ಬೆಂಗಳೂರು : ಬಿಗ್ ಬಾಸ್ ವಿನ್ನರ್ ಜೊತೆಗೆ ಕೃಷಿಕನಾಗಿರುವ ಶಶಿಕುಮಾರ್ ಇಂದು ಮೌರ್ಯಸರ್ಕಲ್‌ನಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ವಿವಾದಿತ ತಿದ್ದುಪಡಿಗಳ ವಿರುದ್ಧ ಧ್ವನಿಯೆತ್ತಿದರು.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನಾನೂ ರೈತರ ಜೊತೆಗೆ ನಿಂತುಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಪ್ರಜಾಪ್ರಭುತ್ವ ದೇಶದಲ್ಲಿ ಬಿಲ್ಗಳನ್ನು ಪಾಸ್ ಮಾಡುವಾಗ, ಚರ್ಚೆ ಮಾಡಬೇಕು. ಆಗು ಹೋಗುಗಳನ್ನು ಚರ್ಚೆ ಮಾಡಬೇಕು. ಆದರೆ, ಇಲ್ಲಿ ರೈತರು ಸುಮಾರು ದಿನದಿಂದ ಪ್ರತಿಭಟನೆ ಮಾಡಿದ್ರೂ ಅವರ ಪ್ರಶ್ನೆಗಳಿಗೆ ಉತ್ತರ ಕೊಡುವವರು ಇಲ್ಲವಾಗಿದೆ.
1963ರಲ್ಲಿ ಹಸಿರು ಕ್ರಾಂತಿಯಾದಾಗ, ರೈತರ ಆತ್ಮಹತ್ಯೆ ಜಾಸ್ತಿಯಾಯ್ತು. ಇವತ್ತು ಈ ಬಿಲ್ ಪಾಸ್ ಆಗಿ, ನೆಗೆಟಿವ್ ಆಗಿ ವರ್ಕ್ ಆದ್ರೆ ಮತ್ತೆ ರೈತರ ಆತ್ಮಹತ್ಯೆ ಜಾಸ್ತಿಯಾಗುತ್ತೆ. ಎಪಿಎಂಸಿ ಕಾಯ್ದೆಯಲ್ಲಿ ಮಧ್ಯವರ್ತಿಗಳು ಕಿರುಕುಳ ಕೊಟ್ಟ ಹಾಗೆ ಮುಂದೆ ಕಾರ್ಪೊರೇಟ್ ಕಂಪನಿಯವರು ಕಿರುಕುಳ ಕೊಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.