ETV Bharat / state

ಇಬ್ಬರು ಹೆಂಡತಿಯರ ಮುದ್ದಿನ ಗಂಡ... ಜೀವನ ನಿರ್ವಹಣೆಗೆ ಮಾಡ್ತಿದ್ದ ಖತರ್ನಾಕ್​ ಕೆಲಸ

ಬೆಂಗಳೂರಲ್ಲಿ ಇಬ್ಬರು ಹೆಂಡತಿಯರ ಮುದ್ದಿನ ಗಂಡನೋರ್ವ ಮಾಡಬಾರದ ಕೆಲಸ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜೀವನ ನಿರ್ವಹಣೆಗೆ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಈತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬೈಕ್​​ ಕಳ್ಳತನ
ಬೈಕ್​​ ಕಳ್ಳತನ
author img

By

Published : May 27, 2020, 2:31 PM IST

ಬೆಂಗಳೂರು: ಲಾಕೌಡೌನ್ ಸಂದರ್ಭದಲ್ಲಿ ಬೈಕ್​ಗಳನ್ನು ಕದ್ದು ತಲೆಮರೆಸಿಕೊಂಡಿದ್ದ ಖದೀಮನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 18 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಶಶಿಕುಮಾರ್ ಅಲಿಯಾಸ್ ಶಶಿ ಗುಂಡ ಬಂಧಿತ ಆರೋಪಿ. ಈತ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಡಿಫೆನ್ಸ್ ಕಾಲೋನಿ ಬಳಿ ಮೋಹನ್ ಎಂಬುವರ ಬೈಕ್​ ಅನ್ನು ಕದ್ದು ಪರಾರಿಯಾಗಿದ್ದ. ಈ ಸಂಬಂಧ ಬಾಗಲಗುಂಟೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು.

ಶಶಿಕುಮಾರ್​ನನ್ನು ವಿಚಾರಣೆ ನಡೆಸಿದಾಗ ಒಂದು ಬೈಕ್​ ಮಾತ್ರವಲ್ಲದೇ ಬೆಂಗಳೂರಿನಲ್ಲಿ ಒಟ್ಟು 18 ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತನಗೆ ಎರಡು ಮದುವೆ ಆಗಿವೆ. ಸಂಸಾರ ಸಾಗಿಸಲು ಹೆಚ್ಚು ಹಣ ಬೇಕಾದ ಕಾರಣ‌ ಕಳ್ಳತನ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಮೊದಲು ದೊಡ್ಡಬಳ್ಳಾಪುರ ಬಳಿ ಬೈಕ್ ಕಳ್ಳತನ ಮಾಡಿ ಜೈಲು ಸೇರಿ ಮತ್ತದೇ ಕೃತ್ಯವನ್ನು ಮುಂದುವರೆಸಿದ್ದಾನೆ. ಆರೋಪಿಯ ಬಂಧನದಿಂದ ಬಾಗಲಗುಂಟೆಯಲ್ಲಿ 9, ಮಾದನಾಯಕನಹಳ್ಳಿಯಲ್ಲಿ 3, ಆರ್​ಎಂಸಿ ಯಾರ್ಡ್​ನ 1 ಬೈಕ್​ ಸೇರಿದಂತೆ 18 ಬೈಕ್​ಗಳನ್ನು ಈತನಿಂದ ಜಪ್ತಿ ಮಾಡಲಾಗಿದೆ. ಈತನ ಜೊತೆ ಇದ್ದ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.