ಬೆಂಗಳೂರು: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ರಾಜೀನಾಮೆ ನೀಡ್ತೇನೆ ಅನ್ನೋದು ಸುಳ್ಳು ಎಂದು ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಅವರು, ನಾನು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವನು ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ರೀತಿಯ ನಿರಾಧಾರ ಸುದ್ದಿ ಯಾರೂ ನಂಬಬೇಡಿ. ಸುದ್ದಿ ಪ್ರಕಟಿಸುವ ಮುನ್ನ ಮಾಧ್ಯಮದವರು ಧೃಡಪಡಿಸಿಕೊಳ್ಳಿ ಎಂದು ಟ್ವೀಟರ್ ನಲ್ಲಿ ಶಾಸಕ ಭೀಮಾನಾಯ್ಕ ತಿಳಿಸಿದ್ದು, ತಮ್ಮ ರಾಜೀನಾಮೆ ಸಾಧ್ಯತೆ ತಳ್ಳಿಹಾಕಿದ್ದಾರೆ.
![Bhimanayaka](https://etvbharatimages.akamaized.net/etvbharat/prod-images/kn-bng-03-bheema-naik-tweet-script-9020923_01072019131435_0107f_1561967075_890.jpg)