗತ್ಯವಾಗಿ ಬಳಸುವ ಮೂಲಕ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಬೇರೆ ರಾಜ್ಯಗಳಿಂದ ಬರುವ ಜನರಿಂದ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆರೋಗ್ಯ ಇಲಾಖೆ ಕೂಡ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರ ಆರೋಗ್ಯ ಕಡೆ ಗಮನಹರಿಸುತ್ತಿದೆ ಎಂದರು.
ಹೆಚ್ಎಎಲ್ ವಾರ್ಡ್ ಬಿಜೆಪಿ ಮುಖಂಡ ಮುನಿರಾಜು ಮಾತನಾಡಿ, ಕೊರೊನಾ ಆರಂಭದಿಂದಲೂ ಆಹಾರ ಸಾಮಗ್ರಿ ಹಾಗೂ ತರಕಾರಿ ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಚಿವ ಬೈರತಿ ಬಸವರಾಜ್ ಅವರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುತ್ತಿದ್ದೇವೆ. ಕೊರೊನಾದಿಂದಾಗಿ ಸಾರ್ವಜನಿಕರು ತೊಂದರೆಯಲ್ಲಿದ್ದಾರೆ. ಹೆಚ್ಎಎಲ್ ವಾರ್ಡಿನಲ್ಲಿ ಬಡವರಿಗೆ ಸಹಾಯ ಮಾಡಬೇನ್ನುವ ಉದ್ದೇಶದಿಂದ ಮೂರು ಸಾವಿರ ಕಿಟ್ ವಿತರಿಸುತ್ತಿದ್ದೇವೆ. ಇಲ್ಲಿಯವರೆಗೆ 5 ಸಾವಿರಕ್ಕೂ ಹೆಚ್ಚು ಜನರಿಗೆ ಕಿಟ್, ತರಕಾರಿ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜ್ಞಾನನಗರ ವಾರ್ಡ್ ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್, ಮುಖಂಡರಾದ, ಮಾರ್ಕೆಟ್ ರಮೇಶ್ ಅವರು ಬಡವರಿಗೆ ದಿನಸಿಯನ್ನು ನೀಡಿದರು.