ಬೆಂಗಳೂರು: ವಿಲಾಸಿ ಜೀವನಕ್ಕಾಗಿ ದ್ವಿಚಕ್ರ ವಾಹನಗಳನ್ನ ಕಳವು ಮಾಡುತ್ತಿದ್ದ ಆರೋಪಿಯನ್ನ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ.ಎನ್. ಕಿಶನ್ ಚೌಧರಿ ಬಂಧಿತ ಆರೋಪಿ.
ಜುಲೈ 9ರಂದು ವಿದ್ಯಾರಣ್ಯಪುರದ ಆರ್ಕೆಡ್ ಲೇಔಟಿನಲ್ಲಿ ಮನೆಯ ಗೇಟ್ ಒಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಆರೋಪಿ ಕದ್ದು ಪರಾರಿಯಾಗಿದ್ದ. ಕಳವು ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ 11 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ ಠಾಣೆಯ 4, ಯಶವಂತಪುರ, ಯಲಹಂಕ ನ್ಯೂಟೌನ್ ಠಾಣೆಯ ತಲಾ 2, ಅಮೃತಹಳ್ಳಿ, ಬಾಗಲೂರು, ಚಿಕ್ಕಜಾಲ, ಸುಬ್ರಮಣ್ಯನಗರ, ಸೋಲದೇವನಹಳ್ಳಿ ಠಾಣೆಯ ತಲಾ ಒಂದು ಪ್ರಕರಣಗಳು ಬಯಲಾಗಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಎ. ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಕಾಶ್ಮೀರಕ್ಕೆ ಬನ್ನಿ ಅಲ್ಲಿಂದ ಪಾಕ್ ಗಡಿಗೆ ಕರೆಸಿ ಹಣ, ತರಬೇತಿ, ಗನ್ ಕೊಡ್ತೇವೆ': ಶಂಕಿತ ಉಗ್ರರ ತನಿಖೆ