ETV Bharat / state

ಮದ್ಯದ ಗುಂಗಲ್ಲಿ ಬೈಕ್​ ಸವಾರಿ; ಹುಟ್ಟು ಹಬ್ಬದಂದೇ ಮಸಣ ಸೇರಿದ ಯುವಕ - Byadarahalli Police Station

ಗೆಳೆಯರೊಂದಿಗೆ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬೈಕ್​ನಲ್ಲಿ ತೆರಳುತ್ತಿದ್ದ ಯುವಕ ಅಪಘಾತವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

bike rider dies in a bike accident in Bangalore
ಬೆಂಗಳೂರಿನಲ್ಲಿ ಬೈಕ್​ ಅಪಘಾತವಾಗಿ ಬೈಕ್​ ಸವಾರ ಸಾವು
author img

By

Published : Feb 5, 2021, 9:55 PM IST

ಬೆಂಗಳೂರು: ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಬರುತ್ತಿದ್ದಾಗ ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೆ ಸವಾರ ಮೃತಪಟ್ಟಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌‌.

ಬೆಂಗಳೂರಿನಲ್ಲಿ ಬೈಕ್​ ಅಪಘಾತವಾಗಿ ಬೈಕ್​ ಸವಾರ ಸಾವು

ಹೆಗ್ಗನಹಳ್ಳಿ ನಿವಾಸಿ ತಿಲಕ್ ಸಾವನ್ನಪ್ಪಿದ ದುರ್ದೈವಿ. ಹಿಂಬದಿ ಸವಾರ ಸೂರ್ಯ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಿಲಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಂದು ತಿಲಕ್ ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರೆಲ್ಲರೂ ಒಟ್ಟುಗೂಡಿ ಪಾರ್ಟಿ ಮಾಡಿದ್ದಾರೆ‌. ಪಾರ್ಟಿ ಮುಗಿಸಿಕೊಂಡು ಕೆಂಗೇರಿಯಿಂದ ಬ್ಯಾಡರಹಳ್ಳಿ ಹೊಸ ರೋಡ್ ಕಡೆ ಬೈಕ್​ನಲ್ಲಿ ಬರುವಾಗ ಈ ಅವಘಡ ಸಂಭವಿಸಿದೆ.

ಬೈಕ್ ಓಡಿಸುವಾಗ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಮದ್ಯ ಸೇವಿಸಿ ಬೈಕ್ ಚಲಾಯಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.