ETV Bharat / state

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಬಿಜೆಪಿ ಹೈಕಮಾಂಡ್​​ನಿಂದ ನೋಟಿಸ್

ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪದೇ ಪದೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಡೆಗೂ ಹೈಕಮಾಂಡ್ ನೋಟಿಸ್ ನೀಡುವ ಧೈರ್ಯ ತೋರಿದೆ.

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್
author img

By

Published : Jan 16, 2023, 10:23 PM IST

ನನಗೆ ಯಾವುದೇ ನೋಟಿಸ್ ಬಂದಿಲ್ಲ : ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು/ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಹೋದ್ಯೋಗಿಯಾಗಿರುವ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು, 15 ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪದೇ ಪದೆ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಡೆಗೂ ಹೈಕಮಾಂಡ್ ನೋಟಿಸ್ ನೀಡುವ ಧೈರ್ಯ ತೋರಿದೆ. ಮೀಸಲಾತಿ ಹೋರಾಟದ ವಿಚಾರದಲ್ಲಿ ವೈಯಕ್ತಿಕ ವಿಷಯಗಳನ್ನು ಇರಿಸಿಕೊಂಡು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹಂತದಲ್ಲಿ ನಿರಾಣಿ ಅವರನ್ನು ಪಿಂಪ್ ಎನ್ನುವ ಪದ ಬಳಸಿ ಬಹಿರಂಗವಾಗಿ ಟೀಕಿಸಿದ್ದರು.

ಯತ್ನಾಳ್ ಅವರ ಈ ಹೇಳಿಕೆಗೆ ಬಿಜೆಪಿಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಸಚಿವರು, ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ರಾಜ್ಯ ಶಿಸ್ತು ಸಮಿತಿಯು ಯತ್ನಾಳ್ ವಿರುದ್ಧ ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆ ಇಂದು ಪಕ್ಷದ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯತ್ನಾಳ್​ಗೆ ನೋಟಿಸ್ ಜಾರಿಯಾಗಿದೆ.

ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿದೆ. ಪಕ್ಷದ ನಾಯಕರ ವಿರುದ್ಧ ನೀಡುತ್ತಿರುವ ತಮ್ಮ ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡುವಂತೆ ಫ್ಯಾಕ್ಸ್ ಮೂಲಕ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಜಾರಿ ಮಾಡುತ್ತಿರುವ ಮೂರನೇ ನೋಟಿಸ್ ಇದಾಗಿದೆ. 2019ರ ಅಕ್ಟೋಬರ್ ನಲ್ಲಿ ನೆರೆ ಪರಿಹಾರದ ಬಗ್ಗೆ ಯತ್ನಾಳ್ ಟೀಕೆ ಮಾಡಿದ್ದರು. ಆಗ ರಾಜ್ಯ ನಾಯಕರ ಒತ್ತಾಯದ ನಂತರ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. 2020 ರ ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಇದು ಪಕ್ಷ ಮತ್ತು ಸರ್ಕಾರವನ್ನ ಮುಜುಗರಕ್ಕೆ ಸಿಲುಕುವಂತೆ ಮಾಡಿತ್ತು. ಆಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಕೂಡ ಯತ್ನಾಳ್ ಟೀಕೆ ಮಾಡಿ ಹಗುರವಾದ ಮಾತುಗಳಿಂದ ತಿವಿದಿದ್ದರು. ಆಗಲೂ ಪಕ್ಷದ ಹೈಕಮಾಂಡ್ ಅಳೆದು ತೂಗಿ ನಂತರವೇ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ಬಾರಿಯೂ ಹೈಕಮಾಂಡ್ ಸಾಕಷ್ಟು ಸಮಯದ ನಂತರ ನೋಟಿಸ್ ನೀಡಿದೆ.

ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ: ಸಿಟಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದೆಲ್ಲ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಟೀಕೆ ಮಾಡಿದ್ದರೂ ಸುಮ್ಮನಿದ್ದ ಹೈಕಮಾಂಡ್ ಇದೀಗ ಪಿಂಪ್ ಸಚಿವ ಇದ್ದಾನೆ, ಅವನು ಪಿಂಪ್ ಕೆಲಸವನ್ನೇ ಮಾಡುವುದು, ಅವನ ಮಾತು ಕೇಳಿ ಯಡಿಯೂರಪ್ಪ ಹೋದ ಈಗ ಅವನ ಮಾತು ಕೇಳಿದರೆ ಬೊಮ್ಮಾಯಿಯವರೇ ನೀವೂ ಹೋಗುತ್ತೀರಿ ಎಂದಿದ್ದರು. ಪಿಂಪ್ ಪದ ಬಳಕೆ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡ ಅಸಮಾಧಾನಗೊಂಡಿದ್ದು, ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.

ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ: ಇದು ಮೂರನೇ ಬಾರಿ ನೀಡುತ್ತಿರುವ ನೋಟಿಸ್. ಆದರೆ, ಈ ಹಿಂದೆ ನೀಡಿದ್ದ ಎರಡು ನೋಟಿಸ್​ಗಳಿಗೆ ಯತ್ನಾಳ್ ಏನು ಉತ್ತರ ನೀಡಿದ್ದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಜಾರಿಯಾಗಿರಲಿಲ್ಲ. ಈ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಅವರನ್ನು ಕೇಳಿದರೆ ನೋಟಿಸ್ ನೀಡಲಾಗಿದೆ. ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಯತ್ನಾಳ್ ಮಾತ್ರ ನಾನು ಏನು ಉತ್ತರ ಕೊಡಬೇಕೋ ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಲೇ ರಾಜ್ಯದ ನಾಯಕರ ವಿರುದ್ಧ ಟೀಕೆ ಮುಂದುವರೆಸಿಕೊಂಡೇ ಬಂದಿದ್ದಾರೆ.

ಶೋಕಾಸ್ ನೋಟಿಸ್ ನೀಡುವುದಕ್ಕೆ ಸೀಮಿತ: ರಾಜ್ಯ ಬಿಜೆಪಿಯ ಅಗ್ರ ನಾಯಕ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲ್ ಸೇರಿದಂತೆ ರಾಜ್ಯದ ಯಾವೊಬ್ಬ ನಾಯಕರೂ ಯತ್ನಾಳ್ ವಿರುದ್ಧ ಗಟ್ಟಿ ನಿಲುವು ತಳೆಯುವ ಸಾಹಸ ಮಾಡಿಲ್ಲ, ಹೈಕಮಾಂಡ್ ಕೂಡ ಕಠಿಣ ಕ್ರಮದ ಎಚ್ಚರಿಕೆ ನೀಡದೆ ಶೋಕಾಸ್ ನೋಟಿಸ್ ನೀಡುವುದಕ್ಕೆ ಸೀಮಿತವಾಗಿದೆ. ಈ ಬಾರಿ ಯತ್ನಾಳ್ ಉತ್ತರ ಏನಾಗಿರಲಿದೆ, ಕೇಂದ್ರ ಶಿಸ್ತು ಸಮಿತಿ ಮುಂದೇನು ಮಾಡಲಿದೆ ಎನ್ನುವುದು ರಾಜ್ಯ ನಾಯಕರ ಕುತೂಹಲಕ್ಕೆ ಕಾರಣವಾಗಿದೆ.

ಉಪ್ಪು ತಿಂದಷ್ಟೇ ನೀರು ಕುಡಿಯಬೇಕು: ಇಂದು ಬೆಳಗ್ಗೆಯಷ್ಟೇ ಸಚಿವ ಅಶ್ವತ್ಥ್ ನಾರಾಯಣ್ ಯತ್ನಾಳ್ ವಿರುದ್ಧ ಶಿಸ್ತುಕ್ರಮದ ಸುಳಿವು ನೀಡಿದ್ದರು. ನಮ್ಮ ಪಕ್ಷ ಶಿಸ್ತಿನ ಪಕ್ಷ, ಪಕ್ಷದ ಶಿಸ್ತು ಮೀರಿದರೆ ಕ್ರಮ ತೆಗೆದುಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ. ಪಕ್ಷದ ಶಿಸ್ತು ಉಲ್ಲಂಘಿಸಿದರೆ ಏನಾಗಲಿದೆ ಎಂದು ನಮ್ಮ ಕಣ್ಣ ಮುಂದೆ ಇದೆ. ಹಾಗಾಗಿ ಶಿಸ್ತು ಬಿಟ್ಟರೆ ಈ ಪಕ್ಷದಲ್ಲಿ ಬೇರೇನು ಕಾಣುವುದಿಲ್ಲ, ಉಪ್ಪು ತಿಂದಷ್ಟೇ ನೀರು ಕುಡಿಯಬೇಕು ಎನ್ನುವ ಪ್ರಕೃತಿ ನಿಯಮ ಎಲ್ಲರಿಗೂ ಅನ್ವಯವಾಗಲಿದೆ ಎಂದಿದ್ದರು.

ಬಿಜೆಪಿಯಲ್ಲಿ ಪಕ್ಷವೇ ಎಲ್ಲಾ ಪಕ್ಷಕ್ಕಿಂತ ಮೇಲೆ ಯಾರು ಹೋಗಲು ಸಾಧ್ಯವಿಲ್ಲ. ಮೀರಿದವರು ಅದರದ್ದೇ ಆದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಈಗಾಗಲೇ ಪಕ್ಷ ಅಂಥವರಿಗೆ ಜಾಗವನ್ನು ತೋರಿಸಿದೆ. ಇವರ ವಿಚಾರದಲ್ಲಿಯೂ ಅದು ಆಗಲಿದೆ. ಎಲ್ಲದಕ್ಕೂ ಕಾಲ ಬರಬೇಕು ಎಂದಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಯತ್ನಾಳ್ ಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ.

ನನಗೆ ಯಾವುದೇ ನೋಟಿಸ್ ಬಂದಿಲ್ಲ( ವಿಜಯಪುರ): ಈ ನಡುವೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕೇಂದ್ರದಿಂದ ನೋಟಿಸ್​ ಜಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೆ ಊಹಾಪೋಹಾ ಹರಡಿಸಿದ್ದಾರೆ. ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

ಭ್ರಷ್ಟರು, ವಂಶಪಾರಂಪರ್ಯ ರಾಜಕೀಯ ಮುಂದುವರೆಸುವ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ನೋಟಿಸ್ ಯಾಕೆ ನೀಡಿಲ್ಲ ಅಂತಾ ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡುತ್ತಿದ್ದಾರೆ. ಈ ಹಿಂದೆ ವಾಜಪೇಯಿ ಅವರು ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ಆದರೆ, ನಾನು ಮೂರು ತಿಂಗಳಿಗೆ ಕೇಂದ್ರ ಮಂತ್ರಿಯಾದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೇ ಎಂದರು.

ಓದಿ: ಬಿಜೆಪಿ ಪಕ್ಷ ಯಾರಪ್ಪಂದಲ್ಲ, ಪಕ್ಷ ಬೆಳೆಸಿದವರು ನಾವು: ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.