ETV Bharat / state

ಕಾರ್ಯಕರ್ತರ ಸಂಭ್ರಮಾಚರಣೆ....ಸರ್ಕಾರ ರಚಿಸಲು ಬಿಎಸ್​ವೈ ಪೂರ್ವಸಿದ್ಧತೆ

author img

By

Published : Jul 24, 2019, 10:10 AM IST

ಮೈತ್ರಿ ಸರ್ಕಾರ ಪತನವಾದ ಹಿನ್ನಲೆಯಲ್ಲಿ ಬಿಜೆಪಿ ಸರ್ಕಾರ ರಚನೆಯ ಉತ್ಸಾಹದಲ್ಲಿದೆ. ಈ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೊನಿಯ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಯಡಿಯೂರಪ್ಪ ಮನೆ ಮುಂದೆ ಕಾರ್ಯಕರ್ತರ ಸಂಭ್ರಮಾಚರಣೆ..ಸರ್ಕಾರ ರಚಿಸಲು ಬಿಎಸ್​ವೈ ಪೂರ್ವಸಿದ್ಧತೆ

ಬೆಂಗಳೂರು: ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆಯ ಉತ್ಸಾಹದಲ್ಲಿದ್ದು, ಡಾಲರ್ಸ್ ಕಾಲೋನಿಯ ಬಿ.ಎಸ್​.ಯಡಿಯೂರಪ್ಪ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇಂದು ಮುಂಜಾನೆ 6 ಗಂಟೆಯಿಂದಲೇ ಬೇರೆ ಬೇರೆ ಊರುಗಳಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಬಿಎಸ್​ವೈ ಅಭಿಮಾನಿಗಳು, ಶುಭಕೋರಲು ಹೂಗುಚ್ಛ, ಹೂವಿನ ಹಾರಗಳೊಂದಿಗೆ ಆಗಮಿಸಿದ್ದಾರೆ. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮ ಪಡುತ್ತಿದ್ದಾರೆ. ಬಿಎಸ್​ವೈ ಪುತ್ರ ವಿಜಯೇಂದ್ರ, ಶಾಸಕ ಮಾದುಸ್ವಾಮಿ, ಬೋಪಯ್ಯ ಹಾಗೂ ಮಾಜಿ ಶಾಸಕ ಜೀವರಾಜ್, ಸುರೇಶ್ ಗೌಡ, ಬಸವರಾಜ್ ಬೊಮ್ಮಾಯಿ ಆಗಮಿಸಿದ್ದಾರೆ.

ಯಡಿಯೂರಪ್ಪ ತಡರಾತ್ರಿ ರಮಡಾ ರೆಸಾರ್ಟ್​ನಿಂದ ತಮ್ಮ ಮನೆಗೆ ಆಗಮಿಸಿದ್ದು, ಎಂದಿನಂತೆ ಬೆಳಗಿನ ವಾಕಿಂಗ್ ಮಾಡದೆ, ಕಾರ್ಯಕರ್ತರನ್ನು ಭೇಟಿಯಾಗಲು ಸಿದ್ಧರಾಗುತ್ತಿದ್ದಾರೆ. ಇಂದು ಬಿಜೆಪಿ ಶಾಸಕಾಂಗ ಸಭೆ ಕರೆಯುವ ಸಾಧ್ಯತೆಯಿದ್ದು, ಸರ್ಕಾರ ರಚಿಸಲು ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Intro:kn_bng_02_bsy_home_7202707

Body:kn_bng_02_bsy_home_7202707

Conclusion:kn_bng_02_bsy_home_7202707

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.