ETV Bharat / state

ನಿಗಮ ಮಂಡಳಿಗಳ ನೇಮಕ ಕೋರ್​ ಕಮಿಟಿಯಲ್ಲಿ ಬಿಸಿಬಿಸಿ ಚರ್ಚೆ.. ನೋ ಕಮೆಂಟ್​​ ಎಂದ ಸಿಎಂ

ನಿಗಮ ಮಂಡಳಿ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ವಿಷಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ನಡುವೆ ವಾದ ಪ್ರತಿವಾದ ನಡೆದಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸದೆ ತೆರಳಿದ ಸಿಎಂ
author img

By

Published : Sep 6, 2019, 9:16 PM IST

ಬೆಂಗಳೂರು: ನಿಗಮ ಮಂಡಳಿಗಳಿಗೆ ನೇಮಕಾತಿ ಮತ್ತು ಅಧಿಕಾರಿಗಳ ವರ್ಗಾವಣೆ ವಿಷಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕೋರ್ ಕಮಿಟಿ ಸಭೆ ವೇಳೆ,‌ ನಿಗಮ-ಮಂಡಳಿ ಸದಸ್ಯರ ನೇಮಕಾತಿ ವಿಚಾರದಲ್ಲಿ ಏಕಾಏಕಿ ನೇಮಕಾತಿ ಮಾಡುವುದು ಬೇಡ ಎನ್ನುವ ವಿಷಯ ಪ್ರಸ್ತಾಪವಾಯಿತು. ಹೇಳಿದವರನ್ನೆಲ್ಲಾ ನೇಮಕಾತಿ ಮಾಡುವುದು ಬೇಡ, ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ನೇಮಕದ ವೇಳೆ ಪಕ್ಷದ ಜೊತೆ ಚರ್ಚಿಸಿ ಅಗಬೇಕು ಎಂದು ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ‌ ಒಪ್ಪದ ಸಿಎಂ, ಎಲ್ಲ ಆ ರೀತಿ ಮಾಡಲು ಆಗಲ್ಲ, ಶಾಸಕರು ಹೇಳಿದವರಿಗೆ ನೇಮಕಾತಿ ಮಾಡಲೇಬೇಕಾಗುತ್ತದೆ. ಜೊತೆಗೆ ನಮ್ಮ ಶಾಸಕರು ಇಲ್ಲದ ಕಡೆ ಏನು ಮಾಡೋದು ಹಾಗಾದರೆ. ನಾನು ನೇಮಕ ಮಾಡಬಾರದೇ ಎಂದು ಸಭೆಯಲ್ಲಿ ಖಾರವಾಗಿ ಹೇಳಿದರು ಎನ್ನಲಾಗಿದೆ.

ಪ್ರತಿಕ್ರಿಯಿಸದೆ ತೆರಳಿದ ಸಿಎಂ

ಬಿಎಸ್​​​ವೈ ಹೇಳಿಕೆಯಿಂದ ನಿಗಮ ಮಂಡಳಿ ವಿಷಯದ ಚರ್ಚೆ ನಿಲ್ಲಿಸಿದ ಸದಸ್ಯರು, ಅಧಿಕಾರಿಗಳ ವರ್ಗಾವಣೆ ವಿಚಾರ ಪ್ರಸ್ತಾಪಿಸಿದರು. ಸರ್ಕಾರ ಕೇವಲ ವರ್ಗಾವಣೆಯಷ್ಟೇ ಮಾಡುತ್ತಿದೆ ಎಂಬ ಮಾತುಗಳು ಹೊರಗೆ ಜಾಸ್ತಿ ಕೇಳಿ ಬರುತ್ತಿದೆ. ಕೇವಲ ವರ್ಗಾವಣೆ ಮಾತ್ರ ಅಲ್ಲ, ಜೊತೆಯಲ್ಲೇ ಅಭಿವೃದ್ಧಿ ಕೆಲಸಗಳು ಕೂಡಾ ಆಗಬೇಕು ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯತೆ ಪಾಲಿಸಲೇಬೇಕು ‌ಎಂದು‌ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಡಳಿತಾತ್ಮಕ ನಿರ್ಧಾರದ ವೇಳೆ ವರ್ಗಾವಣೆ ಸಹಜ, ಇದು ನಿರಂತರ ಪ್ರಕ್ರಿಯೆ ಎಂದು ತುಸು ಅಸಮಧಾನದಿಂದಲೇ ಉತ್ತರಿಸಿದ ಸಿಎಂ, ಪ್ರತಿಯೊಂದಕ್ಕೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ‌ ಕೆಲಸ ಮಾಡುವುದು ಎನ್ನುವ ಪ್ರಶ್ನೆಯೊಂದಿಗೆ ಕೋರ್ ಕಮಿಟಿ‌ ಸಭೆಯಿಂದ ನಿರ್ಗಮಿಸಿದರು ಎಂದು ತಿಳಿದುಬಂದಿದೆ.

ಆತುರ ಆತುರದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿಎಂ, ಸಭೆ ಮುಗಿಸಿ ಹೊರ ಬಂದಾಗ ಮಾಧ್ಯಮಗಳಿಗೆ‌ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ್ದೂ ಚರ್ಚೆಗೆ ಗ್ರಾಸ ಒದಗಿಸಿದೆ.

Intro:

ಬೆಂಗಳೂರು: ನಿಗಮ ಮಂಡಳಿಗಳಿಗೆ ನೇಮಕಾತಿ ಮತ್ತು ಅಧಿಕಾರಿಗಳ ವರ್ಗಾವಣೆ ವಿಷಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಕೋರ್ ಕಮಿಟಿ ಸಭೆ ವೇಳೆ‌ ಮೊದಲು ನಿಗಮ-ಮಂಡಳಿ ಸದಸ್ಯರ ನೇಮಕಾತಿ ವಿಚಾರದಲ್ಲಿ ಏಕಾಏಕಿ ನೇಮಕಾತಿ ಮಾಡುವುದು ಬೇಡ ಎಂದು‌ ಎನ್ನುವ ವಿಷಯ ಪ್ರಸ್ತಾಪವಾಯಿತು. ಹೇಳಿದವರನ್ನೆಲ್ಲಾ ನೇಮಕಾತಿ ಮಾಡುವುದು ಬೇಡ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ನೇಮಕಾತಿ ವೇಳೆ ಪಕ್ಷದ ಜೊತೆ ಚರ್ಚಿಸಿ ಅಗಬೇಕು ಎಂದು ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ‌ ಒಪ್ಪದ ಸಿಎಂ ಎಲ್ಲಾ ಆ ರೀತಿ ಮಾಡಲು ಆಗಲ್ಲ, ಶಾಸಕರು ಹೇಳಿದವರಿಗೆ ನೇಮಕಾತಿ ಮಾಡಲೇಬೇಕಾಗುತ್ತದೆ ಜೊತೆಗೆ ನಮ್ಮ ಶಾಸಕರು ಇಲ್ಲದ ಕಡೆ ಏನು ಮಾಡೋದು ಹಾಗಾದರೆ? ನಾನು ನೇಮಕ ಮಾಡಬಾರದೇ ಎಂದು ಸಭೆಯಲ್ಲಿ ಖಾರವಾಗಿ ಹೇಳಿದರು ಎನ್ನಲಾಗಿದೆ.

ಬಿಎಸ್ವೈ ಹೇಳಿಕೆಯಿಂದ ನಿಗಮ ಮಂಡಳಿ ವಿಷಯದ ಚರ್ಚೆ ನಿಲ್ಲಿಸಿದ ಸದಸ್ಯರು ಅಧಿಕಾರಿಗಳ ವರ್ಗಾವಣೆ ವಿಚಾರ ಪ್ರಸ್ತಾಪಿಸಿದರು. ಸರ್ಕಾರ ಕೇವಲ ವರ್ಗಾವಣೆಯಷ್ಟೇ ಮಾಡುತ್ತಿದೆ ಎಂಬ ಮಾತುಗಳು ಹೊರಗೆ ಜಾಸ್ತಿ ಕೇಳಿ ಬರುತ್ತಿದೆ
ಕೇವಲ ವರ್ಗಾವಣೆ ಮಾತ್ರ ಅಲ್ಲ, ಜೊತೆಯಲ್ಲೇ ಅಭಿವೃದ್ಧಿ ಕೆಲಸಗಳು ಕೂಡಾ ಆಗಬೇಕು ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯತೆ ಪಾಲಿಸಲೇಬೇಕು ‌ಎಂದು‌ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಆಡಳಿತಾತ್ಮಕ ನಿರ್ಧಾರದ ವೇಳೆ ವರ್ಗಾವಣೆ ಸಹಜ, ಇದು ನಿರಂತರ ಪ್ರಕ್ರಿಯೆ ಎಂದು ಸಿಎಂ ತುಸು ಅಸಮಧಾನದಿಂದಲೇ ಉತ್ತರಿಸಿದರು ಎಂದು ತಿಳಿದುಬಂದಿದೆ. ಪ್ರತಿಯೊಂದಕ್ಕೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ‌ ಕೆಲಸ ಮಾಡುವುದು ಎನ್ನುವ ಪ್ರಶ್ನೆಯೊಂದಿಗೆ ಸಿಎಂ ಬಿಎಸ್ವೈ ಕೋರ್ ಕಮಿಟಿ‌ ಸಭೆಯಿಂದ ನಿರ್ಗಮಿಸಿದರು ಎಂದು ತಿಳಿದುಬಂದಿದೆ.

ಆತುರ ಆತುರದಿಂದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಿಎಂ ಸಭೆ ಮುಗಿಸಿ ಹೊರ ಬಂದಾಗ ಮಾಧ್ಯಮಗಳಿಗೆ‌ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದ ಪರಿ ನೋಡಿದರೆ ಸಭೆಯಲ್ಲಿ ಖಾರವಾದ ಚರ್ಚೆ ನಡೆದಿರಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.