ಬೆಂಗಳೂರು: ವಿವಿಧ ಫ್ಲೇವರ್ಗಳೊಂದಿಗೆ ಡುಮಾಂಟ್ ಎಂಬ ಹೆಸರಿನಲ್ಲಿ ಐಸ್ ಕ್ರೀಂ, ಮಿಲ್ಕ್ ಶೇಕ್‍ಗಳು ಮಾರ್ಕೆಟ್ಗೆ ಲಗ್ಗೆ ಇಟ್ಟಿದ್ದು, ಬಿಗ್ ಬಾಸ್ ಸ್ಪರ್ಧಿಗಳು ಇದರ ಸ್ವಾದಗಳನ್ನು ಸವಿದು ಸಂತಸ ಪಟ್ಟಿದ್ದಾರೆ.
ಸದ್ಯ ಮಾರ್ಕೆಟ್ನಲ್ಲಿ ರುಚಿಯಾದ ಹಾಗೂ ಸ್ವಚ್ಛವಾದ ಹಾಲಿನ ಪ್ಲೇವರ್ ಹೊಂದಿರುವ ಐಸ್ಕ್ರೀಮ್ಗಳ ಸಂಖ್ಯೆ ಕಮ್ಮಿ ಎಂದೇ ಹೇಳಬಹುದು. ಇದೀಗ ಆ ಸ್ಥಾನವನ್ನು ತುಂಬಲು ಹೊಸ ರುಚಿಯೊಂದಿಗೆ ಐಸ್‍ಕ್ರೀಮ್ ಮತ್ತು ಮಿಲ್ಕ್ ಶೇಕ್‍ಗಳೊಂದಿಗೆ ಮಾರುಕಟ್ಟೆಗೆ ಬಂದಿರುವ ಡುಮಾಂಟ್, ನೇರವಾಗಿ ರೈತರಿಂದ ಶೇಖರಿಸಿದ ಹಣ್ಣು, ಹಾಲಿನಿಂದ ಐಸ್‍ಕ್ರೀಮ್, ಮಿಲ್ಕ್ ಶೇಕ್ ತಯಾರಿಸಿ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.
ಬೆಂಗಳೂರಿನ ಕೋಡಿಹಳ್ಳಿಯ ಸ್ಟರ್‍ಲಿಂಗ್ ಮ್ಯಾಕ್ ಹೋಟೆಲ್‍ನಲ್ಲಿ ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮ್ಯೂಸಿಕ್ ವಿತ್ ಮಿಲ್ಕ್ ಶೇಕ್ ಹೆಸರಿನಲ್ಲಿ ನಡೆದ ವಿನೂತನ ಕಾರ್ಯಕ್ರಮ ಸಿಲಿಕಾನ್‌ಸಿಟಿ ಜನರನ್ನು ಆಕರ್ಷಿಸಿತು. ಇನ್ನು ಈ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಐಸ್ ಕ್ರೀಂ ಮತ್ತು ಮಿಲ್ಕ್ ಶೇಕ್ಗಳನ್ನು ಬಿಗ್ ಬಾಸ್ ಸ್ಪರ್ಧಿ, ನಟಿ ಕವಿತಾ ಮತ್ತು ಧನರಾಜ್ ಭಾಗಿದು, ಟೇಸ್ಟಿ ಐಸ್ ಕ್ರೀಂ ಸವಿದು ಖುಷಿಪಟ್ಟರು.
ಡುಮಾಂಟ್ ಐಸ್‍ಕ್ರೀಮ್ ಅಂಡ್ ಮಿಲ್ಕ್ ಶೇಕ್ ಪ್ರೀ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆ ಎಂಡಿ ಸುನೀಲ್ ಮಾತನಾಡಿ ದಕ್ಷಿಣ ಭಾರತದಲ್ಲಿ ಎಲ್ಲೂ ಸಿಗದ ಸುಮಾರು 15 ಬಗೆಯ ಪ್ಲೇವರ್‍ಗಳನ್ನು ಡುಮಾಂಟ್ ಪರಿಚಯಿಸುತ್ತಿದೆ. ಒಂದೆಡೆ ಐಸ್ ಕ್ರೀಮ್, ಮತ್ತೊಂದೆಡೆ ಮಿಲ್ಕ್ ಶೇಕ್ ಸಹ ತಯಾರಿಸುತ್ತಿರೋ ಸಂಸ್ಥೆಗಳು ಗುಣಮಟ್ಟ ಕಾಯ್ದುಕೊಳ್ತಿರೋ ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಡುಮಾಂಟ್ ಸಹ ಒಂದು. ರುಚಿ, ಶುಚಿ, ಕ್ವಾಲಿಟಿ, ಕ್ವಾಂಟಿಟಿ ವಿಷಯದಲ್ಲಿ ಎಳಷ್ಟೂ ರಾಜಿಯಾಗದೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು. ಬೆಂಗಳೂರು, ಹೈದರಾಬಾದ್ ಮತ್ತು ವಿಜಯವಾಡದಲ್ಲಿ ಇದೇ ತಿಂಗಳ 19 ರಿಂದ ಎಲ್ಲ ಸ್ಟೋರ್ಗಳಲ್ಲೂ ನಮ್ಮ ಉತ್ಪನ್ನಗಳು ಗ್ರಾಹಕರಿಗೆ ಸವಿಯಲು ಸಿಗಲಿದೆ ಎಂದಿದ್ದಾರೆ.