ETV Bharat / state

ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ ರಿಲೀಫ್: ಟಿಕೆಟ್ ಪಡೆಯದ ಪ್ರಯಾಣಿಕರಿಗೆ ಇನ್ಮೇಲೆ ಟೆನ್ಷನ್‌ - Tension for passengers who don't get tickets

ಬಿಎಂಟಿಸಿ ಎನ್​ಐಎನ್​ಸಿ ವ್ಯವಸ್ಥೆಯನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಈ ಪರಿಷ್ಕೃತ ನಿಯಮ ಮಾರ್ಚ್ 15 ರಿಂದ ಜಾರಿಯಾಗಲಿದೆ.‌ ಇದರನ್ವಯ ಇನ್ಮೇಲೆ ಪ್ರಯಾಣಿಕರೇ ಕಂಡಕ್ಟರ್​ನಿಂದ ಟಿಕೆಟ್​ ಕೇಳಿ ಪಡೆಯಬೇಕಾಗುತ್ತದೆ. ಒಂದು ವೇಳೆ ಟಿಕೆಟ್​ ಪಡೆಯದೇ ಸಿಕ್ಕಿ ಬಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

BMTC
ಬಿಎಂಟಿಸಿ
author img

By

Published : Mar 5, 2021, 7:14 PM IST

ಬೆಂಗಳೂರು: ನೀವು ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುತ್ತೀರಾ?, ಒಂದು ವೇಳೆ ಟಿಕೆಟ್​ ಪಡೆಯದೇ ಪ್ರಯಾಣಿಸಿದ್ರೆ ಇನ್ಮುಂದೆ ನಿಮಗೆ ದಂಡ ಬೀಳುವುದಂತೂ ಖಂಡಿತ. ಯಾಕಂದ್ರೆ, ಬಿಎಂಟಿಸಿ ಎನ್​ಐಎನ್​ಸಿ (Not Issued not collected) ವ್ಯವಸ್ಥೆಯನ್ನು ಪರಿಶೀಲಿಸಿ, ಪರ್ಯಾಯ ವ್ಯವಸ್ಥೆ ಜಾರಿ ಮಾಡಿದೆ.

BMTC
ಬಿಎಂಟಿಸಿ ಹೊಸ ಆದೇಶ

ಮೋಟಾರು ವಾಹನ ಕಾಯ್ದೆ 1988 ಮತ್ತು ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1989ರ ಅನ್ವಯ ಬಸ್​ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಂದ ನಿಗದಿತ ಟಿಕೆಟ್ ದರ ಪಡೆದು, ಟಿಕೆಟ್ ನೀಡುವುದು ಕಂಡೆಕ್ಟರ್ ಕೆಲಸವಾಗಿತ್ತು. ಅದೇ ರೀತಿ ಬಸ್​ನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ನಿಗದಿತ ಪ್ರಯಾಣದರ ನಿರ್ವಾಹಕರಿಗೆ ಪಾವತಿಸಿ ಟಿಕೆಟ್ ಪಡೆಯುವುದು ಪ್ರಯಾಣಿಕರ ಕರ್ತವ್ಯವೂ ಆಗಿತ್ತು.

ಆದ್ರೆ ಇನ್ಮುಂದೆ ಪ್ರಯಾಣಿಕರ ತಪ್ಪಿಗೆ ಕಂಡಕ್ಟರ್ಸ್ ಹೊಣೆಯಾಗಬೇಕಿಲ್ಲ. ಏಕೆಂದರೆ, ಪ್ರಯಾಣಿಕರೇ ಕಂಡೆಕ್ಟರ್ಸ್ ಬಳಿ ಇನ್ಮುಂದೆ ಟಿಕೆಟ್ ಪಡೆಯಬೇಕಾಗುತ್ತದೆ‌.

ಇದನ್ನೂ ಓದಿ: ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ; ಹಾಜರಾತಿ ಪ್ರಮಾಣ ಹೆಚ್ಚಿಸುವತ್ತ ಗಮನ

ಬಿಎಂಟಿಸಿ ಹೊಸ ನಿಯಮ ಜಾರಿ ಮಾಡಿದ್ದು, ಈ ನಿಯಮದಡಿ ಕಂಡಕ್ಟರ್ಸ್​ಗೆ ಸಂಪೂರ್ಣ ರಿಯಾಯತಿ ನೀಡಲಾಗಿದೆ. ಎನ್​ಐಎನ್​ಸಿ (Not Issued not collected) ವ್ಯವಸ್ಥೆಯನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ಪರಿಷ್ಕೃತ ನಿಯಮವೂ ಮಾರ್ಚ್ 15 ರಿಂದ ಜಾರಿಯಾಗಲಿದೆ.‌ ಈ ಮೂಲಕ ಅನಾವಶ್ಯಕ ಆದಾಯ ಸೋರಿಕೆ ತಪ್ಪಿಸಲು ಬಿಎಂಟಿಸಿ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.